*ಸರಕಾರಿ ಪ್ರೌಢ ಶಾಲೆ ಶಿವಾಪುರಕ್ಕೆ ಸಮಗ್ರ ವೀರಾಗ್ರಣಿ ಪ್ರಶಸ್ತಿ*
ಮೂಡಲಾಗಿ : ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸರಕಾರಿ ಪ್ರೌಢ ಶಾಲೆ ಶಿವಾಪುರ (ಹ) ಮೂಡಲಗಿ ವಲಯದಲ್ಲಿಯೇ ಅತೀ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡು ಉತ್ತಮ ಸಾಧನೆ ಮೆರೆದಿದೆ. ವೈಯಕ್ತಿಕ ವಿಭಾಗದಲ್ಲಿ ಕಾವೇರಿ ಮುತ್ತಪ್ಪ ಬಿ ಪಾಟೀಲ ಉದ್ದ ಜಿಗಿತ, 100ಮೀಟರ್ ಓಟ, 100ಮೀಟರ್ ಹರ್ಡೆಲ್ಸದಲ್ಲಿ ಪ್ರಥಮ ಸ್ಥಾನ ಪಡೆದು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡು ಶಾಲೆಗೆ ಕೀರ್ತಿ ತಂದಿದ್ದಾರೆ.ಬಾಲಕಿಯರ 4×100ಮೀಟರ್ ರಿಲೇ ಪ್ರಥಮ, ಖೋ ಖೋ ಪ್ರಥಮ,ತನು ಗದಾಡಿ ಬಾಲಕಿಯರ ವಿಭಾಗದ 3000ಮೀಟರ್ ಓಟ ಪ್ರಥಮ ಮತ್ತು 1500ಮೀಟರ್ ಓಟದಲ್ಲಿ ದ್ವಿತೀಯ, ಪ್ರದೀಪ್ ಬಿ ಪಾಟೀಲ 5km ವೇಗ ನಡಿಗೆಯಲ್ಲಿ ಪ್ರಥಮ,ನವೀನ ಗೋಲಬಾವಿ 800ಮೀಟರ್ ಓಟ ಪ್ರಥಮ ,100ಮೀಟರ್ ಓಟ ಮತ್ತು 200ಮೀಟರ್ ಓಟದಲ್ಲಿ ಶಂಭ ಕುಂದರಗಿ ದ್ವಿತೀಯ, ಬಾಲಕರ ಖೋ ಖೋ ದ್ವಿತೀಯ, ಬಾಲಕಿಯರ ಕಬಡ್ಡಿ ದ್ವಿತೀಯ,ಬಾಲಕರ ಮತ್ತು ಬಾಲಕಿಯರ ಥ್ರೋ ಬಾಲ್ ದ್ವಿತೀಯ, ತೇಜಸ್ವಿನಿ ಗಿರೆನ್ನವರ ಜಾವಲಿನ್ ತೃತೀಯ,ಗುರು ಮುಧೋಳ 5km ವೇಗ ನಡಿಗೆ ತೃತೀಯ . ಸಾಧನೆಗೈದ ಎಲ್ಲ ವಿದ್ಯಾರ್ಥಿಗಳನ್ನು ಊರಿನ ಗ್ರಾಮಸ್ಥರು, ಎಸ್ ಡಿ ಎಂ ಸಿ , ಮುಖ್ಯೋಪಾಧ್ಯಾಯರು, ದೈಹಿಕ ಶಿಕ್ಷಕ ಕೆ ಎಚ್ ಪಾಟೀಲ್, ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.