Breaking News
Home / ಬೆಳಗಾವಿ / ಸೆ.3ರಂದು ಬೆಟಗೇರಿಯಲ್ಲಿ ಅನ್ನಪ್ರಸಾದ ಮತ್ತು ರಸಮಂಜರಿ ಹಾಗೂ ಹಾಸ್ಯ ಕಾರ್ಯಕ್ರಮ

ಸೆ.3ರಂದು ಬೆಟಗೇರಿಯಲ್ಲಿ ಅನ್ನಪ್ರಸಾದ ಮತ್ತು ರಸಮಂಜರಿ ಹಾಗೂ ಹಾಸ್ಯ ಕಾರ್ಯಕ್ರಮ

Spread the love

ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀ ಗಜಾನನ ಯುವಕ ಮಂಡಳದವರು ಸ್ಥಳೀಯ ಮಾರುಕಟ್ಟೆ ಕೇಂದ್ರ ಸ್ಥಳದಲ್ಲಿ ಪ್ರತಿಷ್ಠಾಪಿಸಿದ ಗಣಪತಿ ಮೂರ್ತಿ ಪ್ರಯುಕ್ತ ಸೆ.3ರಂದು ಸಾಯಂಕಾಲ 6ಗಂಟೆಗೆ ಸಕಲರಿಗೂ ಅನ್ನಪ್ರಸಾದ ಕಾರ್ಯಕ್ರಮ, ರಾತ್ರಿ 9 ಗಂಟೆಗೆ ಬಗರನಾಳದ ಸ್ನೇಹಜೀವಿ ಮೇಲೋಡಿಸ್ ಆರ್ಕೆಸ್ಟ್ರಾ ಇವರಿಂದ ರಸಮಂಜರಿ ಹಾಗೂ ಹಾಸ್ಯ ಕಾರ್ಯಕ್ರಮ ಇಲ್ಲಿಯ ಓಕಳಿ ಕೊಂಡದ ಶ್ರೀ ಗಜಾನನ ವೇದಿಕೆ ಮೇಲೆ ನಡೆಯಲಿದೆ.

ಆ.27ರಿಂದ ಸತತ 11 ದಿನಗಳ ಕಾಲ ಮುಂಜಾನೆ-ಸಂಜೆ ಸಮಯ ಪ್ರತಿಷ್ಠಾಪಿಸಿದ ಶ್ರೀ ಗಜಾನನ ಮೂರ್ತಿ, ಶ್ರೀಫಲಗಳು ಸಕಲ ಪೂಜೆ, ಪುನಸ್ಕಾರದಿಂದ ಪೂಜಿಸಲ್ಪಟ್ಟಿದ್ದು, ಸೆ.6ರಂದು ರಾತ್ರಿ 10ಗಂಟೆಗೆ ಗಣೇಶ ಮೂರ್ತಿ ವಿಸರ್ಜನೆ ಸಡಗರದಿಂದ ಜರುಗಲಿದೆ. ಸ್ಥಳೀಯರು ಸಂಗೀತ- ರಸಮಂಜರಿ ಮತ್ತು ಹಾಸ್ಯ ಕಾರ್ಯಕ್ರಮ ಹಾಗೂ ಗಣೇಶನ ವಿಸರ್ಜನೆ ಕಾರ್ಯಕ್ರಮದಲ್ಲಿ ಶಾಂತಿ-ಸೌಹಾರ್ದತೆಯಿಂದ ಸಹಕರಿಸಬೇಕು ಎಂದು ಇಲ್ಲಿಯ ಶ್ರೀ ಗಜಾನನ ಯುವಕ ಮಂಡಳ ತಿಳಿಸಿದೆ.

 


Spread the love

About inmudalgi

Check Also

ಬಸವರಾಜ ಪಾಟೀಲ ರಾಜ್ಯ ಮಟ್ಟದ ಗುಂಡು ಎಸೆತ ಸ್ಪರ್ಧೆಗೆ ಆಯ್ಕೆ

Spread the love ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಎಸ್.ವೈ.ಸಿ ಶಿಕ್ಷಣ ಸಂಸ್ಥೆಯ ಶ್ರೀ ಸದ್ಗುರು ಯಾಲ್ಲಾಲಿಂಗ ಸ್ವತಂತ್ರ ಪದವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ