ಮೂಡಲಗಿ : ಸ್ಥಳೀಯ ಲಕ್ಷ್ಮಣ ಅಡಿಹುಡಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ವಿದ್ಯಾರ್ಥಿಗಳ ಪುರುಷ ವಿಭಾಗದಲ್ಲಿ ಕ್ರಿಕೆಟ್ ಮತ್ತು ಪುರುಷ ಹಾಗೂ ಮಹಿಳಾ ಹಾಕಿ ತಂಡವು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕ್ಷೇತ್ರ ಶಿಕ್ಷಣ ಅಧಿಕಾರಿ ರೇಣುಕಾ ಆನಿ ದೈಹಿಕ ಶಿಕ್ಷಣ ಪರಿವೀಕ್ಷಕರು ಶಿವಪ್ಪ ಬಿ ಹಳೀಗೌಡರ್ ಅಧ್ಯಕ್ಷ ಶ್ರೀಮತಿ ಮಹಾದೇವಿ ಅಡಿಹುಡಿ ಪ್ರದಾನ ಕಾರ್ಯದರ್ಶಿ ಗೀತಾ ಕೊಡಗನೂರ ನ್ಯಾಯವಾದಿ ಯಲ್ಲಪ್ಪ ಖಾನಟ್ಟಿ ಮುಖ್ಯೋಪಾಧ್ಯಯ ಶಿಲ್ಪಾ ಗಡಾದ್ ಶಾಲಾ ಆಡಳಿತ ಅಧಿಕಾರಿ ರವಿ ಕರಿಗಾರ ಶಾಲಾ ದೈಹಿಕ ಶಿಕ್ಷಕರಾದ ಸಚಿನ ಕಾಂಬಳೆ ರುಕ್ಮಿಣಿ ಶಿವಾಪುರ ಬಿ ಬಿ ಮಾಕಂದರ ಕೌಶಲ್ಯ ಖವಾಸಿ ಶ್ಯಾಮಲಾ ಖಾನಟ್ಟಿ ಸವಿತಾ ಕಂಕಣವಾಡಿ ಲಕ್ಷ್ಮಿ ಟಪಾಲ್ ಶೋಭಾ ಕೇರಪ್ಪನವರ್ ಯಲ್ಲವ್ವ ಮಂಟೂರ್ ಹಾಗೂ ಶಾಲಾ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.
