ಬೆಟಗೇರಿ:ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಸನ್ 2024-25ನೇಯ ಸಾಲಿನ ವಾರ್ಷಿಕ ಸರ್ವ ಸಾಧಾರಣ ಮಹಾಸಭೆಯನ್ನು ಸಂಘದ ಕಾರ್ಯಾಲಯದಲ್ಲಿ ಸಂಘದ ಅಧ್ಯಕ್ಷ ಬಸವಂತ ಕೋಣಿ ಅಧ್ಯಕ್ಷತೆಯಲ್ಲಿ ಸೆ.11ರಂದು ಮುಂಜಾನೆ 11 ಗಂಟೆಗೆ ನಡೆಯಲಿದೆ.
ಸಂಘದ ವಾರ್ಷಿಕ ಆಯಾ-ವ್ಯಯ ಅನುಮೋದನೆ, ನಿವ್ಹಳ ಲಾಭಗಳ ವಿಂಗಡನೆ, ಕಾರ್ಯ ಚಟುವಟಿಕೆಗಳ ಅನುಮೋದನೆ, ವಾರ್ಷಿಕ ವರದಿ ಸೇರಿದಂತೆ ಸಂಘದ ಸಮಗ್ರ ಪ್ರಗತಿಗಾಗಿ ಹಲವಾರು ವಿಷಯಗಳನ್ನು ಚರ್ಚಿಸಲಿದ್ದು, ಸಂಘದ ಆಡಳಿತ ಮಂಡಳಿ ಸದಸ್ಯರು, ಸರ್ವ ಸದಸ್ಯರು, ಗ್ರಾಹಕರು ಈ ವಾರ್ಷಿಕ ಮಹಾಸಭೆಯಲ್ಲಿ ಹಾಜರಿರಬೇಕೆಂದು ಸಂಘದ ಮುಖ್ಯಕಾರ್ಯನಿರ್ವಾಹಕ ಅಡಿವೆಪ್ಪ ಮುರಗೋಡ ತಿಳಿಸಿದ್ದಾರೆ.