ಮೂಡಲಗಿ : ನಮ್ಮ ಭಾರತ ದೇಶದ ಪ್ರಜಾಪ್ರಭುತ್ವದ ಆಡಳಿತ ಪ್ರಕ್ರಿಯೆಯಲ್ಲಿ ಪರಿಪೂರ್ಣ ಜ್ಞಾನ ಇಂದಿನ ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದ್ದು ನಮ್ಮ ದೇಶ ವಿಶ್ವದಲ್ಲೇ ಬಲಾಡ್ಯವಾದ ಸಂವಿದಾನ ಹೊಂದಿದ್ದು ಸಂವಿದಾನದ ಅಡಿಯಲ್ಲಿ ರಾಜಕೀಯ ಆಡಳಿತ ಚಟುವಟಿಕೆಗಳು ಜರಗುತ್ತಿದ್ದು ಆಡಳಿತ ದೇಶದ ಸಮಗ್ರತೆಯ ಬೆಳವಣಿಗೆಯ ಮೇಲೆ ಪ್ರಭಾವ ಬೀರುವದರಿಂದ ಆಡಳಿತದ ಮಹತ್ವ ರಾಜಕೀಯ ವಾಸ್ತವಿಕ ರೂಪರೇಷಗಳನ್ನು ವಿದ್ಯಾರ್ಥಿಗಳ ಮೂಲಕ ಅರಿವು ಮೂಡಿಸುವದು ಇಂದಿನ ಅಗತ್ಯವಾಗಿದೆ ಎಂದು ಮೂಡಲಗಿಯ ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಜಿ.ಎಸ್. ಮನ್ನಾಪೂರ ಹೇಳಿದರು.
ಪಟ್ಟಣದ ಆರ್.ಡಿ.ಎಸ್. ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಆಯೋಜಿಸಿದ ಅಣುಕು ಯುವ ಸಂಸತ್ತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ರಾಜಕೀಯ ರಂಗದಲ್ಲಿ ಸಾಕ್ಷರವಂತ ಯುವಕರು ತೊಡಗಿಕೊಂಡು ದೇಶದ ಆಡಳಿತವನ್ನು ಡಾ.ಬಿ.ಆರ್.ಅಂಬೇಡ್ಕರರವರ ಆಶಯದಂತೆ ಸುಭದ್ರಗೊಳಿಸುವುದು ಅಗತ್ಯವಾಗಿದ್ದು ಈ ದೃಷ್ಟಿಯಲ್ಲಿ ನಮ್ಮ ದೇಶದ & ರಾಜ್ಯದ ಚುನಾವಣಾ ಆಯೋಗಗಳು ಅನೇಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ರೂಪಿಸಿ ಆಯೋಜನೆ ಮಾಡಿ ವಿದ್ಯಾರ್ಥಿಗಳ ಮೂಲಕ ಅರಿವು ಮೂಡಿಸುವುದು ಒಳ್ಳೆಯ ಚಿಂತನೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಅಭಿಷೇಕ ಮಠದ ಮಾತನಾಡುತ್ತಾ ರಾಜಕೀಯ ರಂಗದಲ್ಲಿ ಇರುವ ಕಾನೂನು ನಿಬಂಧನೆಗಳು ಮತ್ತು ನಾಯಕತ್ವದಲ್ಲಿನ ಜವಾಬ್ದಾರಿಗಳು ಹಾಗೂ ಆಡಳಿತದಲ್ಲಿ ನಡೆಯುವ ಚರ್ಚೆಗಳ ಮಹತ್ವ ನಮ್ಮಂತಹ ಯುವಕರಿಗೆ ಇಂತಹ ಕಾರ್ಯಕ್ರಮಗಳು ಸ್ಪೂರ್ತಿ ನೀಡುತ್ತೇವೆ ಎಂದರು.
ವಿದ್ಯಾರ್ಥಿನಿ ಸುಕನ್ಯಾ ಇಟ್ನಾಳ ಮಾತನಾಡಿ ರಾಜಕೀಯ ಆಡಳಿತ ನಡೆಸುವದರಲ್ಲಿ ಆಡಳಿತ ಮತ್ತು ವಿರೋದ ಪಕ್ಷದವರ ಪಾತ್ರ ಮತ್ತು ಅದರಲ್ಲಿ ಭಾಗವಹಿಸುವದರಿಂದ ಜವಾಬ್ದಾರಿಯಿಂದ ಆಡಳಿತ ನಿಭಾಯಿಸುವ ರಾಜಕೀಯ ತಂತ್ರಗಳ ಅರಿವು ನಮಗೆ ದೊರಕುತ್ತದೆ ಎಂದರು.
ಅಣುಕು ಯುವ ಸಂಸತ್ತಿನಲ್ಲಿ ವಿದ್ಯಾರ್ಥಿಗಳಾದ ಶ್ರೀನಿವಾಸ ಬಡಿಗೇರ. ಸಭಾಧ್ಯಕ್ಷರಾಗಿ, ಅಭಿಷೇಕ ಮಠದ ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರಾಗಿ ಸುಕನ್ಯಾ ಇಟ್ನಾಳ, ರಾಜ್ಯಪಾಲರಾಗಿ ಪ್ರವೀಣ ನಿರುಗ್ಗಿ ಅಧಿಕಾರ ಚಲಾಯಿಸಿದರು ಆಡಳಿತ ಮತ್ತು ವಿರೋಧ ಪಕ್ಷದ ವಿವಿಧ ಖಾತೆಗಳ ಜವಾಬ್ದಾರಿಯನ್ನು ವಿದ್ಯಾರ್ಥಿಗಳು ವಹಿಸಿಕೊಂಡು ಪ್ರಶ್ನೆ ಚರ್ಚೆ ಹಾಗೂ ಪ್ರಮಾಣ ವಚನ ಸ್ವೀಕಾರ ಚಟುವಟಿಕೆಗಳು ಜರುಗಿ ಸಂವಿದಾನದನ್ವಯ ವಿದಾನಸಭೆಯಲ್ಲಿ ನಡೆಯುವ ಚರ್ಚೆಗಳಂತೆ ವಿದ್ಯಾರ್ಥಿಗಳು ಭಾಗವಹಿಸಿ ಆಡಳಿತದ ಪ್ರಾತ್ಯಕ್ಷಿಕೆಯನ್ನು ಪಡೆದು ಕೊಂಡರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಶಿವಾನಂದ ಸತ್ತಿಗೇರಿ ಉಪನ್ಯಾಸಕರಾದ ಸಂಗಮೇಶ ಕುಂಬಾರ ಎಂ.ಬಿ. ಸಿದ್ನಾಳ ರವಿ ಕಟಗೇರಿ, ಎಸ್.ಬಿ.ಬೆಳವಿ. ವೆಂಕಟೇಶ ಹೆಳವರ, ಬಿ.ಎಂ ಕಬ್ಬೂರೆ, ಸವಿತಾ ಪಡದಲ್ಲಿ ವಿದ್ಯಾಶ್ರೀ ಜುಗಳ ಜಿ.ಎಚ್. ಕಡಪಟ್ಟಿ ಹಾಜರಿದ್ದರು.