Breaking News
Home / ಬೆಳಗಾವಿ / ಬಸವಾದಿ ಶಿವಶರಣ ಹೂಗಾರ ಮಾದಯ್ಯನವರ ಜಯಂತ್ಯೋತ್ಸವವ ಅರ್ಥ ಪೂರ್ಣವಾಗಿ ಆಚರಣೆ

ಬಸವಾದಿ ಶಿವಶರಣ ಹೂಗಾರ ಮಾದಯ್ಯನವರ ಜಯಂತ್ಯೋತ್ಸವವ ಅರ್ಥ ಪೂರ್ಣವಾಗಿ ಆಚರಣೆ

Spread the love

ಮೂಡಲಗಿ: ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ಸಹಯೋಗದಲ್ಲಿ ಬಸವಾದಿ ಶಿವಶರಣ ಹೂಗಾರ ಮಾದಯ್ಯನವರ ಜಯಂತ್ಯೋತ್ಸವವನ್ನು ಘಟಪ್ರಭಾದ ಶ್ರೀ ಹನುಮಾನ ಮಂದಿರದಲ್ಲಿ ಅರ್ಥ ಪೂರ್ಣವಾಗಿ ಆಚರಿಸಲಾಯಿತು.

ಇಂದಿನ ಪ್ರಸ್ತುತ ಸಮಾಜದಲ್ಲಿ ದೇವರು, ಭಕ್ತಿ, ಆಧ್ಯಾತ್ಮಿಕ ಪ್ರಧಾನ ಸಮುದಾಯಕ್ಕೆ ಹೂಗಾರ ಸಮಾಜದ ಕೊಡುಗೆ ಅಪಾರವಾಗಿದೆ. ಹೂಗಾರಮಾದಯ್ಯನವರ ವಿನಯ, ಸಭ್ಯತೆ ಹಾಗೂ ನಿಸ್ವಾರ್ಥ ಕಾಯಕವನ್ನು ಎಲ್ಲರೂ ಬೆಳೆಸಿಕೊಂಡು ಹೋಗಬೇಕೆಂದು ಸಾನಿಧ್ಯ ವಹಿಸಿದ್ದ ಗುಬ್ಬಲಗುಡ್ಡ ಕೆಂಪಯ್ಯ ಸ್ವಾಮಿ ಮಠದ ಶ್ರೀ ಮ.ನಿ.ಪ್ರ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡಿದರು.
ಹೊಸ ಮಠದ ಪೂಜ್ಯ ಶ್ರೀ ವಿರೂಪಾಕ್ಷ ಮಹಾಸ್ವಾಮಿಗಳವರು ಮಾತನಾಡಿ
ಹೂಗಾರ ಸಮಾಜದ ಎಲ್ಲಾ ಸದಸ್ಯರು ಸಹಕಾರ ಸಹಬಾಳ್ವೆಯಿಂದ ಆದರ್ಶ ಬದುಕು ಸಾಗಿಸುತ್ತಿದ್ದಾರೆ ಅವರಿಗೆ ಶುಭವಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಅತಿಥಿ ಉಪನ್ಯಾಸಕರಾಗಿ ಮಾತನಾಡಿದ ಚುಟುಕು ಸಾಹಿತ್ಯ ಪರಿಷತ್ತು ಮೂಡಲಗಿ ಘಟಕದ ಅಧ್ಯಕ್ಷರಾದ ಶ್ರೀ ಚಿದಾನಂದ ಮ ಹೂಗಾರ ರವರು ಹೂಗಾರ,ಗುರವ,ಪೂಜಾರ ಮತ್ತು ಜೀರ ಸಮುದಾಯದ ಜನರು ಹೂ,ಪತ್ರಿ ನೀಡುವ ನಿಷ್ಕಾಮ ಕಾಯಕದ ಜೊತೆಗೆ ಹೂಗಾರ ಸಮಾಜದ ಪಿಳಿಗಗೆ ಶಿಕ್ಷಣ ಅವಶ್ಯಕವಾಗಿದೆ. ಮಠ ಮಂದಿರಗಳ ಪೂಜೆಯ ಜೊತೆಗೆ ಮಕ್ಕಳಿಗೆ ವೇದಾಧ್ಯಯನ, ಉತ್ತಮ ಶಿಕ್ಷಣ ನೀಡುವುದು ನಮ್ಮ ಜವಾಬ್ದಾರಿ ಎಂದು ತಿಳಿಸಿದರು.

ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಧುರೀಣರಾದ ರಾಮಣ್ಣ ಹುಕ್ಕೇರಿ, ಅವರು ಮಾತನಾಡಿ ಘಟಪ್ರಭಾದಲ್ಲಿ ಯಾವದೇ ಧಾರ್ಮಿಕ ಕಾರ್ಯಕ್ರಮದರೂ ಹೂಗಾರ ಸಮಾಜ ಭಾಂದವರು ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತಾರೆ. ಎಂದು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಬಿಜೆಪಿ ನಾಯಕರಾದ ಸುರೇಶ್ ಪಾಟೀಲ, ಅವರು ಮಾತನಾಡಿ ಹೂಗಾರ ಸಮಾಜದವರು ಕೇವಲ ಧಾರ್ಮಿಕ ಕಾರ್ಯ ಮಾತ್ರವಲ್ಲದೆ ದೇಶಭಕ್ತಿ ಹಾಗೂ ಸಂಗೀತ ಭಜನೆ ಇತ್ಯಾದಿ ಕಾರ್ಯಗಳಲ್ಲಿಯೂ ಸಹ ನಿಪುಣರಾಗಿದ್ದಾರೆ.ಇದು ಅಭಿಮಾನ ಪೂರ್ಣವಾದ ವಿಷಯ ಎಂದರು.

ವೇದಿಕೆಯಲ್ಲಿ ಗೋಕಾಕ – ಮೂಡಲಗಿ ತಾಲೂಕಿನ ಹೂಗಾರ ಸಮಾಜದ ಅಧ್ಯಕ್ಷರಾದ ಶ್ರೀ ಮಾರುತಿ ಬಸಪ್ಪ ಹೂಗಾರ ರವರು ಅಧ್ಯಕ್ಷತೆ ವಹಿಸಿ ಮಾತನಾಡಿ ಸಮಾಜದ ಗಣತಿ ಕಾರ್ಯ ನಡೆದಿದ್ದು ಎಲ್ಲರೂ ಸಮರ್ಪಕ ಮಾಹಿತಿ ನೀಡಿ ಸಹಕರಿಸಲು ಕೋರಿದರು. ಹಿರಿಯರಾದ, ಮಹಾದೇವ ದೇಶಪಾಂಡೆ, ಅಲ್ಲಪ್ಪಾ ಹುಕ್ಕೇರಿ ಉಪಸ್ಥಿತರಿದ್ದರು. ಗುರುಬಸಯ್ಯಾ ಕರ್ಪೂರಮಠ ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತ ವಿವೇಕಾನಂದ ಮ ಹೂಗಾರ ವಂದಿಸಿದರು .

ಹೂಗಾರ ಸಮಾಜದ ಮುಖಂಡರಾದ ವೀರಭದ್ರ ಹೂಗಾರ, ಕಾಡೇಶ ಹೂಗಾರ,ಗುರು ಬಸಯ್ಯಾ ಹೂಗಾರ, ಶಂಕರ ಹೂಗಾರ, ಭೀಮಶೆಪ್ಪ ಹೂಗಾರ, ಚಂದ್ರಕಾಂತ ಹೂಗಾರ,ಸದಾನಂದ ಹೂಗಾರ ಗೋಕಾಕ- ಮೂಡಲಗಿ ತಾಲೂಕಿನ ಹೂಗಾರ ಸಮಾಜದ ಬಾಂಧವರು ಮತ್ತು ಮುಖಂಡರು ಅಪಾರ ಪ್ರಮಾಣದ ಜನರು ಉಪಸ್ಥಿತರಿದ್ದರು.


Spread the love

About inmudalgi

Check Also

ವಿದ್ಯಾರ್ಥಿಗಳು ತಮ್ಮ ದಾಖಲೆಗಳನ್ನು ಸರಿಪಡಿಸಿಕೊಂಡು ಸರಕಾರಿ ಸೌಲಭ್ಯ ಪಡೆಯಿರಿ ವಸತಿ ಮೇಲ್ವಿಚಾರಕ _ ಎಸ್.ಎಸ್.ಸೋರಗಾಂವಿ.

Spread the love  ಮೂಡಲಗಿ : ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ದಾಖಲೆಗಳಾದ ಆಧಾರ ಕಾರ್ಡ್, ಬ್ಯಾಂಕ್ ಪಾಸ್ ಬುಕ್ಕ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ