ಮೂಡಲಗಿ: ಶಿಕ್ಷಕರು ರಾಷ್ಟ್ರದ ನಿಜವಾದ ಕಂಬಗಳು, ಅವರ ಅಮೂಲ್ಯ ಸೇವೆಗಳನ್ನು ಸಮಾಜವೇ ಗುರುತಿಸುತ್ತದೆ. ಮಕ್ಕಳಿಗೆ ಮಾಹಿತಿ ಮಾತ್ರ ತರಗತಿಯಲ್ಲಿ ನೀಡುವ ಬದಲು, ಪ್ರೇರಣೆಯನ್ನು ನೀಡಿ, ಅವರ ಮನಸ್ಸಿನಲ್ಲಿ ಸೃಜನಶೀಲತೆ, ವಿಶ್ಲೇಷಣಾ ಮನೋಭಾವವನ್ನು ಹೆಚ್ಚಿಸಿರಿ” ಎಂದು ಶ್ರೀ ಶ್ರೀನಿವಾಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ವೆಂಕಟೇಶ್‍ಎಚ್.ಪಾಟೀಲ ಹೇಳಿದರು.
ಅವರ ಪಟ್ಟಣದ ಶ್ರೀ ಶ್ರೀನಿವಾಸ ಶಾಲೆಯಲ್ಲಿ ಸೋಮವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಸರ್ವಪಳ್ಳಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಈ ದಿನಾಚರಣೆಯಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಅಲಂಕರಿಸಿದವು, ಭಾಷಣಗಳು, ನೃತ್ಯಗಳು, ಭಾವಗೀತೆಗಳು, ಕವನ ಪಠಣ, ಶಿಕ್ಷಕರ ಪಾತ್ರ ನಿರ್ವಹಣೆ ಹಾಗೂ ಶಿಕ್ಷಕರಿಗಾಗಿ ವಿಶೇಷವಾಗಿ ಆಯೋಜಿಸಲಾದ ಕ್ರೀಡಾಕೂಟಗಳು ವಿದ್ಯಾರ್ಥಿಗಳಿಂದ ಜರುಗಿದವು.
ಈ ಕಾರ್ಯಕ್ರಮದಲ್ಲಿ
ಪ್ರಾಂಶುಪಾಲರು ಎಸ್. ಬಿ.ಮಠಪತಿ, ಎಲ್.ಸಿ.ಗಾಡವಿ, ಅನಿಲಕುಮಾರ ಹಾಗೂ ಶಾಲೆಯ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರತೀಕ್ಷಾ ಮಂಟನವರ, ಸಾಧ್ವೀಉಪ್ಪಾರ, ಸುಪ್ರಿಯಾ ಗೌರಾಣಿ ಮತ್ತು ನಿದಾ ಅಂಡಗಿ ನಡೆಸಿಕೊಟ್ಟರು.
