ಬೆಳಗಾವಿ: ಚಿಕ್ಕಮಕ್ಕಳ ಹೃದಯ ಸಂಬಂಧಿತ ಉಚಿತ ತಪಾಸಣಾ ಶಿಬಿರವನ್ನು ಅರಿಹಂತ ಆಸ್ಪತ್ರೆ, ನೆಹರು ನಗರ, ಬೆಳಗಾವಿಯಲ್ಲಿ ಏರ್ಪಡಿಸಲಾಗಿದೆ. ಈ ಶಿಬಿರದಲ್ಲಿ ಶಾಲಾ ಮಕ್ಕಳಿಗೆ ಉಚಿತ ಸಮಾಲೋಚನೆ ನೀಡಲಾಗುವುದು. ಜೊತೆಗೆ ಆಯುಷ್ಮಾನ್ ಭಾರತ ಯೋಜನೆ ಅಡಿಯಲ್ಲಿ ಉಚಿತ ಶಸ್ತ್ರಚಿಕಿತ್ಸಾ ಚಿಕಿತ್ಸಾ ಸೌಲಭ್ಯ ಸಹ ಲಭ್ಯವಿರುತ್ತದೆ.
ಶಿಬಿರವು 13 ಸೆಪ್ಟೆಂಬರ್ 2025, ಶನಿವಾರ, ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಚಿಕ್ಕಮಕ್ಕಳ ಹೃದಯ ತಜ್ಞ ಡಾ. ಗೋವಿಂದ್ ಔರಾದಕರ ಅವರು ಮಕ್ಕಳಿಗೆ ಸಮಗ್ರ ಹೃದಯ ತಪಾಸಣೆ ಮಾಡಿ ಸೂಕ್ತ ವೈದ್ಯಕೀಯ ಸಲಹೆ ನೀಡಲಿದ್ದಾರೆ.
ಶಿಬಿರದಲ್ಲಿ ಉಚಿತವಾಗಿ ನೆರವೇರಿಸಲಾಗುವ ಪರೀಕ್ಷೆಗಳು:
ರಕ್ತದೊತ್ತಡ (BP)
ರ್ಯಾಂಡಮ್ ಬ್ಲಡ್ ಶುಗರ್ (RBS)
ಇಸಿಜಿ (ECG)
ಇಕೋಕಾರ್ಡಿಯೋಗ್ರಾಫಿ (ECHO)
ಸಾಮಾನ್ಯವಾಗಿ ಚಿಕ್ಕಮಕ್ಕಳಲ್ಲಿ ಕಂಡುಬರುವ ಹೃದಯ ಸಂಬಂಧಿತ ಲಕ್ಷಣಗಳು:
ಉಸಿರಾಟದ ತೊಂದರೆ
ಮೇಲಿಂದ ಮೇಲೆ ನೆಗಡಿ
ತೀವ್ರ ಎದೆಬಡಿತ
ಬೆಳವಣಿಗೆಯಲ್ಲಿ ತೊಂದರೆ
ಮಗು ಅತ್ತಾಗ ದೇಹ ನೀಲಿ ಬಣ್ಣಕ್ಕೆ ತಿರುಗುವುದು
ಇಂತಹ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳ ಪೋಷಕರು ಶಿಬಿರದಲ್ಲಿ ಭಾಗವಹಿಸಿ ಹೃದಯ ತಪಾಸಣೆ ಮಾಡಿಸಿಕೊಳ್ಳುವಂತೆ ವೈದ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
📞 9036102390, 9606999378