ಮೂಡಲಗಿ : ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ದಾಖಲೆಗಳಾದ ಆಧಾರ ಕಾರ್ಡ್, ಬ್ಯಾಂಕ್ ಪಾಸ್ ಬುಕ್ಕ ಹಾಗೂ ಜಾತಿ ಆದಾಯ ಪ್ರಮಾಣ ಪತ್ರ ತಮ್ಮ ಮೂಲ ಶಾಲಾ ದಾಖಲೆಗಳಲ್ಲಿ ತಮ್ಮ ಹೆಸರು, ತಂದೆ, ತಾಯಿಯ ಹೆಸರು, ಜನ್ಮ ದಿನಾಂಕ ಹಾಗೂ ಶಾಲಾ ಮಾಹಿತಿಗಳನ್ನು ಸರಿಯಾಗಿ ನಮೂದಾಗಿರುವ ಮಾಹಿತಿಗಳನ್ನು ಹೊಂದಿ ಶೈಕ್ಷಣಿಕವಾಗಿ ಸರಕಾರ ವಿವಿಧ ಇಲಾಖೆಗಳಿಂದ ವಿದ್ಯಾರ್ಥಿಗಳಿಗೆ ನೀಡುವ ಸಹಾಯ ಸೌಲಭ್ಯಗಳನ್ನು ಪಡೆದು ತಮ್ಮ ಶಿಕ್ಷಣದ ಯಶಸ್ಸನ್ನು ಹೊಂದಲು ಮುಂದಾಗಬೇಕೆಂದು ಮೂಡಲಗಿ ಹಿಂದುಳಿದ ವರ್ಗಗಳ ವಸತಿ ನಿಲಯದ ಮೇಲ್ವಿಚಾರಕ ಎಸ್.ಎಸ್. ಸೋರಗಾಂವಿ ಹೇಳಿದರು.
ಪಟ್ಟಣದ ಆರ್.ಡಿ.ಎಸ್. ಕಲಾ, ವಾಣಿಜ್ಯ & ವಿಜ್ಞಾನ ಪದವಿ ಮಹಾವಿದ್ಯಾಲಯದ ಆಯ್ಕ್ಯೂಎಸಿ & ಎನ್ಎಸ್ಎಸ್ ಘಟಕಗಳ ಸಹಯೋಗದಲ್ಲಿ ಆಯೋಜಿಸಿದ ಎಸ್.ಸಿ./ಎಸ್.ಟಿ. ವಿದ್ಯಾರ್ಥಿಗಳಿಗೆ ಸರಕಾರದ ಶೈಕ್ಷಣಿಕ ಯೋಜನೆಗಳ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ ಸರಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿದ್ದು ಅವುಗಳ ಪ್ರಯೋಜನಗಳನ್ನು ಪಡೆದುಕೊಳ್ಳಲು ಇಂದಿನ ಯುವ ಸಮುದಾಯ ಮುಂದಾಗಬೇಕಾಗಿದ್ದು ಸರಿಯಾದ ಮಾರ್ಗದರ್ಶನವಿಲ್ಲದೆ ಸರಿಯಾಗಿ ಸರಕಾರದ ಯೋಜನೆಗಳು ವಿದ್ಯಾರ್ಥಿಗಳಿಗೆ ತಲುಪುತ್ತಿಲ್ಲಾ ಸೂಕ್ತ ಹಾಗೂ ಯೋಗ್ಯವಾದ ಮಾರ್ಗದರ್ಶನ ವಿದ್ಯಾರ್ಥಿಗಳಿಗೆ ಅಗತ್ಯವಾಗಿದೆ ಎಂದರು.
ಅತಿಥಿ ಮೂಡಲಗಿಯ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ಮೇಲ್ವಿಚಾರಕ ಯಲ್ಲಪ್ಪ ಭಜಂತ್ರಿ ಮಾತನಾಡಿ ಎಸ್.ಸಿ./ಎಸ್.ಟಿ ವಿದ್ಯಾರ್ಥಿಗಳಿಗೆ ಸರಕಾರ ಹತ್ತಾರು ಪದ್ದತಿಗಳಲ್ಲಿ ಸರಕಾರಿ ಶೈಕ್ಷಣಿಕ ಸೌಲಭ್ಯಗಳಿದ್ದು ತಮ್ಮ ಶಾಲಾ ದಾಖಲೆ ಹಾಗೂ ತಮ್ಮ ಶೈಕ್ಷಣಿಕ ಉತ್ತಮ ಫಲಿತಾಂಶವನ್ನು ಹೊಂದುವದರ ಜೊತೆಗೆ ಸಮಾಜ ಕಲ್ಯಾಣ ಇಲಾಖೆಯಿಂದ ಸಿಗುವ ಶಿಷ್ಯವೇತನ, ಪ್ರೋತ್ಸಾಹ ಧನ, ಸ್ಪರ್ದಾತ್ಮಕ ಪರೀಕ್ಷೆಗಳ ವಿಶೇಷ ತರಬೇತಿಗಳು ಹಾಗೂ ಸ್ವಯಂ ಉದ್ಯೋಗಕ್ಕಾಗಿ ನೀಡುವ ಸಹಾಯ ಸೌಲಭ್ಯಗಳ ತಿಳವಳಿಕೆ ಇಂದಿನ ಎಸ್.ಸಿ./ಎಸ್.ಟಿ ಸಮುದಾಯಕ್ಕೆ ಅಗತ್ಯವಿದೆ ಎಂದರು.
ಎಸ್.ಸಿ/ಎಸ್ಟಿ.ಘಟಕಾಧಿಕಾರಿ ಎಸ್.ಎಲ್. ವೆಂಕಟಾಪೂರ ಪ್ರಾಸ್ತಾವಿಕವಾಗಿ ಮಾತನಾಡಿ ಸರಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಸಹಾಯಕ್ಕಾಗಿ ಅನೇಕ ಯೋಜನೆಗಳು & ಕಾರ್ಯಕ್ರಮಗಳಿದ್ದು ಎಲ್ಲ ವಿದ್ಯಾರ್ಥಿಗಳು ಅದರ ಸದುಪಯೋಗ ಪಡಿಸಿಕೊಳ್ಳಲು ಮುಂದಾಗಬೇಕು ಎಂದರು.
ಕಾಲೇಜು ಪ್ರಾಚಾರ್ಯ ಎಸ್.ಬಿ.ಗೋಟೂರೆ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿ ಶಿಕ್ಷಣ ಎಲ್ಲ ಸಮುದಾಯಕ್ಕೂ ದೊರಕುವ ಉದ್ದೇಶದಿಂದ ಸರಕಾರದಿಂದ ಹಲವಾರು ಶೈಕ್ಷಣಿಕ ಯೋಜನೆಗಳಿದ್ದು ವಿವಿಧ ಇಲಾಖೆಗಳು ವಿದ್ಯಾರ್ಥಿ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಸರಿಯಾದ ವೇಳೆಗೆ ಸರಿಯಾದ ಸಮಯಕ್ಕೆ ಶೈಕ್ಷಣಿಕ ಸಹಾಯಕ್ಕಾಗಿ ಅರ್ಜಿಗಳನ್ನು ಸಲ್ಲಿಸಿ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕ ಶಿವಾನಂದ ಸತ್ತಿಗೇರಿ, ರಾಜು ಪತ್ತಾರ, ಮಲ್ಲಪ್ಪ ಪಾಟೀಲ, ಸಂಜೀವ ಮಂಟೂರ, ಮುತ್ತಣ್ಣಾ ಒಡೆಯರ, ಸುನೀಲ ಸತ್ತಿ, ಅಶ್ವೀನಿ ಗುರುವ, ನಂದಾ ತಳವಾರ, ಅಕ್ಷತಾ ಹೊಸಮನಿ, ಕವಿತಾ ಮಳಲಿ ಮತ್ತಿತರರು ಹಾಜರಿದ್ದರು.
ವಿದ್ಯಾರ್ಥಿನಿ ಲಕ್ಷ್ಮೀ ಗೊರಗುದ್ದಿ ನಿರೂಪಿಸಿದರು ಸೌಭಾಗ್ಯಾ ಸಾಯನ್ನವರ ಸ್ವಾಗತಿಸಿದರು ಪ್ರೀತಿ ಬಂಗೆನ್ನವರ ವಂದಿಸಿದರು.