ಮೂಡಲಗಿ: ಇತ್ತೀಚಿನ ದಿನಗಳಲ್ಲಿ ವ್ಯಕ್ತಿಯ ವಯೋಮಿತಿಗೆ ಸಂಬಂಧಿಸದೇ ಕಂಡುಬರುತ್ತಿರುವ ಹೆಚ್ಚಿನ ಪ್ರಮಾಣದ ಹೃದಯಾಘಾತಗಳ ಸಂಭವಿಸುತ್ತಿವೆ. ಜನರು ತಮ್ಮ ದೈಹಿಕ ಹಾಗೂ ಹೃದಯಕ್ಕೆ ಸಂಬಂಧಿಸಿದಂತೆ ದೈನಂದಿನ ವ್ಯಾಯಾಮ, ಯೋಗಾಭ್ಯಾಸವನ್ನು ರೂಢಿಸಿಕೊಳ್ಳಲು ಹಾಗೂ ಆರೋಗ್ಯಕರ ಆಹಾರ ಪದ್ದತಿಯನ್ನು ಅನುಸರಿಸಲು ಬೇಕೆಂದು ಸತೀಶ ಶುಗರ್ಸ್ ಕಾರ್ಖಾನೆಯ ಚೇರಮನ್ ಮತ್ತು ಮುಖ್ಯ ಹಣಕಾಸಿನ ಅಧಿಕಾರಿ ಪ್ರದೀಪಕುಮಾರ ಇಂಡಿ ಅವರು ಸಲಹೆ ನೀಡಿದರು
ಅವರು ತಾಲೂಕಿನ ಹುಣಶ್ಯಾಳ ಪಿಜಿ ಬಳಿಯ ಸತೀಶ ಶುಗರ್ಸ್ ಕಾರ್ಖಾನೆಯಲ್ಲಿ ಆವರಣದಲ್ಲಿ ಕಾರ್ಖಾಣೆ ಹಾಗೂ ಧಾರವಾಡ ಎಸ್.ಡಿ.ಎಮ್. ನಾರಾಯಣ ಹೃದಯಾಲಯ ಆಶ್ರಯದಲ್ಲಿ ಕಾರ್ಖಾನೆಯ ಕಾರ್ಮಿಕ ಮತ್ತು ಸಿಬ್ಬಂದಿಯವರಿಗೆ ವಿಶ್ವ ಹೃದಯ ದಿನಾಚರಣೆಯ ಅಂಗವಾಗಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ ಲ ಉಚಿತ ಹೃದಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಕಾರ್ಖಾನೆಯ ಎಲ್ಲ ವಿಭಾಗಗಳ ಮುಖ್ಯಸ್ಥರುಗಳು ತಮ್ಮ ಅಧೀನ ಸಿಬ್ಬಂದಿಯವರಲ್ಲಿ ಯಾವುದೇ ರೀತಿಯ ಅನಾರೋಗ್ಯದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಕ್ರಮವಹಿಸುವಂತೆ ಸೂಚಿಸಿದರು.
ನಾರಾಯಣ ಹೃದಯಾಲಯ ಧಾರವಾಡನ ಮಾರ್ಕೆಟಿಂಗ್ ವಿಭಾಗದ ಹಿರಿಯ ವ್ಯವಸ್ಥಾಪಕ ಅಜಯ ಹುಲಮನಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಹೃದಯಾರೋಗ್ಯದ ಕುರಿತು ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ಸಾರ್ವಜನಿಕ ಸಂಪರ್ಕಾಧಿಕಾರಿ ನಾಗರಾಜ ಬಡಿಗೇರ, ವೈದ್ಯಾಧಿಕಾರಿ ದಯಾನಂದ, ಕಾರ್ಖಾನೆಯ ಉಪಾಧ್ಯಕ್ಷರುಗಳಾದ ವೀರು ತಳವಾರ, ದಿಲೀಪ ಪವಾರ, ಕಬ್ಬು ಅಭಿವೃದ್ದಿ ವಿಭಾಗದ ಪ್ರಧಾನ ವ್ಯವಸ್ಥಾಪಕ ಎಮ್. ಬಿ.ಸಸಾಲಟ್ಟಿ, ಸಹಾಯಕ ಪ್ರಧಾನ ವ್ಯವಸ್ಥಾಪಕರುಗಳಾದ ಅರುಣ ಚೌಗಲಾ, ಸುರೇಶ ಬೋಸಲೆ, ಮೃತ್ಯುಂಜಯ ಕನಕೇರಿ, ವಿಜಯ ಕಟಾವಕರ, ವೈದ್ಯಾಧಿಕಾರಿ ಡಾ|| ಆನಂದ ಪೂಜಾರಿ ಹಾಗೂ ಇತರೆ ಹಿರಿಯ ವ್ಯವಸ್ಥಾಪಕರು, ಕಾರ್ಮಿಕ ಸಿಬ್ಬಂದಿಯವರು ಹಾಜರಿದ್ದರು.