ಮೂಡಲಗಿ: ‘ಮೂಡಲಗಿಯ ಬಸವೇಶ್ವರ ಅರ್ಬನ್ ಕೋ.ಅಪ್ ಕ್ರೆಡಿಟ್ ಸೊಸಾಯಿಟಿಯು 2024-25 ಆರ್ಥಿಕ ವರ್ಷದ ಕೊನೆಯಲ್ಲಿ ರೂ.5.05 ಕೋಟಿ ನಿವ್ವಳ ಲಾಭವನ್ನು ಗಳಿಸಿ ಪ್ರಗತಿಯಲ್ಲಿ ಸಾಗಿದೆ’ ಎಂದು ಸೊಸಾಯಿಟಿ ಅಧ್ಯಕ್ಷ ಮಲ್ಲಿಕಾರ್ಜುನ ಢವಳೇಶ್ವರ ಹೇಳಿದರು.
ಇಲ್ಲಿಯ ಬಸವೇಶ್ವರ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸಾಯಿಟಿಯ 30ನೇ ವರ್ಷದ ವಾರ್ಷಿಕ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು
ಸೊಸೈಟಿಯು ರೂ.6.41 ಕೋಟಿ ಶೇರು ಬಂಡವಾಳ, ರೂ.240.38 ಕೋಟಿ ಠೇವುಗಳು, ರೂ.23.40 ಕೋಟಿ ನಿಧಿಗಳು, ರೂ.71.79 ಕೋಟಿ ಗುಂತಾವಣಿಗಳು, ರೂ. 183.25 ಕೋಟಿ ಸಾಲವನ್ನು ವಿತರಿಸಿ ರೂ. 282.23 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದೆ ಎಂದರು.
ಈ ವರೆಗೆ ವಿವಿಧೆಡೆಯಲ್ಲಿ 15 ಶಾಖೆಗಳನ್ನು ತೆರೆದಿದ್ದು ಅವೆಲ್ಲವೂ ಪ್ರಗತಿಯಲ್ಲಿ ಸಾಗಿವೆ. ಪ್ರಸಕ್ತ ಸಾಲಿನಲ್ಲಿ ಇನ್ನು 5 ಶಾಖೆಗಳನ್ನು ಪ್ರಾರಂಭಿಸಲಾಗುವುದು. ಪ್ರಸಕ್ತ ಸಾಲಿಗೆ ಸೊಸೈಟಿಯ ಶೇ.15ರಷ್ಟು ಲಾಭಾಂಶವನ್ನು ಪ್ರಕಟಿಸಿದೆ ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಸಾಹಿತಿ ಬಾಲಶೇಖರ ಬಂದಿ ಮಾತನಾಡಿ ಸಮಾಜದಲ್ಲಿಯ ಎಲ್ಲ ಜನರನ್ನು ಆರ್ಥಿಕವಾಗಿ ಸದೃಢವಾಗಿ ಬೆಳೆಸುವಲ್ಲಿ ಮತ್ತು ಜನರ ಜೀವನ ಮಟ್ಟವು ಸುಧಾರಿಸುವಲ್ಲಿ ಸಹಕಾರಿ ಪತ್ತಿನ ಸಂಘಗಳು ಪ್ರಮುಖ ಪಾತ್ರವಹಿಸಿವೆ ಎಂದರು.
ಮೂಡಲಗಿ ಬಸವೇಶ್ವರ ಅರ್ಬನ ಕೋ.ಆಪ್ ಕ್ರೆಡಿಟ್ ಸೊಸೈಟಿಯು ಕಳೆದ 30 ವರ್ಷಗಳಲ್ಲಿ ಅಗಾಧವಾಗಿ ಬೆಳೆದು ಸಹಕಾರಿ ಕ್ಷೇತ್ರಕ್ಕೆ ಮಾದರಿಯಾಗಿದೆ ಎಂದರು.
ಸೊಸೈಟಿಯ ಕಾನೂನು ಸಲಹೆಗಾರ ಶಿವಾನಂದ ಪಾಟೀಲ, ಹಂದಿಗುಂದದ ಮಲ್ಲಿಕಾರ್ಜುನ ಖಾನಗೌಡರ ಮಾತನಾಡಿದರು.
ಸೊಸೈಟಿ ಪ್ರಧಾನ ವ್ಯವಸ್ಥಾಪಕ ಬಸವರಾಜ ಬಡಿಗೇರ ಪ್ರಾಸ್ತಾವಿಕ ಮಾತನಾಡಿದರು.
ವೇದಿಕೆಯಲ್ಲಿ ಸೊಸಾಯಿಟಿ ಉಪಾಧ್ಯಕ್ಷ ರವೀಂದ್ರ ಭಾಗೋಜಿ, ಲೆಕ್ಕಪರಿಶೋಧಕ ಧರ್ಮರಾಜ ಪೋಳ, ಶಾಖಾ ಸಲಹಾ ಸಮಿತಿಗಳ ಅಧ್ಯಕ್ಷರು, ನಿರ್ದೇಶಕರು ಇದ್ದರು.
ಸೊಸಾಯಿಟಿ ನಿರ್ದೇಶಕರಾದ ಬಸವರಾಜ ತೇಲಿ, ಗಿರೀಶ ಢವಳೇಶ್ವರ, ಚನ್ನಬಸು ಬಡ್ಡಿ, ಶ್ರೀಕಾಂತ ಹಿರೇಮಠ, ಶ್ರೀಶೈಲ್ ಮದಗನ್ನವರ, ದೇವಪ್ಪ ಕೌಜಲಗಿ, ಕುಸಮಾ ತೇಲಿ, ಸುಮಿತ್ರಾ ಶೇಡಬಾಳ, ಮಹಾದೇವಿ ಹಿರೇಮಠ, ಲಕ್ಷ್ಮಣ ತೆಳಗಡೆ, ರಾಘವೇಂದ್ರ ಕೆಸಪನಟ್ಟಿ ಇದ್ದರು.
ಸೊಸಾಯಿಟಿ ಪ್ರಧಾನ ವ್ಯವಸ್ಥಾಪಕ ಬಸವರಾಜ ಬಡಿಗೇರ, ಮಲ್ಲಿಕಾರ್ಜುನ ಢವಳೇಶ್ವರ ನಿರೂಪಿಸಿದರು, ಮಹಾದೇವ ಶೀಳನವರ ಸ್ವಾಗತಿಸಿದರು, ಶಿವಾನಂದ ಮರಾಠೆ ವಂದಿಸಿದರು.