ಬೆಟಗೇರಿ:ಗೋಕಾಕ ತಾಲೂಕಿನ ತಪಸಿ ಗ್ರಾಮ ಪಂಚಾಯ್ತಿ ವತಿಯಿಂದ ಇತ್ತೀಚೆಗೆ ಸ್ಥಳೀಯ ಗ್ರಾಪಂ 15 ನೇ ಹಣಕಾಸಿನ ಯೋಜನೆಯ ನಿಧಿಯಿಂದ ಸ್ಥಳೀಯ 2 ಅಂಗನವಾಡಿ ಕೇಂದ್ರದ ಮಕ್ಕಳಿಗೆ ಟೇಬಲ್, ಖುರ್ಚಿ ಸೇರಿದಂತೆ ಮತ್ತೀತರ ಪಾಠೋಪ ಮತ್ತು ಆಟೋಪಕರಣಗಳ ವಿತರಣೆ ಕಾರ್ಯಕ್ರಮ ನಡೆಯಿತು.
ಈ ವೇಳೆ ತಪಸಿ ಗ್ರಾಪಂ ಪಿಡಿಒ ಟಿ.ಎಸ್.ಕಂಬಳಿ ಮಾತನಾಡಿ, ಸ್ಥಳೀಯ 2 ಅಂಗನವಾಡಿ ಕೇಂದ್ರದ ಕಾರ್ಯಕತೆರ್ÀಯರಿಗೆÉ ಪಾಠೋಪ ಮತ್ತು ಆಟೋಪಕರಣಗಳನ್ನು ವಿತರಿಸಿ ಸ್ಥಳೀಯ ಎಲ್ಲಾ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಕಲಿಕಾ ಪಾಠೋಪ ಮತ್ತು ಆಟೋಪಕರಣಗಳ ಸದುಪಯೋಗವಾಗಲಿ ಎಂದರು.
ಇಲ್ಲಿಯ ಗ್ರಾಪಂ ಕಾರ್ಯದರ್ಶಿ ಐ.ಬಿ.ಕೆಂಪಸತ್ತಿ, ಕರ ವಸೂಲಿಗಾರ ಬಸವರಾಜ ಸಾಯನ್ನವರ, ವಾಸುದೇವ ಗಲಗಲಿ, ಹನುಮಂತ ಪೂಜೇರಿ, ಗುರುನಾಥ ಪೊಲೀಸನವರ, ರಾಯಪ್ಪ ತಿರಕನ್ನವರ, ಮುತ್ತೆಪ್ಪ ಬಾಗೇವಾಡಿ, ಮಹಾಂತೇಶ ಕಂಬಾರ, ಬಸವರಾಜ ಬಾಣಸಿ ಸೇರಿದಂತೆ ಸ್ಥಳೀಯ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ, ಗ್ರಾಮಸ್ಥರು ಇದ್ದರು.