ಮೂಡಲಗಿ: ಸಮೀಪದ ಸಮೀರವಾಡಿ ಕಬ್ಬು ಬೆಳೆಗಾರರ ಸಂಘ ವಾರ್ಷಿಕ ಸರ್ವ ಸಾಧಾರಣಾ ಸಭೆ ಸೆ.22 ರಂದು ಬೆಳಿಗ್ಗೆ 11 ಘಂಟೆಗೆ ಸಮೀರವಾಡಿ ಶುರ‍್ಸ್ ಕಾರ್ಖಾನೆ ವೃತ್ತದ ಬಳಿಯ ಕಬ್ಬು ಬೆಳೆಗಾರರ ಸಂಘದ ಸಭಾ ಭವನದಲ್ಲಿ ಸಂಘದ ರಾಮಣ್ಣಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ಜರುಗಲಿದೆ.
ಸಭೆಯಲ್ಲಿ 2024-25ನೇ ಸಾಲಿನ ಲೆಕ್ಕ ಪತ್ರ ಓದುವುದು, 2024-25ನೇ ಸಾಲಿನ ೨ ಕಂತಿನ ಚರ್ಚೆ, 2022-23ನೇ ಸಾಲಿನಲ್ಲಿ 1೦೦ ರೂಪಾಯಿ ಅಂದಿನ ಕರ್ನಾಟಕ ಘನ ಸರ್ಕಾರದ
ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದು, ಅಂದರೆ ಸರ್ಕಾರ 5೦
ರೂಪಾಯಿ ಹಾಗೂ ಕಾರ್ಖಾನೆಯವರು 5೦ ರೂ ಕೂಡಿ ಒಟ್ಟು 1೦೦ ರೂ ರೈತರಿಗೆ ಕೊಡುವುದಾಗಿ ಘೋಷಣೆ ಮಾಡಿದ್ದು ಇರುತ್ತದೆ ಅದರ ಬಗ್ಗೆ ಚರ್ಚೆ ಹಾಗೂ ಅಧ್ಯಕ್ಷರ ಅಪ್ಪಣೆಯ ಮೇರೆಗೆ ಬಂದಂತಹ ವಿಷಯ ಚರ್ಚೆಗಳನ್ನು ಮಾಡಲಾಗುವುದು.
ಸಮೀರವಾಡಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ರೈತರು ಸಭೆಯಲ್ಲಿ ಭಾಘವಹಿಸಬೇಕೆಂದು ಸಂಘದ ಕಾರ್ಯದರ್ಶಿ ರಂಗನಗೌಡ ಪಾಟೀಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.