Breaking News
Home / ಬೆಳಗಾವಿ / ಶಿವಾಪೂರ ಹೂಗಾರ ಗುರುಗಳ ನವರಾತ್ರಿ ಉತ್ಸವದ ಸತ್ಸಂಗ ಕಾರ್ಯಕ್ರಮಕ್ಕೆ ಮೆರುಗು

ಶಿವಾಪೂರ ಹೂಗಾರ ಗುರುಗಳ ನವರಾತ್ರಿ ಉತ್ಸವದ ಸತ್ಸಂಗ ಕಾರ್ಯಕ್ರಮಕ್ಕೆ ಮೆರುಗು

Spread the love

ಮೂಡಲಗಿ : ಮೂಡಲಗಿ ತಾಲೂಕಿನ ಶಿವಾಪೂರ ಹ ಗ್ರಾಮದ ಶ್ರೀ ಚಿದಾನಂದ ಮ ಹೂಗಾರ ಗುರುಗಳ ಶ್ರೀ ಬಸವ ಆಶ್ರಮದಲ್ಲಿ ನವರಾತ್ರಿ ಉತ್ಸವ ಸತ್ಸಂಗ ಕಾರ್ಯಕ್ರಮ ತುಂಬಾ ವಿಜೃಂಭಣೆಯಿಂದ ನಡೆಯಿತು. ಒಂಭತ್ತು ದಿನಗಳ ಕಾಲ ನಿತ್ಯ ಶ್ರೀ ದೇವಿ ಪುರಾಣ ಪಾರಾಯಣ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಾ ವಿಜಯ ದಶಮಿ ದಿನದಂದು ಶಮಿ ಪೂಜೆಯೊಂದಿಗೆ ದಸರಾ ಕಾರ್ಯಕ್ರಮಗಳು ಮಂಗಳಗೊಳ್ಳುವವು.

ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಮಮದಾಪೂರದ ವೇ.ಮೂ ಶ್ರೀ ಚರಮೂರ್ತೇಶ್ವರ ಮಹಾಸ್ವಾಮಿಗಳು ಅಧಿಕರಣ ವಿಷಯವಾದ ಮನುಜ ಕುಲದ ಜನನದ ಲಾಭವಾವುದು ಆರುನಾನೆಂದು ತಿಳಿಯುವುದು ಎಂದು ಹೇಳುತ್ತ ಲಿಂಗೈಕ್ಯ ಶರಣ ಶ್ರೀ ಮಲ್ಲಿಕಾರ್ಜುನ ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಅವರ ಕುಟುಂಬದವರಿಂದ ಜ್ಞಾನ ದಾಸೋಹ, ಅನ್ನ ದಾಸೋಹ ಮತ್ತು ಸಾಹಿತ್ಯ ದಾಸೋಹ ನಡೆಯುತ್ತಿರುವದು ನವರಾತ್ರಿ ಉತ್ಸವದ ಸತ್ಸಂಗ ಕಾರ್ಯಕ್ರಮಕ್ಕೆ ಮೆರುಗು ನೀಡಿದೆ ಎಂದರು.

ರನ್ನ ತಿಮ್ಮಾಪುರದ ಶ್ರೋ.ಬ್ರ ಶ್ರೀ ಬಸವರಾಜ ಮಹಾಸ್ವಾಮಿಗಳು ಮಾತನಾಡಿ ಮನುಜ ಜನ್ಮ ಬರುವುದು ದುರ್ಬಲ ಆ ಜನ್ಮದ ಲಾಭವೆಂದರೆ ನಾನು ಯಾರು ಎಂಬ ಸ್ವರೂಪ ಜ್ಞಾನ ತಿಳಿದುಕೊಂಡಾಗ ಮಾನವ ಜನ್ಮ ಪಾವನವಾಗುವದು ಎಂದು ಉಪದೇಶಿಸಿದರು.

ಖಾನಟ್ಟಿಯ ಶ್ರೋ.ಬ್ರ ಶ್ರೀ ಬವಾನಂದ ಮಹಾಸ್ವಾಮಿಗಳು ಮಾತನಾಡಿ ಮನುಜ ಜನ್ಮದಲಿ ಬಂದಿರುವ ನಾವುಗಳು ಸತ್ಸಂಗದಲ್ಲಿ ಭಾಗಿಗಳಾಗಿ ಆತ್ಮ ಸ್ವರೂಪದ ‌ಸಾಕ್ಷಾತ್ಕಾರ ಮಾಡಿಕೊಂಡರೆ ಮನುಜ ಜನ್ಮ ಸಾರ್ಥಕ ಎಂದರು.

ಜ್ಞಾನ ಮಂದಿರ ಗೋಕಾಕದ ಧರ್ಮದರ್ಶಿಗಳಾದ ಮಾತೋಶ್ರೀ ಸುವರ್ಣಾ ತಾಯಿ ಹೊಸಮಠ, ಅಥಣಿಯ ಶ್ರೀ ಕಾಡಸಿದ್ದೇಶ್ವರ ಆಶ್ರಮದ ವೇ.ಮೂ ಶ್ರೀ ಕಾಡಯ್ಯ ಮಹಾಸ್ವಾಮಿಗಳು,ಪಾಲಭಾವಿಯ ಶ್ರೋ.ಬ್ರ ಶ್ರೀ ಈರಯ್ಯ ಮಹಾಸ್ವಾಮಿಗಳು, ಖವಟಗೊಪ್ಪದ ನಾಗಪ್ಪ ಮಹಾರಾಜರು, ಕಟಕೋಳದ ಶ್ರೀ ಬಿ.ಎಮ್.ಸ್ವರಮಂಡಲ
ಗುರುಗಳು ಉಪದೇಶಿಸಿದರು.

ಶಿವಾಪೂರದ ವೇ.ಮೂ ಶ್ರೀ ಈರಯ್ಯ ಹಿರೇಮಠ ಸ್ವಾಮಿಗಳು,ಏಳೂರ ಸೀಮೆವ್ವನ ಅರ್ಚಕರಾದ ಶ್ರೀ ಲಕ್ಷ್ಮಣ ಪೂಜೇರಿ, ಯರಝರ್ವಿಯ ಶ್ರೀ ರಾಮಲಿಂಗಪ್ಪ ಹೂಗಾರ ಗುರುಗಳು, ಅಥಣಿಯ ಚಾಳೆಕರ ಗುರುಗಳು,ಹಳ್ಳೂರಿನ ಬಾಳಯ್ಯ ಸ್ವಾಮಿಗಳು ಉಪಸ್ಥಿತರಿದ್ದರು.

ಶಂಕರಗೌಡ ಪಾಟೀಲ, ರಂಗನಗೌಡ ಪಾಟೀಲ,ಶಿವನಗೌಡ ಪಾಟೀಲ, ಈಶ್ವರ ಬೆಳಗಲಿ,ಅಲ್ಲಪ್ಪ ಕಿತ್ತೂರು, ಕಲ್ಲಪ್ಪ ಹುಬ್ಬಳ್ಳಿ, ಬಾಳಪ್ಪ ಸಕ್ಕರೆಪ್ಪಗೋಳ, ಪರಮಾನಂದ ಹೂಗಾರ,ವೆಂಕಪ್ಪ ಹೂಗಾರ ಕರಗಣ್ಣಿ ಗುರುಗಳು, ಶ್ರೀಶೈಲ ವಾಲಿ, ರಾಚಪ್ಪ ಅಂಗಡಿ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು
ಜಗದೀಶ ಹೂಗಾರ ಸ್ವಾಗತಿಸಿದರು ಚಿದಾನಂದ ಹೂಗಾರ ನಿರೂಪಿಸಿದರು ವಿವೇಕಾನಂದ ಹೂಗಾರ ವಂದಿಸಿದರು.


Spread the love

About inmudalgi

Check Also

ರಾಜ್ಯದಲ್ಲಿ ಉಪ್ಪಾರ ಸಮುದಾಯ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದೆ – ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ

Spread the loveಮೂಡಲಗಿ: ರಾಜ್ಯದಲ್ಲಿ ಉಪ್ಪಾರ ಸಮುದಾಯದವರು ಸಾಮಾಜಿಕವಾಗಿ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದೆ ಎಂದು ಉಪ್ಪಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ