ಮೂಡಲಗಿ : ಮೂಡಲಗಿ ತಾಲೂಕಿನ ಶಿವಾಪೂರ ಹ ಗ್ರಾಮದ ಶ್ರೀ ಚಿದಾನಂದ ಮ ಹೂಗಾರ ಗುರುಗಳ ಶ್ರೀ ಬಸವ ಆಶ್ರಮದಲ್ಲಿ ನವರಾತ್ರಿ ಉತ್ಸವ ನಿಮಿತ್ತವಾಗಿ ನಡೆದ ದಸರಾ ಕವಿಗೋಷ್ಠಿಯು ಬಹಳ ವಿಜೃಂಭಣೆಯಿಂದ ನಡೆಯಿತು.
ದಸರಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಮಹಾದೇವ ಜಿಡ್ಡಿಮನಿಯವರು ಕವಿಯಾದವನು ಸಮಾಜಕ್ಕೆ ಧ್ವನಿ ಯಾಗಬೇಕು ಹೊರತು ಪ್ರಶಸ್ತಿ ಮತ್ತು ಹೆಸರು ಮಾಡುವ ಗೀಳು ಇರಬಾರದು ಎಂದು ಕವಿಗಳಿಗೆ ಕಿವಿ ಮಾತು ಹೇಳುತ್ತಾ ಲಿಂಗೈಕ್ಯ ಶರಣ ಶ್ರೀ ಮಲ್ಲಿಕಾರ್ಜುನ ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ಅವರ ಕುಟುಂಬ ಮತ್ತು ಚಿದಾನಂದ ಗುರುಗಳು ಜ್ಞಾನ ದಾಸೋಹ, ಅನ್ನ ದಾಸೋಹ ಮತ್ತು ಸಾಹಿತ್ಯ ದಾಸೋಹ ನಡೆಸುತ್ತಾ ಕವಿಗಳಿಗೆ ವೇದಿಕೆ ಕಲ್ಪಿಸಿರುವದನ್ನು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಶ್ರೀ ನಿಂಗಪ್ಪ ಸಂಗ್ರೇಜಿಕೊಪ್ಪ ರವರು ಕಾವ್ಯ ಭಾವ ತುಂಬಿ ಬಂದಾಗ ಮಾತ್ರ ಅದಕ್ಕೆ ಜೀವ ತುಂಬುವದು.ಅದು ನಾವು ಹುಟ್ಟಿಸುವಂತವುದಲ್ಲ ಎಂದು ಹೇಳುತ್ತ ಕವನಗಳು ಕವಿಯ ಅಂತರ್ಮುಖವನ್ನು ಸಮಾಜದ ಮುಂದೆ ಬಿಚ್ಚಿ ಇಡುವ ಸಾಧನಗಳು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಶ್ರೀಮತಿ ಶೈಲಜಾ ಬಡಿಗೇರ ರವರು ಸ್ತ್ರೀ ಸಂವೇದನೆಯ ಕವನಗಳು ಇನ್ನೂ ಹೆಚ್ಚು ಬರಬೇಕಿದ್ದು ಅಂತಹ ಕವಿಯಿತ್ರಿಯರಿಗೆ ಚಿದಾನಂದರವರು ವೇದಿಕೆ ಕಲ್ಪಿಸಿರುವದನ್ನು ಶ್ಲಾಘಿಸಿದರು.
ಅತಿಥಿಗಳಾಗಿ ಮಾತನಾಡಿದ ರಂಗನಗೌಡ ಪಾಟೀಲ ರವರು ನವರಾತ್ರಿ ಉತ್ಸವದ ನಿಮಿತ್ತ ಮಾಡಿಕೊಂಡು ಗ್ರಾಮೀಣ ಭಾಗದಲ್ಲಿ ಕವಿಗೋಷ್ಠಿ ಹಮ್ಮಿಕೊಳ್ಳುವ ಮೂಲಕ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸಿದ ಕೀರ್ತಿ ಶಿವಾಪೂರ ಗ್ರಾಮಕ್ಕೆ ಸಲ್ಲುತ್ತದೆ ಎಂದು ಹೇಳಿದರು.
ವೇದಿಕೆಯ ಮೇಲೆ ಶಿವನಗೌಡ ಪಾಟೀಲ, ಹಿರಿಯ ಸಾಹಿತಿಗಳಾದ ಸಂಗಮೇಶ ಗುಜಗೊಂಡ, ಬಾಲಶೇಖರ ಬಂದಿ, ಸಿದ್ರಾಮ ದ್ಯಾಗಾನಟ್ಟಿ, ರಾಮಲಿಂಗಪ್ಪ ಹೂಗಾರ, ಬಿ.ಎಮ್.ಸ್ವರಮಂಡಲ,
ಉಪಸ್ಥಿತರಿದ್ದರು.
ಬಸಪ್ಪ ಇಟ್ಟನ್ನವರ, ಶಿವಲಿಂಗಯ್ಯ ಗುರುಸ್ವಾಮಿ, ಶಿವಕುಮಾರ ಕೋಡಿಹಾಳ, ದುಂಡಪ್ಪ ಕಮತಿ, ಕಲ್ಲಪ್ಪ ಡೋಣಿ, ಮುತ್ತುರಾಜ ಭೋವಿ,ಸಾಗರ ಝಂಡೆನ್ನವರ,ಅನೀಲ ಮಡಿವಾಳರ , ಶ್ರೀಶೈಲ ಶಿರೂರ, ಮಾರುತಿ ಗೌಡರ, ವಿಠ್ಠಲ ಗೆಣ್ಣೂರ, ವೆಂಕಟೇಶ ಹೆಳವರ, ಮಹಾಂತೇಶ ಗೋನಕೊಪ್ಪ, ವಿಜಯಲಕ್ಷ್ಮಿ ತಿರಕನ್ನವರ, ಶಶಿಕಲಾ ಕುಲಕರ್ಣಿ, ಗೋದಾವರಿ ದೇಶಪಾಂಡೆ, ಸರಸ್ವತಿ ಶೆಕ್ಕಿ,ಭಾಗಿರತಿ ಕುಳಲಿ, ರೂಪಾ ಕೌಜಲಗಿ, ಅಶ್ವಿನಿ ಚಿಪ್ಪಲಕಟ್ಟಿ ಇಪ್ಪತ್ತೈದಕ್ಕೂ ಹೆಚ್ಚು ಜನ ಕವನ ವಾಚನ ಮಾಡಿದರು.
ಮಲ್ಲಪ್ಪ ರಡರಟ್ಟಿ, ಕಾಡಪ್ಪ ರೊಡ್ಡನ್ನವರ, ಮಾರುತಿ ಹೂಗಾರ, ಡಾ||ಎಸ್.ಎಸ್.ಪಾಟೀಲ ಕೆಂಪಣ್ಣ ಜುಂಜುರವಾಡ, ಅಡಿವೆಪ್ಪ ಗಿರೆನ್ನವರ, ಸುಧಾಕರ ಉಂದ್ರಿ ಪ್ರಕಾಶ ಪಾಟೀಲ, ಗಿರಿಮಲ್ಲಪ್ಪ ಗಿರೆನ್ನವರ,ಶಾಂತು ಹೂಗಾರ, ಮಹೇಶ ಹೂಗಾರ ಉಪಸ್ಥಿತರಿದ್ದರು ಡಾ.ಮಹಾದೇವ ಪೋತರಾಜ ಕಾರ್ಯಕ್ರಮ ನಿರೂಪಿಸಿದರು ಚಿದಾನಂದ ಹೂಗಾರ ಸ್ವಾಗತಿಸಿದರು ವಿವೇಕಾನಂದ ಹೂಗಾರ ವಂದಿಸಿದರು.