*ಅಡಿವೇಶ ಮುಧೋಳ.
ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಸೆ.22 ರಿಂದ ಸ್ಥಳೀಯ ಮಹಿಳೆಯರಿಂದ ಶ್ರೀದೇವಿಯ ಆರಾಧನೆ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಡಗರದಿಂದ ನಡೆಯುತ್ತಿವೆ.
ಸೆ.22 ರಿಂದ 9 ದಿನಗಳ ಕಾಲ ಸ್ಥಳೀಯ ಮಹಿಳೆಯರು ಮತ್ತು ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳು ದಿನಕ್ಕೂಂದು ಬಣ್ಣದ ಸೀರೆಯುಟ್ಟು ನವೋಲ್ಲಾಸದಿಂದ ಸಂಭ್ರಮಿಸುತ್ತಿದ್ದಾರೆ. ದಿನ ಬೆಳಗಾಗುವಷ್ಟರಲ್ಲಿ ಗ್ರಾಮದ ಹೊರವಲಯದಲ್ಲಿರುವ ಬನ್ನಿ ಗಿಡಕ್ಕೆ ಶುಭ ಗಳಿಗೆಯಲ್ಲಿ ಪೂಜೆ, ಪುನಸ್ಕಾರ, ಗಿಡಕ್ಕೆ ಪ್ರದಕ್ಷಣೆ ಹಾಕುವುದು, ನೂಲು ಸುತ್ತುವದು, ಆರತಿ, ನೈವೇದ್ಯ ಸಮರ್ಪನೆ ಜರುಗುತ್ತಿದೆ.
ಇಲ್ಲಿಯ ವಿವಿಧ ದೇವಾಲಯದಲ್ಲಿರುವ ದೇವರಿಗೆ ಮಹಾ ಪೂಜೆ, ವಿವಿಧ ಬಗೆಯ ಪುಷ್ಪಲಂಕಾರ, ದೀಪಾಲಂಕಾರ ಹಾಗೂ ನವರಾತ್ರಿಯ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಯ ಪರಾಕಾಷ್ಠೆ, ವೈಭವದಿಂದ ನಡೆಯುತ್ತಿವೆ. ಅದರಲ್ಲೂ ಸಡಗರದಿಂದ ಶ್ರೀದೇವಿಯ ಆರಾಧನೆಗೆ ಮಹಿಳೆಯರಿಂದ ನಡೆಯುತ್ತಿದೆ.
ಈ ವೇಳೆ ಶೋಭಾ ಮುಧೋಳ, ಮಹಾದೇವಿ ನೀಲಣ್ಣವರ, ಶಾಂತಾ ಮುಧೋಳ, ಅಕ್ಷತಾ ನೀಲಣ್ಣವರ, ಮಂಜುಳಾ ಮುಧೋಳ, ಸೀಮಾ ನೀಲಣ್ಣವರ, ಶೀವಲೀಲಾ ಮುಧೋಳ, ಗೌರವ್ವ ಪೂಜೇರಿ, ಮಹಾದೇವಿ ಮುಧೋಳ, ಶೀಲಾ ನೀಲಣ್ಣವರ, ಸೇರಿದಂತೆ ಹಲವಾರು ಜನ ಮಹಿಳೆಯರು, ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳು, ಇದ್ದರು.
