Breaking News
Home / ಬೆಳಗಾವಿ / ಕಲ್ಲೋಳಿ: ಜಗನ್ಮಾತೆಗೆ ವಿಶೇಷ ಪೂಜೆ  

ಕಲ್ಲೋಳಿ: ಜಗನ್ಮಾತೆಗೆ ವಿಶೇಷ ಪೂಜೆ  

Spread the love

ಮೂಡಲಗಿ: ತಾಲೂಕಿನ ಕಲ್ಲೋಳಿ ಪಟ್ಟಣದ ಸದ್ಗುರು ಶ್ರೀ ಯಲ್ಲಾಲಿಂಗೇಶ್ವರ ಮಠದಲ್ಲಿ 5ನೇ ವರ್ಷದ ನವರಾತ್ರಿ ಉತ್ಸವದ ನಿಮಿತ್ಯ ಪ್ರತಿಷ್ಠಾಪಿಸಿದ ಶ್ರೀ ದುರ್ಗಾ ಮಾತೆಗೆ ವಿಶೇಷ ಪೂಜಾ ಕಾರ್ಯಕ್ರಮ ಹಾಗೂ ಶ್ರೀ ಚಕ್ರ ರುದ್ರಾಭಿಷೇಕ ಕಾರ್ಯಕ್ರಮ ಮಂಗಳವಾರ ನೆರವೇರಿತು,
 ಶ್ರೀ ಮತ್ಯುಂಜಯ ಈರಯ್ಯ ಹಿರೇಮಠ ಹಾಗೂ ಶ್ರೀ ಗುರುಸಿದ್ದಯ್ಯ ಸಿದ್ದಲಿಂಗಯ್ಯ ಹಿರೇಮಠ ಮತ್ತು ಶ್ರೀ ಮಹಾಂತೇಶ ಮಹಾದೇವ ಗೋರೋಶಿ ಅವರು ರುದ್ರಾಭಿಷೇಕ ಕಾರ್ಯಕ್ರಮ ನೆರವೇರಿಸಿದರು ಹಾಗೂ ಮುತೈದೆಯರಿಂದ ಗ್ರಾಮದ ಆದಿದೇವತೆ  ಮಹಾಲಕ್ಷ್ಮೀ ದೇವಿಗೆ ಉಡಿತುಂಬುವ ಕಾರ್ಯಕ್ರಮ
ಶ್ರೀ ಯಲ್ಲಾಲಿಂಗೇಶ್ವರ ಮಠದ ಪೀಠಾಧಿಪತಿ ಮಾತೋಶ್ರೀ ಅಕ್ಕಮಹಾದೇವಿ ಅಮ್ಮನವರಿಂದ ನೆರವೇರಿತು.
ಈ ಸಂಧರ್ಭದಲ್ಲಿ  ಮಂಜುಳಾ  ಹಿರೇಮಠ,  ಕಲ್ಲವ್ವ  ನೇರ್ಲಿ,  ಗಂಗೂಬಾಯಿ  ಬೆಳಕೂಡ,  ಶ್ರೀ ಮಠದ ಸಕಲ ಸದ್ಭಕ್ತರು ಮುತೈದೆಯರು ಪಾಲ್ಗೊಂಡಿದ್ದರು.

Spread the love

About inmudalgi

Check Also

ಗುಣಾತ್ಮಕ ಶಿಕ್ಷಣದ ಮೌಲ್ಯವನ್ನು ಪ್ರತಿಬಿಂಬಿಸಿದ ಜ್ಞಾನ ಗಂಗೋತ್ರಿಯ ವಾರ್ಷಿಕ ಸ್ನೇಹ ಸಮ್ಮೇಳನ ಸಂಸ್ಕಾರ ಮತ್ತು ಸಾಧನೆಯ ಅನನ್ಯ ಸಂಗಮವಾಗಿ ಮೂಡಿಬಂದ ‘ಸ್ಪಂದನ’ ಕಾರ್ಯಕ್ರಮ

Spread the love ಮೂಡಲಗಿ: “ಕಳೆದ ಹಲವು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡಾ ೧೦೦ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿರುವ ರಾಜಾಪೂರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ