ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲಬಹುದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆಯನ್ನು ಅ.2ರಂದು ನಡೆಯಿತು.
ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಅವರು ಗಾಂಧಿ ಮತ್ತು ಶಾಸ್ತ್ರಿ ಭಾವ ಚಿತ್ರಕ್ಕೆ ಪೊಜೆ, ಪುಷ್ಪಾರ್ಪನೆ ನೆರವೇರಿಸಿ ಮಾತನಾಡಿ, ಮಹಾತ್ಮ ಗಾಂಧಿ ಮತ್ತು ಲಾಲಬಹದ್ದೂರ್ ಶಾಸ್ತ್ರಿ ಅವರು ದೇಶಕ್ಕಾಗಿ ತಮ್ಮ ಬದುಕನ್ನೇ ತ್ಯಾಗ ಮಾಡಿದ ಸಂಗತಿಗಳ ಕುರಿತು ತಿಳಿಸಿದರು.
ಶಾಲೆಯ ಎಸ್‍ಡಿಎಮ್‍ಸಿ ಅಧ್ಯಕ್ಷ ರಾಮಣ್ಣ ನೀಲಣ್ಣವರ, ಶಿಕ್ಷಕರಾದ ಈಶ್ವರ ಮುನವಳ್ಳಿ, ವೈ.ಎಮ್.ವಗ್ಗರ, ಗಣಪತಿ ಭಾಗೋಜಿ, ಮಂಜುನಾಥ ಸವತಿಕಾಯಿ, ಆನಂದ ಬಡಿಗೇರ, ಚೇತನ ಕಮತ, ಸವಿತಾ ಜೋಗಿ, ಅರಳಿಮಟ್ಟಿ, ಮಲ್ಹಾರಿ ಪೋಳ, ಎಸ್‍ಡಿಎಮ್‍ಸಿ ಸದಸ್ಯರು, ಶಿಕ್ಷಕರು, ಸಿಬಂ್ಬದಿ ವರ್ಗ, ವಿದ್ಯಾರ್ಥಿಗಳು ಇದ್ದರು.
ಗ್ರಾಮ ಪಂಚಾಯ್ತಿ: ಬೆಟಗೇರಿ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲಬಹುದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ ಕಾರ್ಯಕ್ರಮ ಅ.2ರಂದು ನಡೆಯಿತು. ಸ್ಥಳೀಯ ಗ್ರಾಮ ಪಂಚಾಯ್ತಿ ಪಿಡಿಒ ಎಮ್.ಎಲ್.ಯಡ್ರಾಂವಿ ಮಹಾತ್ಮ ಗಾಂಧಿ ಮತ್ತು ಲಾಲಬಹುದ್ದೂರ್ ಶಾಸ್ತ್ರಿ ಭಾವ ಚಿತ್ರಕ್ಕೆ ಪೂಜೆ, ಪುಷ್ಪಾರ್ಪನೆ ನೆರವೇರಿಸಿದರು.
ಗ್ರಾಪಂ ಅಧ್ಯಕ್ಷೆ ಯಲ್ಲವ್ವ ಚಂದರಗಿ, ಕಾರ್ಯದರ್ಶಿ ಎಮ್.ಪಿ.ತಳವಾರ, ಕರ ವಸೂಲಿಗಾರ ಸುರೇಶ ಬಾಣಸಿ, ಬಸವರಾಜ ಪಣದಿ, ವಿಠಲ ಚಂದರಗಿ, ಮುತ್ತೆಪ್ಪ ವಡೇರ, ಶಿವಾನಂದ ಐದುಡ್ಡಿ, ಈರಣ್ಣ ದಂಡಿನ, ಮೇಳೆಪ್ಪ ಹರಿಜನ, ಶಿವಾನಂದ ತೋಟಗಿ, ಗ್ರಾಪಂ ಸದಸ್ಯರು, ಸಿಬ್ಬಂದಿ, ಗ್ರಾಮಸ್ಥರು, ಗಣ್ಯರು, ಮತ್ತೀತರರು ಇದ್ದರು.
ಪ್ರಾಥಮಿಕ ಕನ್ನಡ ಶಾಲೆ: ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲಬಹುದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ ಕಾರ್ಯಕ್ರಮ ಅ.2ರಂದು ನಡೆಯಿತು. ಪ್ರಧಾನ ಗುರು ವೈ.ಸಿ. ಶೀಗಿಹಳ್ಳಿ, ಗಾಂಧಿ ಮತ್ತು ಶಾಸ್ತ್ರಿ ಭಾವ ಚಿತ್ರಕ್ಕೆ ಪೊಜೆ, ಪುಷ್ಪಾರ್ಪನೆ ನೆರವೇರಿಸಿದರು. ಶಿಕ್ಷಕರಾದ ಎಸ್.ಬಿ.ಸನದಿ, ಉಭಯ ಶಾಲೆಗಳ ಎಸ್‍ಡಿಎಮ್‍ಸಿ ಅಧ್ಯಕ್ಷರು, ಸದಸ್ಯರು, ಶಿಕ್ಷಕರು, ಮಕ್ಕಳು, ಇತರರು ಇದ್ದರು.
IN MUDALGI Latest Kannada News