ಕುರುಹಿನಶೆಟ್ಟಿ ಸೊಸಾಯಿಟಿಯಿಂದ ಪ್ರಭಾ ಶುಗರ್ಸ್ ಅಧ್ಯಕ್ಷ-ಉಪಾಧ್ಯಕ್ಷರಿಗೆ ಸತ್ಕಾರ
inmudalgi
3 ದಿನಗಳು ago
ಬೆಳಗಾವಿ, ರಾಜ್ಯ
ಮೂಡಲಗಿ: ಘಟಪ್ರಬಾ ಶುಗರ್ಸ್ ಕಾರ್ಖಾನೆಯ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡ ತಾಲೂಕಿನ ಜೋಕಾನಟ್ಟಿಯ ಶಿದ್ಲಿಂಗಪ್ಪ ಸಿದ್ದಪ್ಪ ಕಂಬಳಿ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ರಂಗಾಪೂರದ ಮಲ್ಲಿಕಾರ್ಜುನ ಭೀಮಪ್ಪ ಕಬ್ಬೂರ ಅವರನ್ನು ಪಟ್ಟಣದ ಕುರುಹಿನಶೆಟ್ಟಿ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಯ ಅಧ್ಯಕ್ಷರು ಮತ್ತು ಮಂಡಳಿಯವರು ಸೊಸಾಯಿಟಿಯ ಸಭಾ ಭವನದಲ್ಲಿ ಶುಕ್ರವಾರದಂದು ಸತ್ಕರಿಸಿ ಗೌರವಿಸಿದರು.
ಸತ್ಕಾರ ಸ್ವೀಕರಿಸಿದ ಕಾರ್ಖಾನೆಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಕಬ್ಬೂರ ಮಾತನಾಡಿ, ಈ ಭಾಗದ ರೈತರ ಆಶಾಕಿರಣವಾದ ಘಟಪ್ರಭಾ ಶುಗರ್ಸ್ ಕಾರ್ಖಾನೆಗೆ ನಮ್ಮನ್ನು ಅಧ್ಯಕ್ಷ-ಉಪಾಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ ಅರಭಾವಿ ಶಾಸಕ ಬಾಲಚಂದ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತ್ತು ಜಾರಕಿಹೊಳಿ ಸಹೋದರ ಮಾರ್ಗದರ್ಶನದಲ್ಲಿ ಕಾರ್ಖಾನೆಯನ್ನು ಅಭಿವೃದ್ಧಿ ಪಡಿಸಲು ಶ್ರಮಿಸುವದಾಗಿ ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ಸೊಸಾಯಿಟಿಯ ಅಧ್ಯಕ್ಷರಾದ ಸುಭಾಷ ಬೆಳಕೂಡ, ಉಪಾಧ್ಯಕ್ಷರಾದ ಐ.ಎಮ್ ಕಳ್ಳಿಮನಿ. ನಿರ್ದೇಶಕರಾದ ಬಿ.ಸಿಮುಗಳಖೋಡ, ಎಲ್.ಎಲ್.ಪೂಜೇರಿ, ಜಿ.ಕೆ.ಮುರಗೋಡ, ಬಿ.ಬಿ.ಬೆಳಕೂಡ, ವ್ಹಿ.ಎಸ್.ಶಿಲವಂತ, ಆರ್.ಡಿ.ಬಳಿಗಾರ, ಉಮಾ ಬೆಳಕೂಡ, ಶಾಂತವ್ವಾ ಬೋರಗಲ್, ರುಕ್ಮವ್ವಾ ಪೂಜೇರಿ, ಮಾಲಾ ಬೆಳಕೂಡ, ಶ್ಯಾಲನ್ ಕೊಡತೆ, ಸೊಸಾಯಿಟಿಯ ಪ್ರಧಾನ ವ್ಯವಸ್ಥಾಪಕ ರಮೇಶ ಒಂಟಗೂಡಿ ಹಾಗೂ ಅಶೋಕ ಭೀ ಭಾಗೋಜಿ ವಕೀಲರು ಹಾಗೂ ಕಾನೂನು ಸಲಹೆಗಾರರು, ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.