ಕುಲಗೋಡ:ಮ: ಹಿಳೆಯರನ್ನು ಸ್ವಾವಲಂಬಿಗಳಾಗಿಸಲು ಸಂಜೀವಿನಿ ಮಾಸಿಕ ಸಂತೆ ಗ್ರಾಮೀಣ ಭಾಗದಲ್ಲಿ ನಡೆಸುತ್ತಿದ್ದು ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಆದಾಯವನ್ನು ಹೆಚ್ಚಿಸಲು ಮತ್ತು ಕೂಡಿ ದುಡಿದು ಕೂಡಿ ಬಾಳೋಣ ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ಇವರು ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮದಲ್ಲಿ ಜಿಪಂ-ತಾಪಂ ಗ್ರಾಮ ಪಂಚಾಯತ ಹಾಗೂ ಕೌಶಲ್ಯಾಭಿವೃದ್ಧಿ ಉಧ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ. ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಇವರ ಆಯೋಜಿಸಿದ ಸಂಜೀವಿನಿ ಮಾಸಿಕ ಸಂತೆಯನ್ನು ಶನಿವಾರ ಮಧ್ಯಾಹ್ನ ಉದ್ಘಾಟಿಸಿ ಮಾತನಾಡಿ ಒಕ್ಕೂಟ್ಟದಿಂದ ಧನ ಸಹಾಯ ಪಡೆದು ಕೈಗಾರಿಕೆಗಳಲ್ಲಿ ತೋಡಗಿಸಿ ಬದುಕು ಕಟ್ಟಿಕೊಳ್ಳುವಲ್ಲಿ ದಾರಿ ತೋರುತ್ತಿದೆ. ಪ್ರತಿ ಕುಟುಂಬದ ಕನಿಷ್ಠ ಒಬ್ಬ ಮಹಿಳೆಯು ಈ ಯೋಜನೆಯ ಲಾಭ ಪಡೆಯುವ ಮೂಲಕ ಸ್ವ-ಉದ್ಯೋಗ ಪ್ರಾರಂಭಿಸಿ, ಸಮಾಜದಲ್ಲಿ ಸ್ವಾವಲಂಬಿಯಾಗಿ ಬದುಕಬೇಕು ಎಂದರು.
ಸಂತೆಯಲ್ಲಿ ಹೆನಿಕೆಯ ಸಾಮಗ್ರಿಗಳು. ಸಾವಿಗೆ. ಉಪ್ಪಿನಕಾಯಿ. ಹಪ್ಪಳ. ಸಾವಯವ ತರಕಾರಿಗಳು. ಬಳೆ.ಸೀರೆ. ರೊಟ್ಟಿ. ತುಪ್ಪ. ಸೇರಿದಂತೆ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಿತು. ಹಾಗೂ ವಿವಿಧ ಸ್ವ-ಸಹಾಯ ಸಂಘಗಳಿಗೆ ಧನ ಸಹಾಯದ ಚಕ್ ನೀಡಿದರು ಮತ್ತು ಸ್ವಚ್ಛತಾಗಾರಗಿಗೆ ಸನ್ಮಾನಿಸಿದರು.
ಕಾರ್ಯಕ್ರಮ ಕುರಿತು ಮುಖಂಡರಾದ ಬಸನಗೌಡ ಪಾಟೀಲ. ಗ್ರಾಪಂ ಅಧ್ಯಕ್ಷ ತಮ್ಮಣ್ಣಾ ದೇವರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಬಸನಗೌಡ ಪಾಟೀಲ. ಸುಭಾಸ ವಂಟಗೋಡಿ. ಗ್ರಾಪಂ ಅಧ್ಯಕ್ಷ ತಮ್ಮಣ್ಣಾ ದೇವರ. ಹರ್ಷಾ ಶೆಳಕೆ. ಅಶೋಕ ಪೂಜೇರಿ. ಸಂಜು ಹುದ್ದಾರ ಬಸು ಯರಗಟ್ಟಿ. ಶ್ರೀಪತಿ ಗಣಿ. ಮಹಾದೇವ ಶೇಟ್ಟಿ. ವಾಸಪ್ಪ ಪೂಜೇರಿ. ಗೋವಿಂದ ಪೂಜೇರಿ. ಸದಾಶಿವ ಗುಡಗುಡಿ. ಶೋಭಾ ಬೈರನಟ್ಟಿ. ವಿಮಲಾ ಸಸಾಲಟ್ಟಿ. ದ್ಯಾಮವ್ವ ನಂದಿ. ಶೋಭಾ ಪೂಜೇರಿ. ಗೌರವ್ವ ಸಣ್ಣಕ್ಕಿ. ಸಂಜೀವಿನಿ ಮಹಿಳಾ ಒಕ್ಕೂಟದ ಮಾಲುತಾಯಿ ವಂಟಗೋಡಿ.ಅನೂಪಮ ಅಂಗಡಿ. ಸುಶೀಲಾ ಮಳಲಿ. ಗ್ರಾಪಂ ಸರ್ವ ಸದಸ್ಯರು. ಸಂಜೀವಿನಿ ತಾಲೂಕು ಅಭಿಯಾನ ನಿರ್ವಹಣಾ ಘಟಕ ಗೋಕಾಕ-ಮೂಡಲಗಿ ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಗ್ರಾಮಸ್ಥರು ಇದ್ದರು.