
ಮೂಡಲಗಿ : ವಿದ್ಯಾರ್ಥಿಗಳಲ್ಲಿ ಕಠಿಣ ಪರಿಶ್ರಮ ದೃಢವಾದ ಸಂಕಲ್ಪ ಮತ್ತು ಅರ್ಪಣಾ ಮನೋಭಾವ ಈ ಮೂರು ಗುಣಗಳು ನಿಮ್ಮಲ್ಲಿದ್ದರೆ ನಿಮ್ಮ ಸಾಧನೆಗೆ ಮೆರೆಗಳೇ ಇರುವುದಿಲ್ಲ ಸಾಧನೆ ಮಾಡುವ ಛಲದೊಂದಿಗೆ ದೈಹಿಕ ಕ್ಷಮತೆ ಮತ್ತು ಕ್ರೀಡಾ ಸ್ಪೂರ್ತಿ ರಾಜ್ಯ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದವರೆಗೆ ನಮ್ಮನ್ನು ಬೆಳಸುತ್ತದೆ ಕ್ರೀಡೆ ಶೈಕ್ಷಣಿಕ ಸಾಧನೆಯ ಮತ್ತೋಂದು ಕ್ಷೇತ್ರ ಕ್ರೀಡಾ ಸಾದನೆಯು ಶೈಕ್ಷಣಿಕ ಸಾದನೆಯ ಮೆಟ್ಟಿಲು ಎಂದು ಅಂತರಾಷ್ಟ್ರೀಯ ಮಟ್ಟದ ಪ್ಯಾರಾ ಟೆಕ್ವಾಂಡೊ ಚಾಂಪಿಯನ್ ಲಕ್ಷ್ಮಿ ರಡರಟ್ಟಿ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಆರ್ ಡಿ ಎಸ್ ಶ್ರೀ ವಿದ್ಯಾನಿಕೇತನ ಸಿಬಿಎಸ್‍ಇ ಶಾಲೆಯಲ್ಲಿ ಜರುಗಿದ ವಾರ್ಷಿಕ ಕ್ರೀಡಾಕೂಟಗಳನ್ನು ಉದ್ಘಾಟಿಸಿ ಸಿಗದ ಖುಷಿಗೆ ನನಸಾಗುವ ಆಸೆ ಪಡುವುದು ಮೂರ್ಖತನ ಸಿಗುವ ಖುಷಿಯಲ್ಲಿ ನನಸಾಗುವ ಕನಸು ಕಟ್ಟಿ ಬದುಕುವ ಜೀವನ ನಾವೂ ರೂಡಿಸಿಕೊಳ್ಳಬೇಕು ಸೋಲು ಮನುಷ್ಯನಲ್ಲಿ ಗೆಲ್ಲಬೇಕು ಎಂಬ ಛಲ ಹುಟ್ಟುಹಾಕುತ್ತದೆ ಕ್ರೀಡೆಯಲ್ಲಿ ಜಯ ಸಾದಿಸಲು ಪ್ರತಿನಿತ್ಯ ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು ಅಗತ್ಯವಿದೆ ಎಂದರು.
ಸಂಸ್ಥೆಯ ಅಧ್ಯಕ್ಷರಾದ ಸಂತೋಷ ತಮ್ಮಣ್ಣಾ ಪಾರ್ಶಿ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿ ಆಟಗಳು ಜೀವನ ಅನ್ನೋದು ಸೋಲು – ಗೆಲುವಿನ ಆಟ ಗೆದ್ದವನಿಗೆ ಸೋಲಬಾರದೆಂಬ ಭಯ ಇದ್ದರೆ ಸೋತವನಿಗೆ ಗೆಲ್ಲಬೇಕೆಂಬ ಛಲವಿರುತ್ತದೆ, ಪ್ರಯತ್ನವನ್ನು ಎಂದಿಗೂ ನಿಲ್ಲಿಸಬೇಡಿ ಭರವಸೆಯನ್ನು ಯಾವತ್ತಿಗೂ ಕಳೆದುಕೊಳ್ಳಬೇಡಿ ನಿಮ್ಮ ದಿನ ಬಂದೆ ಬರುತ್ತದೆ ಎಂದು ವಿದ್ಯಾರ್ಥಿಗಳಿಗೆ ಆಶಾಭಾವನೆ ನೀಡಿದರು.
ಶಾಲೆಯ ಪ್ರಾಚಾರ್ಯ ದ್ರಾಕ್ಷಾಯಿಣಿ ಮಠಪತಿ ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರತಿಜ್ಞಾ ವಿಧಿ ಬೋದಿಸಿದರು. ಕಾರ್ಯಕ್ರಮದಲ್ಲಿ ಹಿರಿಯರಾದ ಕಸ್ತೂರಮ್ಮ ಟಿ. ಪಾರ್ಶಿ, ಸಂಸ್ಥೆಯ ಉಪಾಧ್ಯಕ್ಷರಾದ ಪೂಜಾ ಸಂತೋಷ ಪಾರ್ಶಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳಿಂದ ವಾರ್ಷಿಕ ಕ್ರೀಡಾ ಚಟುವಟಿಕೆಗಳು ಜರುಗಿ ಸೇರಿದ ಎಲ್ಲ ಪಾಲಕರನ್ನು ರಂಜಿಸಿದರು.
ದೈಹಿಕ ಶಿಕ್ಷಕರಾದ ವಿವೇಕ್ ರೊಳ್ಳಿ ನಿರೂಪಿಸಿದರು. ಶಿಕ್ಷಕಿ ಸೌಜನ್ಯಾ ಮಿರಾಶಿ ಸ್ವಾಗತಿಸಿದರು, ದೈಹಿಕ ಶಿಕ್ಷಕಿ ಸುಹಾಸಿನಿ ಮಗದುಮ್ ವಂದಿಸಿದರು.
IN MUDALGI Latest Kannada News