
ಬೆಟಗೇರಿ: ಈ ಪ್ರಸಕ್ತ ವರ್ಷ ನಮ್ಮ ಗುರಿ ಶೇಕಡಾ ನೂರರಷ್ಷು ಎಸ್‍ಎಸ್‍ಎಲ್‍ಸಿ ಫಲಿತಾಂಶ ಮಾಡಬೇಕೆಂಬ ಭರವಸೆಯಿದೆ. ಶಾಲೆಯ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಪ್ರಯತ್ನಿಸಲಾಗುವುದು ಎಂದು ಉದಗಟ್ಟಿ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ಅರಿಹಂತ ಬಿರಾದಾರ ಪಾಟೀಲ ಹೇಳಿದರು.
ಗೋಕಾಕ ತಾಲೂಕಿನ ಉದಗಟ್ಟಿ ಸರಕಾರಿ ಪ್ರೌಢ ಶಾಲೆಯಲ್ಲಿ ಇತ್ತೀಚೆಗೆ ನಡೆದ 10ನೇ ತರಗತಿ ವಿದ್ಯಾರ್ಥಿಗಳ ಪಾಲಕರ ಮತ್ತು ತಾಯಂದಿರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣವು ಕೇವಲ ಪುಸ್ತಕದ ಅಕ್ಷರಗಳಲ್ಲ, ಭವಿಷ್ಯ ನಿರ್ಮಾಣದ ಅಡಿಗಲ್ಲು ಆಗಿದೆ. ನಮ್ಮ ಮಕ್ಕಳು ನಮ್ಮ ಹೊಣೆ ಎಂಬಂತೆ ಮಕ್ಕಳ ಭವಿಷ್ಯ ನಿರ್ಮಾದಲ್ಲಿ ಪಾಲಕರ ಮತ್ತು ತಾಯಂದಿರ ಪಾತ್ರವೂ ಸಹ ಅಷ್ಟೇ ಮುಖ್ಯವಾಗಿದೆ ಎಂದರು.
ಶಾಲೆಯ ಎಸ್‍ಎಸ್‍ಎಲ್‍ಸಿ ಫಲಿತಾಂಶವನ್ನು ಶೇಕಡಾ ನೂರರಷ್ಟು ಸಾಧಿಸುವ ಗುರಿಯೊಂದಿಗೆ ಶಾಲೆಯಲ್ಲಿ ಕೈಗೊಂಡ ವಿಶೇಷ ತರಗತಿಗಳು, ಘಟಕ ಪರೀಕ್ಷೆ, ರಸಪ್ರಶ್ನೆ, ವಿದ್ಯಾರ್ಥಿಗಳ ಮನೆ ಮನೆಗೆ ಶಿಕ್ಷಕರು ಭೇಟಿ, ಗುಂಪು ಅಧ್ಯಯನ ಸೇರಿದಂತೆ ವಿವಿಧ ವಿಶೇಷ ಶೈಕ್ಷಣಿಕ ಚಟುವಟಿಕೆಗಳ ಕುರಿತು ಹಾಗೂ ಉತ್ತಮ ಅಂಕಗಳೊಂದಿಗೆ ಶಾಲೆಯ ಮಕ್ಕಳು ಉತ್ತೀರ್ಣರಾಗಲು ಹಲವಾರು ಕ್ರಮ ಕೈಗೊಳ್ಲಲಾಗುವುದು ಎಂದು ಶಾಲೆಯ ಮುಖ್ಯೋಪಾಧ್ಯಯ ಅರಿಹಂತ ಬಿರಾದಾರ ಪಾಟೀಲ ಹಲವು ವಿಷಯಗಳ ಕುರಿತು ವಿವಿರಿಸಿದರು.
ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಮತ್ತು ಶೈಕ್ಷಣಿಕ ವಿವಿಧ ಯೋಜನೆಗಳ ಬಗ್ಗೆ ಪಾಲಕರಿಗೆ ಸೂಚಿಸಲಾಯಿತು. ಶಾಲೆಯ ವಿದ್ಯಾರ್ಥಿ ಪಾಲಕರು ಮತ್ತು ತಾಯಂದಿರು ಶಿಕ್ಷಕರು ಸೇರಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಈ ವೇಳೆ ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಶಾಲೆಯ 10ನೇ ತರಗತಿಯ ಮೊದಲ ಐದು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಶಿಕ್ಷಕರಾದ ಡಿ.ಎಮ್.ಇರಾಜೆ, ವಿದ್ಯಾಶ್ರೀ ಕೊಡ್ಲಿ, ಬಿ.ಎಸ್.ಕಲಬಾವಿ ಸೇರಿದಂತೆ ಪಾಲಕರು, ತಾಯಂದಿರು, ಶಾಲೆಯ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳು, ಶಿಕ್ಷಕರು, ಎಸ್.ಡಿ.ಎಮ್.ಸಿ ಸದಸ್ಯರು, ಶಿಕ್ಷಣಪ್ರೇಮಿಗಳು, ಇತರರು ಇದ್ದರು.
IN MUDALGI Latest Kannada News