Breaking News
Home / Uncategorized / ರೈತ ಹೋರಾಟಕ್ಕೆ ಬೆಂಬಲಿಸಿ ಮೂಡಲಗಿ ಸಂಪೂರ್ಣ ಬಂದ್

ರೈತ ಹೋರಾಟಕ್ಕೆ ಬೆಂಬಲಿಸಿ ಮೂಡಲಗಿ ಸಂಪೂರ್ಣ ಬಂದ್

Spread the love

ಮೂಡಲಗಿ,  ಗುರ್ಲಾಪೂರ ಕ್ರಾಸ್ ದಲ್ಲಿ ಕಳೆದ ಏಳು ದಿನಗಳಿಂದ ರೈತರು ಕಬ್ಬಿನ ದರ ನಿಗದಿಗಾಗಿ ಮಾಡುತ್ತಿರುವಂತ ಹೋರಾಟಕ್ಕೆ ಬೆಂಬಲಿಸಿ ಮೂಡಲಗಿ ಪಟ್ಟಣ ಸಂಪೂರ್ಣ ಬಂದ್ ಮಾಡಲಾಗಿತ್ತು.
ಗುರುವಾರ ಮುಂಜಾನೆ ಹತ್ತು ಗಂಟೆಯಿಂದ ಸಹಕಾರಿ ಸಂಘಗಳ ಒಕ್ಕೂಟದ ಸದಸ್ಯರು, ಸಹಕಾರಿ ಸಂಘಗಳ ಪದಾಧಿಕಾರಿಗಳು, ಎಲ್ಲ ತರಹದ ವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳು, ಉದ್ಯಮಿಗಳು, ಎಬಿವಿಪಿ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಅಂಗಡಿ-ಮುಗ್ಗಟ್ಟು, ಸಹಕಾರಿ ಸೊಸೈಟಿಗಳನ್ನು ಬಂದ್ ಮಾಡಿ ಟೈರಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆಯಲ್ಲಿ ಪಾಲ್ಗೋಂಡರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸರಕಾರದ ವಿರುದ್ದು ಧಿಕ್ಕಾರ ಕೂಗುತ್ತ ಮೆರವಣಿಗೆ ನಡೆಸಿದರು.
ಯುವಕರು ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರ ಅಣುಕು ಶವ ತಂದು ಕಲ್ಮೇಶ್ವರ ವೃತ್ತದಿಂದ ಗುರ್ಲಾಪೂರ ಕ್ರಾಸ್‍ದ ಪ್ರತಭಟನಾ ಸ್ಥಳದವರೆಗೂ 4 ಕೀಮಿ ಉದ್ದಕ್ಕು ಶವ ಯಾತ್ರೆ ಮಾಡಿದರು. ಬೈಕ್ ರ್ಯಾಲಿ ನಡೆಸಿ ಬೆಂಬಲ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸಂತೋಷ ಸೋನವಲಕರ, ಶಿವಬಸು ಹಂದಿಗುಂದ, ಈರಪ್ಪ ಢವಳೇಶ್ವರ, ಸಂಜು ಕಮತೆ, ಪ್ರಕಾಶ ಕಾಳಪ್ಪಗೋಳ, ಗುರು ಗಂಗಣ್ಣವರ, ಪ್ರಶಾಂತ ನಿಡಗುಂದಿ, ಗಿರೀಶ ಢವಳೇಶ್ವರ, ಮಲ್ಲಪ್ಪ ಮದಗುಣಕಿ, ಈಶ್ವರ ಮುರಗೋಡ, ವರ್ಧಮಾನ ಬೋಳಿ, ಸಿ.ಎಸ್.ಬಗನಾಳ, ಗೂಳಪ್ಪ ಬಿಜಗುಪ್ಪಿ, ಅರ್ಜುನ ಗಾಣಿಗೇರ, ಶಿವಬಸು ಸುಣಧೋಳಿ, ಸಂತೋಷ ಪಾರ್ಶಿ, ಸಂಜು ನಾಶಿ, ಪ್ರಕಾಶ ಮುಧೋಳ, ಹನುಮಮತ ಸತರಡ್ಡಿ, ಸುಭಾಸ ಅವಟಿ, ಸತ್ಯಪ್ಪ ವಾಲಿ ಮತ್ತಿತರರು ಇದ್ದರು.


Spread the love

About inmudalgi

Check Also

ಬೆಟಗೇರಿ ಗ್ರಾಮ ಪಂಚಾಯತಿ ಗ್ರಂಥಾಲಯಕ್ಕೆ ಪುಸ್ತಕ ಕೊಡುಗೆ

Spread the loveಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲೆಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ