ಬೆಟಗೇರಿ: ಚಿತ್ರದುರ್ಗ ಕೋಟೆಯ ಪಾಳೆಯಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಕಹಳೆ ಮದ್ದಹನುಮಪ್ಪನ ಹೆಂಡತಿ. ಹೈದರ ಅಲಿಯ ಪಡೆಗಳೂಂದಿಗೆ ಏಕಾಂಗಿಯಾಗಿ ಹೋರಾಡಿದ ಧೀರ ಮಹಿಳೆಯಾಗಿದ್ದಳು ಎಂದು ಬೆಟಗೇರಿ ಯುವ ಮುಖಂಡ ರಾಮಣ್ಣ ನೀಲಣ್ಣವರ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮ ಪಂಚಾಯ್ತಿ ಕಾರ್ಯಾಲಯದಲ್ಲಿ ನ.11ರಂದು ನಡೆದ ವೀರ ವನಿತೆ ಒನಕೆ ಓಬವ್ವ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ವೀರ ವನಿತೆ ಒನಕೆ ಓಬವ್ವ ವೀರ ಯೋಧಿಯಾಗಿದ್ದು, ಓಬವ್ವಳ ಬದುಕಿನ ತತ್ವಾದರ್ಶಗಳನ್ನು ಅವಡಿಸಿಕೊಳ್ಳಬೇಕು ಎಂದರು.
ವೀರ ವನಿತೆ ಒನಕೆ ಓಬವ್ವಳ ಭಾವ ಚಿತ್ರಕ್ಕೆ ಪೂಜೆ, ಪುಷ್ಪಾರ್ಪನೆ ಕಾರ್ಯಕ್ರಮ ನೆರವೇರಿದ ಬಳಿಕ ಸಿಹಿ ವಿತರಣೆ ಕಾರ್ಯಕ್ರಮ ನಡೆಯಿತು.
ಪಿಡಿಒ ಎಂ.ಎಲ್.ಯಡ್ರಾಂವಿ, ಬಾಲಕೃಷ್ಣ ರಜಪೂತ, ಸುರೇಶ ಬಾಣಸಿ, ಮಂಜುನಾಥ ಕಂಬಿ, ಈರಪ್ಪ ದಂಡಿನ, ಸಿದ್ರಾಮ ಚಂದರಗಿ, ಬಸಪ್ಪ ಪೇದನ್ನವರ, ವಿಠಲ ಚಂದರಗಿ, ಗ್ರಾಮ ಪಂಚಾಯತ ಆಡಳಿತ ಮಂಡಳಿ ಸದಸ್ಯರು, ವೀರ ವನಿತೆ ಒನಕೆ ಓಬವ್ವ ಅಭಿಮಾನಿ ಬಳಗದ ಸದಸ್ಯರು, ಗಣ್ಯರು, ಯುವಕರು,
IN MUDALGI Latest Kannada News