
ಬೆಟಗೇರಿ:ಪ್ರತಿ ಮನೆಯಲ್ಲಿ ಶಾಲಾ ಮಕ್ಕಳ ಓದಿನ ಕಡೆ ತಂದೆ, ತಾಯಿ ವಿಶೇಷ ಗಮನ ಹರಿಸಿದರೆ ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಾಧಿಸುವುದರಲ್ಲಿ ಎರಡು ಮಾತಿಲ್ಲ, ಸರಕಾರಿ ಶಾಲೆಯಲ್ಲಿ ದೊರಕುವ ಶೈಕ್ಷಣಿಕ ಸಹಾಯ, ಸೌಲಭ್ಯಗಳು ಯಾವುದೇ ಖಾಸಗಿ ಶಾಲೆಗಳಲ್ಲಿ ದೊರಕುವುದಿಲ್ಲಾ ಎಂದು ಬೆಟಗೇರಿ ವಿವಿಡಿ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಯ ರಮೇಶ ಅಳಗುಂಡಿ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ವಿವಿಡಿ ಸರ್ಕಾರಿ ಪ್ರೌಢ ಶಾಲೆಯ ಸಹಯೋಗದಲ್ಲಿ ನ.14ರಂದು ಮಕ್ಕಳ ದಿನಾಚರಣೆ ಪ್ರಯುಕ್ತ ನಡೆದ ಮಕ್ಕಳ ಪೋಷಕರ ಹಾಗೂ ಶಿಕ್ಷಕರ ಮಹಾಸಭೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಾಲಾ ಮಕ್ಕಳ ಪೋಷಕರ ಮತ್ತು ಶಿಕ್ಷಕರ ನಡುವೆ ಅವಿನಾಭಾವ ಸಂಬಂಧವಿರಬೇಕು. ಬೆಟಗೇರಿ ಸರಕಾರಿ ಪ್ರೌಢ ಶಾಲೆಯ ಸಮಗ್ರ ಪ್ರಗತಿಗೆ ಸ್ಥಳೀಯರು ನೀಡುತ್ತಿರುವ ಸಕಲ ಸಹಾಯ, ಸಹಕಾರದ ಸೇವೆ ಅವಿಸ್ಮರಣೀಯವಾಗಿದೆ ಎಂದರು.
ಶಾಲೆಯ ಸಹ ಶಿಕ್ಷಕರಾದ ಈರಣ್ಣ ಪಟಗುಂದಿ, ಪ್ರಕಾಶ ಕುರಬೇಟ ಅವರು, ಶಾಲಾ ಮಕ್ಕಳ ಶೈಕ್ಷಣಿಕ ಸಮಗ್ರ ಬೆಳವಣಿಗೆ, ಒಳ್ಳೆಯ ಸಂಸ್ಕಾರ ನೀಡುವಲ್ಲಿ ತಂದೆ ಮತ್ತು ತಾಯಿಂದಿರ ಪಾತ್ರ, ಖಾಸಗಿ ಮತ್ತು ಸರಕಾರಿ ಶಾಲಾ ಮಕ್ಕಳಿಗೆ ಶೈಕ್ಷಣಿಕ ಸಹಾಯ, ಸೌಲಭ್ಯಗಳ ವ್ಯತ್ಯಾಸ ಕುರಿತು ಈ ವೇಳೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸ್ಥಳೀಯ ಪ್ರೌಢ ಶಾಲೆಯ ಎಸ್‍ಡಿಎಮ್‍ಸಿ ಅಧ್ಯಕ್ಷ ರಾಮಣ್ಣ ನೀಲಣ್ಣವರ, ಕರವೇ ಬೆಟಗೇರಿ ಗ್ರಾಮ ಘಟಕದ ಅಧ್ಯಕ್ಷ ಈರಣ್ಣ ಬಳಿಗಾರ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಲೆಯಿಂದ ಹೊರಗುಳಿಯುತ್ತಿರುವ ಶಾಲಾ ಮಕ್ಕಳನ್ನು ಈ ವೇಳೆ ಸತ್ಕರಿಸಿದರು.
ಈ ವೇಳೆ ಈಶ್ವರ ಮುಧೋಳ, ವಿಠ್ಠಲ ಕೋಣಿ, ಹಜರತ್ ಮಿರ್ಜಾನಾಯ್ಕ, ದುಂಡಪ್ಪ ದೇಯಣ್ಣವರ, ಹನುಮಂತ ಹಾಲಣ್ಣವರ, ನಿಂಗಾಪೂರದ ಅರ್ಜುನ ಹಾದಿಮನಿ, ಅಕ್ಕಿಸಾಗರದ ಪ್ರಕಾಶ ಯರಗಟ್ಟಿ, ಮಮದಾಪೂರದ ಹನುಮಂತ ಗೋಪಾಳಿ, ಶಾಲೆಯ ವಿದ್ಯಾರ್ಥಿ ತಾಯಂದಿರು, ಪಾಲಕರು, ಪೋಷಕರು, ಎಸ್‍ಡಿಎಮ್‍ಸಿ ಸದಸ್ಯರು, ಸಹಶಿಕ್ಷಕರು, ಅತಿಥಿ ಶಿಕ್ಷಕರು, ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು ಇದ್ದರು.
IN MUDALGI Latest Kannada News