
ಮೂಡಲಗಿ: ಮೂಡಲಗಿಯಲ್ಲಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕಳ ನಿಧನಕ್ಕೆ ಮೂಡಲಗಿಯ ನಿಸರ್ಗ ಫೌಂಡೇಶನ, ಯುವ ಜೀವನ ಸೇವಾ ಸಂಸ್ಥೆ ಮತ್ತು ಕರ್ನಾಟಕ ಕಾರ್ಯ ನಿರತ ಪತ್ರಕರ್ತಸಂಘ, ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಹಾಗೂ ವಿವಿಧ ಸಂಘಟನೆಗಳ ಮೂಲಕ ಶುಕ್ರವಾರ ಮೊಂಬತ್ತಿಗಳನ್ನು ಬೆಳಗಿಸಿ, ಭಾವಚಿತ್ರಕ್ಕೆ ಪುಷ್ಪಗಳ ಮಳೆಗೈದು ಶ್ರದ್ಧಾಂಜಲಿ ಅರ್ಪಿಸಿದರು.

ಸಾಹಿತಿ ಬಾಲಶೇಖರ ಬಂದಿ ನುಡಿ ನಮ್ಮನವನ್ನು ಸಲ್ಲಿಸಿ ಮಾತನಾಡಿದ ಅವರು ‘ಸಾಲುಮರದ ತಿಮ್ಮಕ್ಕಳು ಮಕ್ಕಳಿಲ್ಲ ಎನ್ನುವ ಕೊರಗನ್ನು ರಸ್ತೆ ಬದಿಯಲ್ಲಿ ಸಸಿಗಳನ್ನು ನೆಟ್ಟು ಪಾಲನೆ, ಪೋಷಣೆ ಮಾಡಿ ಹೆಮ್ಮರಗಳಾಗಿ ಬೆಳೆಸುವ ಮೂಲಕ ಪರಿಸರಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದರು’ ಎಂದರು.
ಅಕ್ಷರ ಜ್ಞಾನವಿಲ್ಲದಿದ್ದರೂ ಸಹ ಜಗತ್ತು ಮೆಚ್ಚುವಂತ ಕಾರ್ಯವನ್ನು ಮಾಡುವ ಮೂಲಕ ಸಾಲುಮರದ ತಿಮ್ಮಕ್ಕಳ ಹೆಸರು ಅಜರಾಮರವಾಗಿ ಉಳಿಯುವಂತಾಗಿದೆ. ನಿಸ್ವಾರ್ಥದ ಅವಳ ಸೇವೆ ಮತ್ತು ಪರಿಸರಕ್ಕೆ ಕೊಟ್ಟಂತ ಅವಳ ಕೊಡುಗೆಯನ್ನು ಪರಿಗಣಿಸಿ ಪದ್ಮಶ್ರೀ ಸೇರಿದಂತೆ ರಾಷ್ಟç ಮತ್ತು ಅಂತರ್‌ರಾಷ್ಟç ಮಟ್ಟದಲ್ಲಿ ನೂರಾರು ಪ್ರಶಸ್ತಿಗಳು ಅವಳ ಮುಡಿಗೆ ಸಂದಿವೆ. ಅಷ್ಟೇ ಅಲ್ಲ ಕರ್ನಾಟಕ ಸರ್ಕಾರದ ಪರಿಸರ ರಾಯಬಾರಿಯಾಗಿ ಗುರುತಿಸಿಕೊಂಡಿದ್ದ ಹೆಗ್ಗಳಿಕೆ ಅವರದಾಗಿತ್ತು ಎಂದರು.


ಈರಪ್ಪ ಢವಳೇಶ್ವರ, ಕೃಷ್ಣಾ ಗಿರೆಣ್ಣವರ, ಮಲ್ಲು ಬೋಳನ್ನವರ, ಮಹಾದೇವ ಶೆಕ್ಕಿ, ಸುಭಾಷ ಬೆಳಕೂಡ, ರವಿ ನೇಸೂರ, ಚಂದ್ರಶೇಖರ ಬಸ್ಮೆ, ಶಿವಬಸು ಮುರಗೋಡ, ಡಾ. ಬಸವರಾಜ ಪಾಲಭಾಂವಿ, ಮಲ್ಲಪ್ಪ ನೇಮಗೌಡರ, ಕುಮಾರ ಗಿರಡ್ಡಿ, ಜಗದೀಶ ತೇಲಿ, ತಿಪ್ಪಣ್ಣ ಕುರಬಗಟ್ಟಿ, ಪ್ರಭು ಹಡಪದ, ಪಾಂಡು ಮಹೇಂದ್ರಕರ, ಸೋಮಯ್ಯ ಹಿರೇಮಠ, ಚೇತನ್ ಹೊಸಕೋಟಿ, ಚಂದ್ರಶೇಖರ ಪತ್ತಾರ, ರಮೇಶ ಸಣ್ಣಕ್ಕಿ, ಸುಧಾಕರ ಉಂದ್ರಿ, ಸುಭಾಷ ಬಳಿಗಾರ ಹಾಗೂ ಅನೇಕರು ಭಾಗವಹಿಸಿದ್ದರು.
IN MUDALGI Latest Kannada News