
ಮೂಡಲಗಿ : ನಮ್ಮ ಹಳ್ಳಿಗಳಲ್ಲಿ ಮಾತ್ರ ಪರಂಪರೆ ಮತ್ತು ಸಂಸ್ಕøತಿ ಸಂಪ್ರದಾಯ ಉಳಿದಿದೆ. ಇಂದು ನಗರೀಕರಣ ಜೀವನದಿಂದ ನಮ್ಮ ಸಂಪ್ರದಾಯ ಸಂಸ್ಕøತಿ ನಶಿಸಿ ಹೋಗುತ್ತಿದ್ದು ಇಂದಿನ ವಿದ್ಯಾರ್ಥಿಗಳು ಆಧುನಿಕ ಜೀವನಕ್ಕೆ ಬೇಗನೆ ಹೊಂದಿಕೊಳ್ಳುತ್ತಿದ್ದು ಗ್ರಾಮೀಣ ಜನರ ಜೀವನ ಪದ್ದತಿ, ಹಬ್ಬ ಹರಿದಿನಗಳಲ್ಲಿ ಬಳಸುವ ಆಹಾರ, ಕೃಷಿಯಲ್ಲಿ ಅನುಸರಿಸುವ ಉದ್ಯೋಗಗಳು ಅವರ ಉಡುಗೆ-ತೊಡಿಗೆ ವೇಷ ಭೂಷಣಗಳು ಸಾಂಪ್ರದಾಯಿಕ ಆಚರಣೆಗಳು ಅದರಂತೆ ಕುಟುಂಬ ಪದ್ದತಿ, ಸಾಕು ಪ್ರಾಣಿಗಳ ಪ್ರೀತಿ ನಮ್ಮ ಯುವ ಸಮುದಾಯದ ವಿದ್ಯಾರ್ಥಿಗಳಿಗೆ ಇಲ್ಲವಾಗಿದ್ದು ಇಂದಿನ ಜೀವನ ಶೈಲಿಯಲ್ಲಿ ಮಾಸಿ ಹೋಗುತ್ತಿದ್ದ ನಮ್ಮ ಹಳ್ಳಿಯ ಸಂಸ್ಕøತಿಯ ಪುನರಜೀವನಕ್ಕೆ ಆಧ್ಯತೆ ನೀಡಿ ಅದನ್ನು ಉಳಿಸಿಬೆಳಿಸಿಕೊಳ್ಳುವ ಪ್ರಯತ್ನ ಇಂದು ನಡೆಯಬೇಕಿದೆ ಎಂದು ಹಾರೂಗೇರಿಯ ಶ್ರೀ ಸಿದ್ದೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಟಿ.ಎಸ್.ಒಂಟಗೂಡಿ ಹೇಳಿದರು.

ಪಟ್ಟಣದ ಆರ್‍ಡಿಎಸ್ ಕಲಾ ವಾಣಿಜ್ಯ ವಿಜ್ಞಾನ ಸಮಾಜಕಾರ್ಯ ಪದವಿ ಮಹಾವಿದ್ಯಾಲಯ ಹಾಗೂ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯ ಮೂಡಲಗಿ ಇವುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಹಳ್ಳಿಯ ಸಂಸ್ಕøತಿಯ ಸಂಭ್ರಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಮಹಿಳೆಯರನ್ನು ಗೌರವಿಸುವ ಸಂಸ್ಕøತಿ ನಮ್ಮದು ಇಳಕಲ್ ಸೀರೆ ಧರಿಸಿ ಬಂದಿರುವ ವಿದ್ಯಾರ್ಥಿಯರನ್ನು ನೋಡುವುದೇ ಒಂದು ಸೌಭಾಗ್ಯ ನಮ್ಮ ಅಪ್ಪ ಅಜ್ಜ ಧರಿಸುವ ದೋತ್ರ ಟಾವಲ್ ಪೇಟಾದ ಗತ್ತು ಗಮತ್ತು ನಮ್ಮ ದೇಶಿಯ ಸಂಸ್ಕøತಿಯ ಪ್ರತಿಬಿಂಬ ಎಂದರು.
ಪಟ್ಟಣದ ಖ್ಯಾತ ಜಾನಪದ ಗಾಯಕ ಶಬ್ಬಿರ ಡಾಂಗೆ ಮಾತನಾಡುತ್ತಾ ನಮ್ಮ ಭಾಷೆ ಸಂಸ್ಕøತಿ ಸಂಪ್ರದಾಯಗಳು ನಮ್ಮ ನಾಡಿನ ಹಿರಿಮೆಯನ್ನು ಬಿಂಬಿಸುತ್ತೇವೆ ಇಂದು ಅನ್ಯದೇಶಿಯ ಸಂಸ್ಕøತಿ ನಮ್ಮ ದೇಶಿಯ ಸಂಸ್ಕøತಿಯ ಮೇಲೆ ಪ್ರಭಾವ ಹೆಚ್ಚಾಗಿದ್ದು ನಾವೆಲ್ಲರೂ ನಮ್ಮ ಸಂಸ್ಕøತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು ಕಾಲ ಕೆಟೈತಿ ಅನಬೇಡಿ ನಾವು ಕೆಟ್ಟಿದೀವಿ ಮೈ ಮೇಲೆ ಬಟ್ಟೆ ಇಲ್ಲದ ಸಂಸ್ಕøತಿ ಬೇರೆದೇಶದ್ದು ಮೈ ತುಂಬ ಬಟ್ಟೆ ಹಾಕುವುದು ಹೊಟ್ಟಿ ತುಂಬ ಅಮ್ಮನ ಕೈ ತುತ್ತು ತಿನ್ನವುದು ನಮ್ಮ ಸಂಸ್ಕøತಿ ನಮ್ಮ ಸಂಸ್ಕøತಿ ಮರೆಯುವುದು ಹೆತ್ತ ತಾಯಿಯನ್ನು ಮರೆಯುವುದು ಒಂದೇ ಆದ್ದರಿಂದ ತಾಯಿಯ ವಾತ್ಸಲ್ಯ ಸೀಗುವುದು ನಮ್ಮ ಉಡುಗೆ ತೊಡುಗೆ ಸಂಪ್ರದಾಯಗಳಲ್ಲಿ ಮಾತ್ರ ಸಾಧ್ಯವಿದೆ ಯಾವತ್ತಿಗೊ ನಮ್ಮ ಸಂಸ್ಕøತಿಯನ್ನು ಮರೆಮಾಶಲು ನಾವು ಬೀಡುವುದು ಬೇಡ ಎಂದರು.
ಕಾಲೇಜಿನ ವಿದ್ಯಾರ್ಥಿನಿಯರು ಇಳಕಲ್ ಸೀರೆ ತೊಟ್ಟು ರೊಟ್ಟಿ ಬುತ್ತಿ, ಕುಂಭ ಕೊಡ, ಆರುತಿಯೊಂದಿಗೆ ವಿದ್ಯಾರ್ಥಿಗಳು ದೋತ್ರ, ಪಂಚೆ, ರೇಶ್ಮಿಪೇಟಾ ನಿಲವಂಗಿ ಹಸಿರು ಶಾಲು ಹಾಕಿಕೊಂಡು ಕನ್ನಡದ ದ್ವಜ ಹಿಡಿದು ಅವರ ಜೊತೆ ರೈತರ ಮಕ್ಕಳು ತಂದಿರುವ ಚಕ್ಕಡಿ ಬಂಡಿ, ಟಗರಿನೊಂದಿಗೆ ಡೊಳ್ಳು ಹೊಡಿತ್ತಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಾಸಿಹೋಗಿರುವ ಉಡುಪು & ಸಂಸ್ಕøತಿಯನ್ನು ಪಟ್ಟಣದ ಜನರಿಗೆ ನೆನಪಿಸಿಕೊಟ್ಟು ಕಾಲೇಜಿನಲ್ಲಿ ಬಾಳೆ ಕಬ್ಬು ಮಾವಿನ ತೋರಣ ಟೆಂಗು ಗರಿಗಳನ್ನು ಬಳಿಸಿ ತೋಟದಲ್ಲಿ ಇರುವ ಹೂ ಹಣ್ಣು ತಂದು ಹಳ್ಳಿಯ ಹಬ್ಬದ ವಾತಾವರಣದ ಜೊತೆಗೆ ಹಳ್ಳಿಯ ಜನರ ಜೀವನದ ಕೃಷಿ ಬದುಕು ಕುರಿತು ನಾಟಕ ನೃತ್ಯ ಪ್ರದರ್ಶಿಸಿ ಮನೆಯಿಂದಲೇ ತಂದಿರುವ ಹಳ್ಳಿಯ ಊಟ ವಿವಿಧ ಬಗೆಯ ರೊಟ್ಟಿ ಚಪಾತಿ ಹೊಳಿಗೆ ಚಟ್ನಿ ಮೊಸರು ಮಜ್ಜಿಗೆ ಅನೇಕ ವಿಧದ ಖಾದ್ಯಗಳನ್ನು ಎಲ್ಲರೂ ಸೇರಿಕೊಂಡು ಕಾಲೇಜು ಆವರಣದಲ್ಲಿ ಅತಿಥಿಗಳು ಹಾಗೂ ಉಪನ್ಯಾಸಕರೊಂದಿಗೆ ಭೋಜನ ಮಾಡಿ ಗ್ರಾಮೀಣ ಬದುಕಿನ ಸೊಗಡನ್ನು ಕಾಲೇಜು ಆವರಣದಲ್ಲಿ ಅಳವಡಿಸಿಕೊಂಡಿದ್ದು ಗಮನಾರ್ಹವಾಗಿತ್ತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಸಂತೋಷ ಪಾರ್ಶಿ ವಹಿಸಿಕೊಂಡಿದ್ದರು ಕಮಲದಿನ್ನಿಯ ಮಾಜಿ ಗ್ರಾಮ ಪಂಚಾಯತ ಸದಸ್ಯರಾದ ರಮೇಶ ಪಾಟೀಲ ಕಾಲೇಜು ಪ್ರಾಚಾರ್ಯ ಶಿವಾನಂದ ಸತ್ತಿಗೇರಿ, ಸತೀಶ ಗೋಟೂರೆ ಉಪನ್ಯಾಸಕರು ಸಾಂಪ್ರದಾಯಿಕ ಉಡುಗೆಯಲ್ಲಿ ಹಾಜರಿದ್ದರು.
ಸಂಗಮೇಶ ಕುಂಬಾರ ಸ್ವಾಗತಿಸಿದರು ಮಲ್ಲಪ್ಪ ಪಾಟೀಲ ಕವಿತಾ ಮಳಲಿ ನಿರೂಪಿಸಿ ವಂದಿಸಿದರು
IN MUDALGI Latest Kannada News