Breaking News
Home / ಬೆಳಗಾವಿ / ಮೂಡಲಗಿ ರಾಯಲ್ಸ್ ಚಾಲೆಂಜರ್ಸ್‍ಗೆ ‘ಎಂಪಿಎಲ್-2025’ ಕ್ರಿಕೆಟ್ ಟ್ರೋಪಿ

ಮೂಡಲಗಿ ರಾಯಲ್ಸ್ ಚಾಲೆಂಜರ್ಸ್‍ಗೆ ‘ಎಂಪಿಎಲ್-2025’ ಕ್ರಿಕೆಟ್ ಟ್ರೋಪಿ

Spread the love

ಮೂಡಲಗಿ: ಇಲ್ಲಿಯ ಎಸ್‍ಎಸ್‍ಆರ್ ಕಾಲೇಜು ಮೈದಾನದಲ್ಲಿ ಮಾರ್ನಿಂಗ ಸ್ಟಾರ್ ಕ್ರಿಕೆಟರ್ಸ ಹಾಗೂ ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಸಹಯೋಗದಲ್ಲಿ ಏರ್ಪಡಿಸಿದ್ದ ‘ಎಂಪಿಎಲ್-2025’ ಕ್ರಿಕೆಟ್ ಟೂರ್ನಿಯಲ್ಲಿ ಮೂಡಲಗಿ ರಾಯಲ್ ಚಾಲೆಂಜರ್ಸ ತಂಡವು ಚಾಂಪಿಯಿನ್‍ಷಿಪ್‍ದೊಂದಿಗೆ ರೂ. 50,001 ನಗದು ಹಾಗೂ ಟ್ರೋಪಿಯನ್ನು ಪಡೆದುಕೊಂಡಿತು.

ದ್ವಿತೀಯ ಸ್ಥಾನವನ್ನು ಮೂಡಲಗಿ ಸೂಪರ್ ಕಿಂಗ್ಸ್ ತಂಡವು ರೂ.30,001 ಹಾಗೂ ಟ್ರೋಪಿ ಪಡೆದುಕೊಂಡರೆ, ತೃತೀಯ ಸ್ಥಾನವನ್ನು ಮೂಡಲಗಿ ರಾಯಲ್ಸ್ ತಂಡವು ರೂ.20,001 ಹಾಗೂ ಟ್ರೋಪಿಯನ್ನು ಪಡೆದುಕೊಂಡಿತು.
ತಂಡದ ನಾಯಕರಾದ ಸೋಮು ಹಿರೇಮಠ, ಗಿರೀಶ ಮೇತ್ರಿ, ಪ್ರವೀಣ ಕುರಬಗಟ್ಟಿ ಇವರು ತಮ್ಮ ತಂಡದ ಆಟಗಾರರೊಂದಿಗೆ ಟ್ರೋಪಿಗಳನ್ನು ಎತ್ತಿಹಿಡಿದು ಮೈದಾನದಲ್ಲಿ ಸಂಭ್ರಮಿಸಿದರು.
ರಾಯಲ್ ಚಾಲೆಂಜರ್ಸ ತಂಡದ ದರ್ಶನ ಪಾಟೀಲ ಸರಣಿ ಪುರುಷೋತ್ತಮ ಮತ್ತು ಅತೀ ಹೆಚ್ಚು ರನ್ ಗಳಿಸಿದ ಆಟಗಾರ ವಯಕ್ತಿಕ ಪ್ರಶಸ್ತಿಗೆ ಭಾಜನರಾಗಿ ಸ್ಟೋಟ್ಸ್ ಸೈಕಲ್ ಮತ್ತು ರಿಪ್ರಿಜೆಟರ್‍ಗಳನ್ನು ಪಡೆದುಕೊಂಡರು. ಮೂಡಲಗಿ ರಾಯಲ್ಸ್ ತಂಡದ ಜುನೇದ ಮಂಟೂರ್ ಅತೀ ಹೆಚ್ಚು ಹುದ್ದರಿ ಪಡೆದ ಆಟಗಾರನಾಗಿ ಹೊರಹೊಮ್ಮಿ ಟಿವಿ ಬಹುಮಾನವನ್ನು ಪಡೆದುಕೊಂಡು ಬೀಗಿದರು.
ಬಹುಮಾನ ವಿತರಣೆಯನ್ನು ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ ಸೋನವಾಲಕರ, ಬಹುಮಾನ ಪ್ರಾಯೋಜಕರಾದ ಕಿರಣ ಪ್ರಕಾಶ ಸೋನವಾಲಕರ, ಬಸವೇಶ್ವರ ಸೊಸೈಟಿಯ ನಿರ್ದೇಶಕ ಗಿರೀಶ ಢವಳೇಶ್ವರ, ಪ್ರಧಾನ ವ್ಯವಸ್ಥಾಪಕ ಬಸವರಾಜ ಬಡಿಗೇರ, ಪವರ್‍ಟೆಕ್ ಮೋಟಾರ್ಸ್ ಮಾಲೀಕ ಶ್ರೀಶೈಲ್ ಮದಗನ್ನವರ, ಪುರಸಭೆ ಸದಸ್ಯ ಹನಮಂತ ಗುಡ್ಲಮನಿ, ಶಿವರಾಜ ರಂಜನಗಿ, ಎನ್.ಟಿ. ಪಿರೋಜಿ, ಕಾಡಾ ಮಾಜಿ ಅಧ್ಯಕ್ಷ ಅಡವೀಶ ಈಟಗಿ, ಗುಂಡು ಪಾಟೀಲ, ಚೇತನ ಪೂಜಾರಿ, ಕೃಷ್ಣಾ ಕೆಂಪಸತ್ತಿ, ಪ್ರಶಾಂತ ನಿಡಗುಂದಿ, ಚೇತನ ನಿಶಾನಿಮಠ, ಸನಿತ ಸೋನವಾಲಕರ, ಡಾ. ಎಸ್.ಎಸ್. ಪಾಟೀಲ, ಡಾ. ಲಕ್ಷ್ಮಣ ಕಂಕಣವಾಡಿ, ಸಂಜಯ ಮೋಕಾಸಿ, ಡಾ. ಮಹೇಶ ಕಂಕಣವಾಡಿ, ಹಣಮಂತ ಬಸಳಿಗುಂದಿ ವೇದಿಕಯಲ್ಲಿದ್ದರು.
ಸಂಘಟಕರಾದ ಮಾರ್ನಿಗ್ ಸ್ಟಾರ್ ಕ್ರಿಕೆಟರ್ಸ್ ಸಮಿತಿಯ ಶಿವಾನಂದ ಗಾಡವಿ, ಮಲ್ಲು ಕುರಬಗಟ್ಟಿ,
ಸನ್ನಿತ ಸೋನವಾಲಕರ, ಪ್ರವೀಣ ಕುರಬಗಟ್ಟಿ, ಗಿರೀಶ ಮೇತ್ರಿ, ಸೋಮು ಮಠಪತಿ, ಶೇಖರಂಯ್ಯ ಹಿರೇಮಠ, ಕೃಷ್ಣಾ ಕೆಂಪಸತ್ತಿ, ವಿಶ್ವನಾಥ ಬೆಲ್ಲದ, ಲಕ್ಕಪ್ಪ ತಳವಾರ, ಮಹೇಶ ಖಡಕಬಾವಿ, ರವಿ ಪತ್ತಾರ, ಶಿವಬಸು ಭುಜನ್ನವರ, ಮೊಹಮ್ಮದರಫಿಕ ಕೊಲೂರ ಮತ್ತಿತರರು ಇದ್ದರು.
ಮೂರನೇ ವರ್ಷದ 5 ದಿನಗಳ ವರೆಗೆ ಎಸ್‍ಎಸ್‍ಆರ್ ಕಾಲೇಜು ಮೈದಾನದಲ್ಲಿ ಜರುಗಿದ ಎಂಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ 6 ತಂಡಗಳು ಭಾಗವಹಿಸಿದ್ದವು. ಲೀಗ್ ಮಾದರಿಯಲ್ಲಿ ಒಟ್ಟು 18 ರೋಮಾಂಚಕಾರಿಯಾದ ಪಂದ್ಯಗಳು ಕ್ರಿಕೆಟ್ ಪ್ರೇಮಿಗಳ ಮನಸೂರೆಗೊಳಿಸಿದವು. ಮೂಡಲಗಿ ಸುತ್ತಮುತ್ತಲಿನ ಗ್ರಾಮಗಳ ಕ್ರಿಕೆಟ್ ದಾಂಡಿಗರು ತಮ್ಮ ಕ್ರಿಕೆಟ್ ಪ್ರತಿಭೆಯನ್ನು ಅನಾವರಗೊಳಿಸುವಲ್ಲಿ ಟೂರ್ನಿಯು ಯಶಸ್ಸಿಯಾಯಿತು.


Spread the love

About inmudalgi

Check Also

ಹಳ್ಳಿಗಳಲ್ಲಿ ನಮ್ಮ ಪರಂಪರೆ ಮತ್ತು ಸಂಸ್ಕøತಿ ಸಂಪ್ರದಾಯ ಉಳಿದಿದೆ ಪ್ರಾಚಾರ್ಯ ಟಿ.ಎಸ್.ಒಂಟಗೊಡಿ

Spread the love ಮೂಡಲಗಿ : ನಮ್ಮ ಹಳ್ಳಿಗಳಲ್ಲಿ ಮಾತ್ರ ಪರಂಪರೆ ಮತ್ತು ಸಂಸ್ಕøತಿ ಸಂಪ್ರದಾಯ ಉಳಿದಿದೆ. ಇಂದು ನಗರೀಕರಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ