ಮೂಡಲಗಿ: ತಾಲ್ಲೂಕಿನ ಅರಭಾವಿಯ ಜಗದ್ಗುರು ದುರದುಂಡೀಶ್ವರ ಮಠದಲ್ಲಿ ನ.20ರಂದು ಸಂಜೆ 6.30ಕ್ಕೆ ಅಮವಾಸ್ಯೆಯ ಶಿವಾನುಭವ ಗೋಷ್ಠಿಯು ಜರುಗಲಿದೆ.
ಪೀಠಾಧಿಪತಿ ಗುರುಬಸವಲಿಂಗ ಸ್ವಾಮೀಜಿ ಸಾನ್ನಿಧ್ಯವಹಿಸುವರು.
ಗೋಕಾಕ ಸರ್ಕಾರಿ ಪ್ರೌಢ ಶಾಲೆಯ ತವನಪ್ಪ ಬಿಲ್ ‘ನಿಜ ರಾಷ್ಟ್ರ ನಿರ್ಮಾತೃ ಅನ್ನದಾತ’ ವಿಷಯ ಕುರಿತು ಉಪನ್ಯಾಸ ನೀಡುವರು.
ಹಾರೂಗೇರಿಯ ಇಂಚಗೇರಿ ಮಠದ ಪೀಠಾಧಿಪತಿ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಹಾಗೂ ಕರ್ನಾಟ ರಾಜ್ಯ ರೈತ ಸಂಘ, ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಉದ್ದಪ್ಪ ಪೂಜೇರಿ ಅವರಿಗೆ ಸನ್ಮಾನ ಗೌರವ ಇರುವುದು.
ಫುಲಗಡ್ಡಿ ಗ್ರಾಮದ ಭಕ್ತರಿಂದ ದಾಸೋಹ ಸೇವೆ ಇರುವುದು.
IN MUDALGI Latest Kannada News