Breaking News
Home / ಬೆಳಗಾವಿ / ಅರಳಿಮಟ್ಟಿ ಶಾಲೆಯ ಮಕ್ಕಳು ರಾಷ್ಟ್ರ ಮಟ್ಟದ ಕಲಾ ಉತ್ಸವಕ್ಕೆ ಆಯ್ಕೆ

ಅರಳಿಮಟ್ಟಿ ಶಾಲೆಯ ಮಕ್ಕಳು ರಾಷ್ಟ್ರ ಮಟ್ಟದ ಕಲಾ ಉತ್ಸವಕ್ಕೆ ಆಯ್ಕೆ

Spread the love

ಅರಳಿಮಟ್ಟಿ ಶಾಲೆಯ ಮಕ್ಕಳು ರಾಷ್ಟ್ರ ಮಟ್ಟದ ಕಲಾ ಉತ್ಸವಕ್ಕೆ ಆಯ್ಕೆ

ಮೂಡಲಗಿ: ತಾಲ್ಲೂಕಿನ ಅರಳಿಮಟ್ಟಿ ಪಿಎಂಶ್ರೀ ಸರ್ಕಾರಿ ಪ್ರೌಡ ಶಾಲೆಯ ವಿದ್ಯಾರ್ಥಿಗಳು ನವದೆಹಲಿಯ ಎನ್‍ಸಿಆರ್‍ಟಿ ಹಾಗೂ ಶಾಲಾ ಶಿಕ್ಷಣ ಸಚಿವಾಲಯ ನಡೆಸುವ ಕಲಾ ಉತ್ಸವ ಸ್ಪರ್ಧೆಯ ವಾದ್ಯ ಸಂಗೀತ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಅಯ್ಕೆಯಾಗಿರುವರು.
ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಾದ ಲವಿತ ಹಳಿಂಗಳಿ, ಕಿರಣ ಕುರಬಳ್ಳಿ, ರಂಗೇಶ ನೀಲಪ್ಪಗೋಳ, ಸಂತೋóಷ ಲಗಳಿ ಪುಣೆಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕಲಾ ಉತ್ಸವ ಸ್ಪರ್ಧೆಯಲ್ಲಿ ಭಾಗವಹಿಸಿಲಿದ್ದಾರೆ ಎಂದು ತರಬೇತಿ ನೀಡಿರುವ ಚಿತ್ರಕಲಾ ಶಿಕ್ಷಕಿ ಶೋಭಾ ಧಡೂತಿ ತಿಳಿಸಿದ್ದಾರೆ.
ಕಲಾ ಉತ್ಸವದ ಜಿಲ್ಲಾ ಮಟ್ಟದ ಸ್ಪರ್ಧೆಯ 7 ವಿಭಾಗಗಳಲ್ಲಿ 13 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದರು.
ವಿದ್ಯಾರ್ಥಿಗಳನ್ನು ಶಾಲೆಯ ಮುಖ್ಯ ಶಿಕ್ಷಕ ಜಗದೀಶ ತಿಪ್ಪಿಮನಿ ಹಾಗೂ ಎಸ್‍ಡಿಎಂಸಿ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.


Spread the love

About inmudalgi

Check Also

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಉಪನೋಂದಣಾಧಿಕಾರಿಗಳಿಗೆ ಮನವಿ

Spread the loveವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಉಪನೋಂದಣಾಧಿಕಾರಿಗಳಿಗೆ ಮನವಿ ಮೂಡಲಗಿ: ಪಟ್ಟಣದ ಪತ್ರ ಬರಹಗಾರರು (ಬಾಂಡ್ ರೈಟರ್ಸ ) ವಿವಿಧ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ