Breaking News
Home / ಬೆಳಗಾವಿ / ‘ಶರಣರ ವಚನಗಳು ಸಾರ್ವಕಾಲಿಕ ಮೌಲಿಕ ಚಿಂತನೆಗಳಾಗಿವೆ” – ಪ್ರೊ. ಚಂದ್ರಶೇಖರ ಅಕ್ಕಿ

‘ಶರಣರ ವಚನಗಳು ಸಾರ್ವಕಾಲಿಕ ಮೌಲಿಕ ಚಿಂತನೆಗಳಾಗಿವೆ” – ಪ್ರೊ. ಚಂದ್ರಶೇಖರ ಅಕ್ಕಿ

Spread the love

ಗೋಕಾಕ: ‘ಬಸವಾದಿ ಶರಣರು ತಮ್ಮ ವಚನಗಳ ಮೂಲಕ ಸಾರಿದ ಜೀವನ ಮೌಲ್ಯಗಳು ಸಾರ್ವಕಾಲಿಕ ಶ್ರೇಷ್ಠ ಚಿಂತನೆಗಳಾಗಿವೆ’ ಸಾಹಿತಿ ಪ್ರೊ. ಚಂದ್ರಶೇಖರ ಅಕ್ಕಿ ಹೇಳಿದರು.

ತಾಲ್ಲೂಕಿನ ಖನಗಾಂವ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಸಭಾಭವನದಲ್ಲಿ ಸಾಹಿತಿ ಸಾವಿತ್ರಿ ಕಮಲಾಪೂರ ಅವರ ಅಕ್ಕಮಹಾದೇವಿ ವಚನ ವಿಶ್ಲೇಷಣೆ, ಶರಣರ ಜೀವನ ಚರಿತ್ರೆ ಸೇರಿ ಒಟ್ಟು 5 ಪುಸ್ತಕಗಳ ಬಿಡುಗಡೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಸ್ತ್ರೀ ಸ್ವಾತಂತ್ಯ್ರ ಜೊತೆಗೆ À ಪ್ರಜಾಪ್ರಭುನತ್ವದ ಮೂಲ ಪರಿಕಲ್ಪನೆಯು ಶರಣರದಾಗಿದೆ ಎಂದರು.
ಸಾಹಿತಿ ಸಾವಿತ್ರಿ ಕಮಲಾಪೂರ ಅವರ ಬಿಡುಗಡೆಗೊಂಡಿರುವ ಕೃತಿಗಳು ಮೌಲಿಕವಾಗಿವೆ. ಶರಣರ ಪರಿಚಯ ಮತ್ತು ಅವರ ವಚನಗಳ ವಿಶ್ಲೇಷಣೆಗಳು ಉತ್ತಮವಾಗಿವೆ ಎಂದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ. ಮೈತ್ರೇಯಿಣಿ ಗದಿಗೆಪ್ಪಗೋಳ ಮಾತನಾಡಿ 12ನೇ ಶತಮಾನದಲ್ಲಿ ಮಹಿಳೆಯರು ಮುಕ್ತ ಬರವಣಿಗೆಗೆ ಅವಕಾಶದಿಂದಾಗಿ ಮಹಿಳಾ ಸಬಲೀಕರಣದಿಂದಾಗಿ ಅನೇಕ ಶರಣೆಯರು ವಚನ ರಚಿಸಲು ಸಾಧ್ಯವಾಯಿತು.
ಅಕ್ಕಮಹಾದೇವಿಯ ಮಹಿಳಾ ವಚನಗಾರ್ತಿಯರಲ್ಲಿ ವಿಭಿನ್ನವಾಗಿ ಗುರತಿಸಿಕೊಂಡಿದ್ದು, ಇವತ್ತಿಗೂ ಅಕ್ಕನ ಕುರಿತು ಫಲಪ್ರದವಾದ ಚಿಂತನಗಳು ಹೊರಬರುತ್ತಿವೆ ಎಂದರು.
ಸಾವಿತ್ರಿ ಕಮಲಾಪೂರ ಅವರು ಮಹಿಳಾ ಸಾಹಿತ್ಯ ಕ್ಷೇತ್ರದಲ್ಲಿ ಭವವಸೆಯ ಸಾಹಿತಿಯಾಗಿದ್ದಾರೆ ಎಂದು ಬಣ್ಣಿಸಿದರು.
ಸಾನ್ನಿಧ್ಯವಹಿಸಿದ್ದ ಬೆಳಗಾವಿಯ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ ಸಾಹಿತ್ಯ ಕ್ಷೇತ್ರದ ಬೆಳವಣಿಗೆಯಲ್ಲಿ ಮಹಿಳಾ ಸಾಹಿತಿಗಳ ಪಾಲು ಬಹಳಷ್ಟು ಇದೆ. ಇತ್ತಿಚಿನ ದಶಕಗಳಲ್ಲಿ ಮಹಿಳೆಯರಿಗೆ ಪಾಂಡಿತ್ಯಪೂರ್ಣವಾದ ಸಾಹಿತ್ಯ ರಚ£ಯಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಸಾಹಿತಿ ಸಾವಿತ್ರಿ ಕಮಲಾಪೂರ ಅವರು ವಚನ ಸಾಹಿತ್ಯ, ಕಾವ್ಯ ಹೀಗೆ ಅವರ ಕೃತಿಗಳು ಅಮೂಲ್ಯವಾಗಿದೆ. ಅವರ ಸೃಜನಶೀಲವಾದ ಕಾರ್ಯವು ಶ್ಲಾಘನೀಯವಾಗಿದೆ ಎಂದರು.
ಬಿಡುಗಡೆಗೊಂಡ ಪುಸ್ತಕಗಳಾದ ‘ಬೆಳಕಿಗೆ ಅರಳಿದ ಕಮಲ ಜೇನು ಬಿಟ್ಟಿತು’ ಮತ್ತು ಎಳೆಹೂಟೆ ಕವನ ಸಂಕಲನ ಕುರಿತು ಸುನಂದಾ ಎಮ್ಮಿ, ‘ಅಕ್ಕನ ಕದಳಿಯ ಚಿತ್ತದಿ ಪಯಣ’ ಕೃತಿ ಕುರಿತು ಬಾಲಶೇಖರ ಬಂದಿ, ಸವಿಮನ ಕವನ ಸಂಕಲ ಕುರಿತು ಅನ್ನಪೂರ್ಣ ಹಿರೇಮಠ ಹಾಗೂ ‘ಹೃದಯವಂತ ಶರಣರು’ ಕೃತಿ ಕುರಿತು ಜಯಾನಂದ ಮಾದರ ಪರಿಚಯ ಮಾಡಿದರು.
ಮುಖ್ಯ ಅತಿಥಿ ಸಿದ್ದನಗೌಡ ಪಾಟೀಲ, ಮೂಡಲಗಿ ಕಸಾಪ ಅಧ್ಯಕ್ಷ ಸಂಜಯ ಶಿಂಧಿಹಟ್ಟಿ, ಗೋಕಾಕದ ರಜನಿ, ಜಿರಗಾಳ  ಜಯಶ್ರೀ ಚುನಮರಿ ವೇದಿಕೆಯಲ್ಲಿದ್ದರು.
ಲೇಖಕಿ ಸಾವಿತ್ರಿ ಕಮಲಾಪೂರ ಪ್ರಾಸ್ತಾವಿಕ ಮಾತನಾಡಿ ಸಾಹಿತ್ಯ ಬರವಣಿಗೆಗೆ ಸಹಕಾರ ನೀಡಿದ ಹಿರಿಯ ಸಾಹಿತಿಗಳನ್ನು ಪತಿ ನಾಗೇಂದ್ರ ಹೊಸಮನಿ ಅವರನ್ನು ಅಭಿನಂದಿಸಿದರು.
ಮಹಾದೇವಪ್ಪ ಕಮಲಾಪೂರ, ನಿವೃತ್ತ ಶಿಕ್ಷಕ ಮುನ್ನೋಳಿ, ಸಿದ್ದಪ್ಪ ದೇಸಾಯಿ, ರಾಮಸಿದ್ದಪ್ಪ ಜಾಯಿ, ಎನ್.ಬಿ. ಬಶೆಟ್ಟಿ, ವಿವೇಕ ಕರಡಿ, ಈಶ್ವರ ಭಾಗೋಜಿ, ಪ್ರಕಾಶ ಕೋಟಿನತೋಟ, ಸುರೇಶ ಮುದ್ದಾಪೂರ, ಬಿ.ಜಿ. ಧಾರವಾಡ, ಚಂದ್ರಪ್ಪ ಗಸ್ತಿ, ಲಕ್ಷ್ಮಣ ಖಾನಪೇಠ, ಸುರೇಖಾ ಖಾನಪೇಟ, ಸುಲೋಚನಾ ಖಾನಪೇಟ, ಅನ್ನಪೂರ್ಣ ಉಳ್ಳಿಕಾಸಿ ಇದ್ದರು.
ದೀಪಾ ಗಾಣಗಿ ನಿರೂಪಿಸಿದರು, ನಾಗೇಂದ್ರ ಹೊಸಮನಿ ವಂದಿಸಿದರು.


Spread the love

About inmudalgi

Check Also

ಮಹಾ ಸಂಸದ ಮಾನೆ,ವಿರುದ್ಧ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯುವಂತೆ ಆಗ್ರಹಿಸಿ  ರಾಜಸಭಾ ಸದಸ್ಯ ಕಡಾಡಿಗೆ ಕರವೇ ಮನವಿ 

Spread the love ಮಹಾ ಸಂಸದ ಮಾನೆ,ವಿರುದ್ಧ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯುವಂತೆ ಆಗ್ರಹಿಸಿ  ರಾಜಸಭಾ ಸದಸ್ಯ ಕಡಾಡಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ