ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಈಶ್ವರ ಭಜನಾ ಮಂಡಳಿ ಅಧ್ಯಕ್ಷ, ಶರಣ ಜೀವಿ ಬಸಪ್ಪ ಅಡಿವೆಪ್ಪ್ಪ ದೇಯಣ್ಣವರ (63) ಇವರು ಸೋಮವಾರ ಡಿ.29ರಂದು ನಿಧನರಾದರು. ಮೃತರು ಇಬ್ಬರು ಪತ್ನಿಯರು, ಇಬ್ಬರು ಪುತ್ರರು, ಮೂವರು ಪುತ್ರಿಯರು, ಸೊಸೆಯಂದಿರು, ಮೊಮ್ಮಕ್ಕಳು, ಅಳಿಯಂದಿರು ಸೇರಿದಂತೆ ಅಪಾರ ಬಂದು-ಬಳಗವನ್ನಗಲಿದ್ದಾರೆ.
ಸಂತಾಪ: ಸುಣಧೋಳಿ ಜಡಿಸಿದ್ದೇಶ್ವರ ಮಠದ ಅಭಿನವ ಶಿವಾನಂದ ಸ್ವಾಮೀಜಿ ಸೇರಿದಂತೆ ಸ್ಥಳೀಯ ಹಾಗೂ ಸುತ್ತಲಿನ ಹಳ್ಳಿಗಳ ಹರ, ಗುರು, ಚರಮೂರ್ತಿಗಳು, ಸಂತರು, ಶರಣರು, ರಾಜಕೀಯ ಮುಖಂಡರು, ಗಣ್ಯರು, ಸ್ಥಳೀಯ ಈಶ್ವರ ಭಜನಾ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಅಪಾರ ಜನ ಸಮೂಹ ಮಂಗಳವಾರ ಡಿ.30ರಂದು ಮುಂಜಾನೆ 10ಗಂಟೆಗೆ ನಡೆದ ಶರಣಜೀವಿ ಬಸಪ್ಪ ದೇಯಣ್ಣವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು, ಶರಣಜೀವಿ ಬಸಪ್ಪ ಅವರ ನಿಧನಕ್ಕೆ ತೀವ್ರ ಸಂತಾಪ ಶೋಕವ್ಯಕ್ತಪಡಿಸಿದ್ದಾರೆ.
IN MUDALGI Latest Kannada News