Breaking News
Home / ಬೆಳಗಾವಿ / *ಅರಭಾವಿಯಲ್ಲಿ ಎಆರ್ಟಿಓ ಕಚೇರಿ ಮತ್ತು ಚಾಲನಾ ಪಥ ಉದ್ಘಾಟಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ*

*ಅರಭಾವಿಯಲ್ಲಿ ಎಆರ್ಟಿಓ ಕಚೇರಿ ಮತ್ತು ಚಾಲನಾ ಪಥ ಉದ್ಘಾಟಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ*

Spread the love

ಮೂಡಲಗಿ: ಚಾಲನಾ ಪರವಾನಗಿ ಪಾಸಾಗಲು ಇನ್ನು ಮುಂದೆ ಮ್ಯಾನುಯೆಲ್‌ ಇರುವುದಿಲ್ಲ. ಬದಲಾಗಿ ಎಲ್ಲ ಚಾಲನಾ ಪಥಗಳಲ್ಲಿ ಸೆನ್ಸಾರ್‌ಗಳನ್ನು ಅಳವಡಿಸಲಾಗುತ್ತದೆ. ಅದರಲ್ಲಿ ಪಾಸಾದರೆ ಮಾತ್ರ ಚಾಲನಾ ಪರವಾನಗಿ ನೀಡಲಾಗುತ್ತದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಮೂಡಲಗಿ ತಾಲೂಕಿನ ಅರಭಾವಿಯಲ್ಲಿ ಮಂಗಳವಾರ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ, ನೂತನ ಕಟ್ಟಡ ಮತ್ತು ಚಾಲನಾ ಪಥವನ್ನು ಉದ್ಘಾಟಿಸಿ ಮಾತನಾಡಿದರು.
ವಾಹನ ಸವಾರರ ಬಹು ದಿನಗಳ ಬೇಡಿಕೆಯಾದ ಸಹಾಯಕ ಸಾರಿಗೆ ಪ್ರಾದೇಶಿಕ ಕಚೇರಿ ಹಾಗೂ ಚಾಲನಾ ಪಥ ನಿರ್ಮಾಣ ಈಗ ಈಡೇರಿದ್ದು, ಇದಕ್ಕೆ ಇದರ ನಿರ್ಮಾಣಕ್ಕೆ ಜಾರಕಿಹೊಳಿ ಸಹೋದರರ ಶ್ರಮ ಶ್ಲಾಘನೀಯ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರಶಂಶಿಸಿದರು.
ಡೈವಿಂಗ್‌ ಟ್ರ್ಯಾಕ್‌ನಲ್ಲಿ ಮೊದಲು ಅಧಿಕಾರಿಗಳೇ ಮಾಡುತ್ತಿದ್ದರು. ಇನ್ನು ಮುಂದೆ ಹಾಗೆ ಮಾಡಲು ಬರುವುದಿಲ್ಲ. ಎಲ್ಲ ಟ್ರ್ಯಾಕ್‌ಗಳಲ್ಲಿ ಸೆನ್ಸಾರ್‌ ಅಳವಡಿಸಲಾಗಿದೆ. ಅಲ್ಲಿ ಚೆನ್ನಾಗಿ ಡ್ರೈವಿಂಗ್‌ ಮಾಡಿದರೆ ಮಾತ್ರ ಪಾಸ್‌ ಆಗುತ್ತಾರೆ. ಪರವಾನಗಿ ಸಿಗುತ್ತದೆ. ಇಲ್ಲವಾದರೆ ಫೇಲ್‌ ಆಗುತ್ತಾರೆ ಎಂದರು.
ಹೆವಿ ವೆಹಿಕಲ್‌ಗಳಿಗೆ 3 ಎಕರೆ ಜಮೀನು ಜಾಗವನ್ನು ಸಚಿವ ಸತೀಶ್ ಜಾರಕಿಹೊಳಿ, ಶಾಸಕ ಬಾಲಚಂದ್ರ ಜಾರಕಿಹೊಳಿ ವಿಶೇಷ ಆಸಕ್ತಿ ವಹಿಸಿ ಈ ಸ್ಥಳವನ್ನು ಕೊಡಿಸಿದ್ದಾರೆ. ಇದರಿಂದಾಗಿ ಅರಭಾವಿ ಪಟ್ಟಣದ ಪಕ್ಕದಲ್ಲಿ ಈ ಕಚೇರಿ, ಚಾಲನಾ ಪಥ ನಿರ್ಮಾಣಗೊಳ್ಳಲು ಸಾಧ್ಯವಾಗಿದೆ. ಈ ಭಾಗದಲ್ಲಿರುವ 3 ತಾಲೂಕಿನ ಜನತೆಗೆ ಬಹಳ ಅನುಕೂಲವಾಗಿದೆ ಎಂದ ಅವರು, ಆರ್‌ಟಿಓ ಕಚೇರಿ, ಡ್ರೈವಿಂಗ್ ಟೆಸ್ಟ್‌ ರಾಜ್ಯದಲ್ಲಿ ಒಟ್ಟು 45 ಇದ್ದು, ಇದರಲ್ಲಿ 10 ಪ್ರಾರಂಭವಾಗಿವೆ. ಉಳಿದಿರುವ 35ರ ಕಾಮಕಾರಿಗಳ ಕೆಲಸ ಮುಗಿಯುವ ಹಂತದಲ್ಲಿವೆ. ಇವುಗಳನ್ನು ಕೂಡ ಸಿಎಂ ಸಿದ್ದರಾಮಯ್ಯನವರು ಆದಷ್ಟು ಬೇಗ ಚಾಲನೆ ನೀಡಲಿದ್ದಾರೆ ಎಂದರು.
ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ, ಅರಭಾವಿ ಪಟ್ಟಣ ಪಂಚಾಯತಿ ಅಧ್ಯಕ್ಷೆ ರೇಣುಕಾ ಮಾದರ, ಧಾರವಾಡ ಅಪರ್ ಸಾರಿಗೆ ಆಯುಕ್ತ ಕೆ.ಟಿ. ಹಾಲಸ್ವಾಮಿ,ಬೆಳಗಾವಿ ಜಂಟಿ ಸಾರಿಗೆ ಆಯುಕ್ತ ಸಿದ್ದಪ್ಪ ಕಲ್ಲೇರ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಶಂಕರ್ ಕುಲಕರ್ಣಿ, ಹುಬ್ಬಳ್ಳಿ ಮುಖ್ಯ ಕಾಮಗಾರಿ ಅಭಿಯಂತರ ಸೋಮಣ್ಣ ಅಂಗಡಿ, ಪ್ರಭಾ ಶುಗರ್ಸ ಅಧ್ಯಕ್ಷ ಶಿದ್ಲಿಂಗಪ್ಪ ಕಂಬಳಿ, ಆಂಜನೇಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಂಕರ ಬಿಲಕುಂದಿ, ಗೋಕಾಕ ಟಿಎಪಿಸಿಎಂಎಸ್ ನಿರ್ದೇಶಕ ಮುತ್ತೆಪ್ಪ ಜಲ್ಲಿ,
ರೈತ ಮುಖಂಡ ಗಣಪತಿ ಇಳಿಗೇರ, ಬೆಮುಲ್ ನಿರ್ದೇಶಕ ಬಸವರಾಜ ಮಾಳೆದವರ, ರಮೇಶ ಸಂಪಗಾಂವಿ,
ರಮೇಶ ಮಾದರ, ಪಟ್ಟಣ ಪಂಚಾಯತಿ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

*ಸಾರಿಗೆ ಇಲಾಖೆ ಟೆಸ್ಟ್‌ ಟ್ರ್ಯಾಕ್‌ ಮತ್ತು ಕಚೇರಿ ಒಂದೇ ಕಡೆ ಲಭ್ಯವಿರುವಂತೆ ನಿರ್ಮಿಸಲಾಗಿದ್ದು, ಇದನ್ನು ಎಲ್ಲರೂ ಸದ್ಬಳಕೆ ಮಾಡಿಕೊಳ್ಳಬೇಕು. ಇವೆರಡೂ ಒಂದೇ ಕಡೆ ನಿರ್ಮಾಣವಾಗಿರುವುದಕ್ಕೆ ಬಹಳ ಸಂತೋಷವಾಗುತ್ತದೆ ಎಂದು ಬೆಮುಲ್‌ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.*

*ಸುಮಾರು 9 ಎಕರೆ ಜಮೀನಿನಲ್ಲಿ ₹10 ಕೋಟಿ ವೆಚ್ಚದಲ್ಲಿ ಅರಭಾವಿಯಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಟ್ಟಡ ಮತ್ತು ಚಾಲನಾ ಪಥ ನಿರ್ಮಾಣಗೊಂಡಿದೆ. ಒಂದೇ ಕಡೆ ಚಾಲನಾ ಪಥ ಮತ್ತು ಕಚೇರಿ ಬೆಳಗಾವಿ ಜಿಲ್ಲೆಯಲ್ಲಿ ಎಲ್ಲಿಯೂ ಇಲ್ಲ. ಆದರೆ, ನಮ್ಮ ಕ್ಷೇತ್ರದಲ್ಲಿ ಎರಡೂ ಒಂದೇ ಕಡೆ ನಿರ್ಮಾಣವಾಗಿರುವುದಕ್ಕೆ ನಾವೆಲ್ಲ ತುಂಬಾ ಸಂತೋಷಪಡುವಂತಾಗಿದೆ ಎಂದು ಹೇಳಿದರು.*

*ಇಂದು ಕಚೇರಿಯನ್ನು ಉದ್ಘಾಟನೆ ಮಾಡಿದ್ದು, ಇದನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಂಡು ಹೋಗಬೇಕು. ನಮ್ಮ ಅರಭಾವಿಯಲ್ಲಿ ಇಂತಹ ಕಟ್ಟಡ ನಿರ್ಮಾಣವಾಗಿರುವುದಕ್ಕೆ ನಮಗೆಲ್ಲರಿಗೂ ಹೆಮ್ಮೆ ಇದೆ ಎಂದ ಅವರು, ಅರಭಾವಿ ಮೊದಲು ಒಂದು ಗ್ರಾಮ ಪಂಚಾಯತಿಗೆ ಸೀಮಿತವಾಗಿತ್ತು. ಆದರೆ, ಇಂದು ಪಟ್ಟಣ ಪಂಚಾಯತಿ ಆಗಿದೆ. ಕಾಲೇಜು, ಮೊರಾರ್ಜಿ ದೇಸಾಯಿ ಶಾಲೆ, ಆರ್‌ಟಿಒ ಕಚೇರಿ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಲು ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.*

*ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಈ ಸಂದರ್ಭದಲ್ಲಿ ಅಭಿನಂದಿಸಬೇಕು. ಈ ಜಾಗದ ಸಲುವಾಗಿ ತಹಶೀಲ್ದಾರ್‌ಗೆ ಹೇಳಿ ಇಲ್ಲೆ ಆಗಬೇಕು ಎಂದು ಹೇಳಿದ್ದರು. ಇಲ್ಲಿ ಎಂಜಿನಿಯರಿಂಗ್ ಕಾಲೇಜು ಮಾಡುವುದಕ್ಕೆ ಪ್ರಸ್ತಾವನೆಯನ್ನು ಕೂಡ ಸಚಿವರು ಇಟ್ಟಿದ್ದು, ಇದಕ್ಕಾಗಿ ಸಚಿವರು ತಹಶೀಲ್ದಾರ್‌ಗೆ ಇನ್ನೂ 5 ಎಕರೆ ಜಮೀನು ಬೇಕೆಂದು ಹೇಳಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ಗೋಕಾಕ ಒಂದು ಎಜುಕೇಷನ್‌ ಹಬ್ಬ ಆಗಬೇಕು. ಪ್ರಾಮಾಣಿಕವಾಗಿ ನಮ್ಮ ಮಕ್ಕಳಿಗೆ ಶಿಕ್ಷಣ ಕೊಡಬೇಕು. ನಾವು ಕೂಡ ಎಲ್ಲ ಕ್ಷೇತ್ರದಲ್ಲಿಯೂ ಮುಂದೆ ಬರಬೇಕು ಎಂದು ತಮ್ಮ ಮುಂದಿನ ಯೋಜನೆಗಳನ್ನು ಹೇಳಿದರು.*


Spread the love

About inmudalgi

Check Also

ವೇಮನ ಒಬ್ಬ ದಾರ್ಶನಿಕ ಕವಿ-ಸಾಹಿತಿ ಸಂಗಮೇಶ ಗುಜಗೊಂಡ

Spread the love ಮೂಡಲಗಿ: ಜಾತಿ, ಮತ-ಪಂಥ ಕಾಂದಾಚಾರಗಳನ್ನು ಖಂಡಿಸುತ್ತಾ ಜೀವನದ ಪರಮ ಸತ್ಯಗಳನ್ನು ನಿರ್ಭೀತಿಯಿಂದ ಸಾರಿದ ವೇಮನ ಒಬ್ಬ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ