.ಮೂಡಲಗಿ : ದಿನಾಂಕ 23-01-2026 ರಂದು ಇಲ್ಲಿನ ಶೈಕ್ಷಣಿಕ ಸಂಸ್ಥೆಯಾದ ಆರ್.ಡಿ.ಎಸ್. ಶ್ರೀವಿದ್ಯಾನಿಕೇತನ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಬೀಳ್ಕೊಡುವ ಸಮಾರಂಭ ಅಭ್ಯುದಯ-04 ಸಾಯಂಕಾಲ 4 ಘಂಟೆಗೆ ಶಾಲೆಯ ಆವರಣದಲ್ಲಿ ಜರಗಲಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಸಂತೋಷ ತಮ್ಮಣ್ಣಾ ಪಾರ್ಶಿ, ಮುಖ್ಯ ಅತಿಥಿಗಳಾಗಿ ಶಿರೂರನ ರಾಷ್ಟ್ರಪತಿ ಪ್ರಶಸ್ತಿ ವಿಜೇತರಾದ ಮಾತೋಶ್ರೀ ಗುರಮ್ಮ ಹಂ. ಸಂಕಿನಮಠ ಮೂಡಲಗಿಯ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಬಿ. ಹಿರೇಮಠ ಸಿಪಿಆಯ್ ಶ್ರೀಶೈಲ್ ಬ್ಯಾಕೂಡ ಹಾಸ್ಯಕಲಾವಿದರು ಮತ್ತು ಚಲನಚಿತ್ರ ನಟರಾದ ಎಸ್.ಪಿ.ಹೊಸಪೇಟೆ (ಚಪಾತಿ ಪಾಂಡು) ಮೂಡಲಗಿಯ ಶ್ರೀಮಹಾಲಕ್ಷ್ಮೀ ಪಿಕೆಪಿಎಸ್ ಬ್ಯಾಂಕಿನ ಅಧ್ಯಕ್ಷರಾದ ಶಿವಬಸು ಆರ್. ಖಾನಟ್ಟಿ, ಶ್ರೀಮಹಾಲಕ್ಷ್ಮೀ ಅರ್ಬನ್ ಕೋ ಆಫ್ ಕ್ರೇಡಿಟ್ ಸೊಸಾಯಿಟಿಯ ನಿರ್ದೇಶಕರಾದ ಗಿರಿಗೌಡ ಎಂ ಪಾಟೀಲ, ಸಚೀನ ಮುನ್ಯಾಳ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಶಾಲೆಯ ಮುಖ್ಯೋಪಾದ್ಯಾಯರಾದ ಸಂಗಮೇಶ ಹಳ್ಳೂರ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
IN MUDALGI Latest Kannada News