ಮೂಡಲಗಿ: ಚುಟುಕು ಸಾಹಿತ್ಯ ಪರಿಷತ್ತು ತಾಲೂಕ ಘಟಕ ಮೂಡಲಗಿ ವತಿಯಿಂದ “ಕವಿ ಮನೆಯೊಳ್ ಕಾವ್ಯಾವಲೋಕನ” ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಶನಿವಾರ ದಿವಸ ಸಾಯಂಕಾಲ 6 ಗಂಟೆಗೆ ಡಾ. ಮಹದೇವ ಜಿಡ್ಡಿಮನಿ ಇವರ ಸ್ನೇಹ ಸಂಕುಲ ನಿಲಯ ಲಕ್ಷ್ಮಿ ನಗರ ಮೂಡಲಗಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರೇಶ ಲಂಕೆಪ್ಪನವರ ವಹಿಸಿಕೊಳ್ಳಲಿದ್ದಾರೆ. ದುರ್ಗಪ್ಪ ದಾಸನ್ನವರ ಮಿತ್ರ ಸಂಮಿತ ಪುಸ್ತಕದ ಕಾವ್ಯಾವಲೋಕನ ಮಾಡಲಿದ್ದಾರೆ. ಹಾಗೂ ಮಹಾವೀರ ಸಲ್ಲಾಗೋಳ ಕವಿ ಪರಿಚಯವನ್ನು ಮಾಡಲಿದ್ದು ಕವಿಗಳಾದ ಮಹದೇವ ಜಿಡ್ಡಿಮನಿಯವರು ಉಪಸ್ಥಿತರಿರುವರು ಹಾಗೂ ಸಾಹಿತ್ಯಸಕ್ತರು ವಿವಿಧ ಕನ್ನಡಪರ ಸಂಘಟನೆಗಳ ಸದಸ್ಯರು ಉಪಸ್ಥಿತರಿರುವರೆಂದು ಚುಟುಕು ಸಾಹಿತ್ಯ ಪರಿಷತ್ತು ತಾಲೂಕ ಘಟಕ ಮೂಡಲಗಿ ಅಧ್ಯಕ್ಷರಾದ ಚಿದಾನಂದ ಹೂಗಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
IN MUDALGI Latest Kannada News