ಕೊರೋನಾ ಸುಳ್ಳು ವದಂತಿ : ಕೊನೆಗೂ ನಿರಾಳ. ....
ಸಾಮಾಜಿಕ ಜಾಲ ತಾಣಗಳಲ್ಲಿ ಮೂಡಲಗಿ ಪಟ್ಟಣದಲ್ಲಿ ಕೊರೋನಾ ಸೋಂಕಿತ ವ್ಯಕ್ತಿ ಓಡಾಡುತ್ತಿದ್ದಾನೆ ಎಂಬ ಸುಳ್ಳು ವದಂತಿ ಹಬ್ಬಿಸಿರುವ ಹಿನ್ನೆಲೆ ಯಲ್ಲಿ ಸಾರ್ವಜನಿಕ ವಲಯದಲ್ಲಿ ಆತಂಕ ಸೃಷ್ಟಿಸಿತ್ತು.
ಈ ಬಗ್ಗೆ ಕೂಡಲೇ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳನ್ನೂ ಭೆಟ್ಟಿ ಮಾಡಿ ವಿಚಾರಣೆ ಮಾಡಿದಾಗ, ಇದುವರೆಗೂ ಯಾವುದೇ ಸೋಂಕಿತ ರೋಗಿ ಕಂಡು ಬಂದಿಲ್ಲ. ಈ ಕುರಿತು ಸರ್ಕಾರದ ಆದೇಶದಂತೆ ನಾವು ನಮ್ಮ ಕಾರ್ಯ ನಿರ್ವಹಿಸುತ್ತಿದ್ದೇವೆ.
ಜೊತೆಗೆ ಜನರು ಸುಳ್ಳು ವದಂತಿ ಗಳಿಗೆ ಕಿವಿಗೊಡದೆ,ರೋಗ ನಿಯಂತ್ರಣಕ್ಕೆ ಸಹಕಾರ ನೀಡಬೇಕು ಎಂದು ಅವರು ಹೇಳಿದರು.
ಜೊತೆಗೆ ಸುಳ್ಳು ವದಂತಿ ಹರಡುತ್ತಿರುವ ಇಂಥ ವ್ಯಕ್ತಿಗಳನ್ನು ಬಂಧಿಸಿ ಕೂಡಲೇ ಇಂಥವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಸ್ಥಳೀಯ ಪೋಲೀಸ ಠಾಣೆಯ ಗಮನಕ್ಕೆ ತಂದಿದ್ದಾರೆ ಎಂದು ಅವರು ತಿಳಿಸಿದರು.
ವರದಿ : ಈಶ್ವರ ಢವಳೇಶ್ವರ
ಮೂಡಲಗಿ