ಮೂಡಲಗಿ: ತಾಲೂಕಿನ ಕುಲಗೋಡ ಗ್ರಾಮದಲ್ಲಿ ಬಾಲಚಂದ್ರ ಜಾರಕಿಹೋಳಿ ಅಭಿಮಾನಿ ಬಳಗ ಹಾಗೂ ಆರ್.ಎಮ್ ಯಡಹಳ್ಳಿ ಫೌಂಡೇಶನ್ ಮುಧೋಳ ಇವರ ಆಶ್ರಯದಲ್ಲಿ ಇಂದು ಮುಂಜಾನೆ ದಿನಸಿ ವಸ್ತುಗಳನ್ನು ವಿತರಣೆ ಕಾರ್ಯಕ್ರಮ ನಡೆಯಿತು.
ಜಾರಕಿಹೋಳಿ ಅಭಿಮಾನಿ ಬಳಗ ಹಾಗೂ ಆರ್.ಎಮ್ ಯಡಹಳಿ ಫೌಂಡೇಶನ್ ಸದಸ್ಯ ಶಂಕರ ಹಾದಿಮನಿ ಮಾತನಾಡಿ ಕರೋನಾ ವೈರಸ್ ವ್ಯಾಪಕವಾಗಿ ಹರಡಿದ್ದು ದೇಶವೆ ಲಾಕ್ ಡೌನ್ ಮಾಡಲಾಗಿದ್ದು ಬಡವರಿಗೆ ಅನಾನುಕೂಲವಾಗಿದೆ. ಕೈಯಲ್ಲಿ ಹಣವಿಲ್ಲದೆ ಮನೆಯಲ್ಲಿ ದಿನಸಿ ವಸ್ತುಗಳಿಲ್ಲದೆ ಒಂದೊತ್ತಿನ ಊಟಕ್ಕೆ ಪರದಾಡುವಂತಾಗಿದ್ದು ಜನರ ಸಂಕಸ್ಟಕ್ಕೆ ಸಿಲುಕಿದ್ದಾರೆ. ಬಾಲಚಂದ್ರ ಜಾರಕಿಹೋಳಿ ಅಭಿಮಾನಿ ಬಳಗ ಹಾಗೂ ಆರ್.ಎಮ್ ಯಡಹಳ್ಳಿ ಫೌಂಡೇಶನ್ ಮುಧೋಳ ಅಧ್ಯಕ್ಷ ನಾರಾಯಣ ಯಡಹಳ್ಳಿ ಇವರು ಕುಲಗೋಡ ಗ್ರಾಮದ 400 ಕುಟುಂಬಗಳಿಗೆ ಸಕ್ಕರೆ, ಚಹಾಪುಡಿ, ಮಸಾಲೆ, ಸಾಬೂನೂಪುಡಿ, ಸಾಬೂನು, ಅವಲಕ್ಕಿ, ರವೆ, ಹೆಸರುಬೆಳೆ,
ತೊಗರಿಬೆಳೆ,ಸೇಂಗಾ,ಅರಿಸಿನ,ಉಪ್ಪು ಪ್ಯಾಕೇಜ್ ನೀಡಿದ್ದು ಮುಂದಿನ ದಿನಗಳಲ್ಲಿ ತರಕಾರಿ ವಿತರಿಸಲಾಗುವದು ಎಂದು ತಿಳಿಸಿದ್ದಾರೆ ಎಂದರು.
ವಿತರಣೆ ಕಾರ್ಯಕ್ರಮದಲ್ಲಿ ಸುಶೀತ ನಾಯಕ, ಸದಾಶಿವ ಬಡಕಲ್ಲ. ಮಲ್ಲೇಶ ಮುರಟಕ್ನಾಳ, ಪ್ರಕಾಶ ಹಿರೇಮೇತ್ರಿ. ವಿಜಯ ಲೋಕಾಪೂರ. ನಾಗಪ್ಪ ದಾಸರ ಇದ್ದರು.
Check Also
ಹಿರಿಯ ಕಲಾವಿದ ಈಶ್ವರಚಂದ್ರ ಬೆಟಗೇರಿಗೆ ಬೆಳಗಾವಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
Spread the love ಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಹಿರಿಯ ಕಲಾವಿದ, ಸಾಹಿತಿ, ಸರಳ ನಡೆ, ನುಡಿ ವ್ಯಕ್ತಿತ್ವದ ಹಿರಿಯ …
IN MUDALGI Latest Kannada News