Breaking News
Home / ತಾಲ್ಲೂಕು / ಹೂ ಬೆಳೆದು ಹೈರಾಣಾದ ಅನ್ನದಾತ : ಕರುಣೆ ಇಲ್ಲದೆ ಬರೆ ಎಳೆದ ಕೊರೋನಾ

ಹೂ ಬೆಳೆದು ಹೈರಾಣಾದ ಅನ್ನದಾತ : ಕರುಣೆ ಇಲ್ಲದೆ ಬರೆ ಎಳೆದ ಕೊರೋನಾ

Spread the love

ಅಥಣಿ : ಮನುಷ್ಯ ತಾನೊಂದು ಬಗೆದರೆ ವಿಧಿ ಇನ್ನೊಂದು ಬಗೆಯಿತು ಅನ್ನುವಂತೆ ಸದ್ಯ ಲಕ್ಷ ಲಕ್ಷ ಎನಿಸುವ ಕನಸು ಕಂಡಿದ್ದ ಅನ್ನದಾತನ ಆಸೆ ನುಚ್ಚು ನೂರಾಗಿದೆ ಕಳೆದ ಎರಡು ವರ್ಷಗಳಿಂದ ವಿಭಿನ್ನ ಪ್ರಯೋಗ ಮಾಡುವ ನಿಟ್ಟಿನಲ್ಲಿ
ಜರ್ಬೇರಿ ಹೂವು ಬೆಳೆದಿದ್ದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದ ರೈತನ ಕಟುಂಬ ಸದ್ಯ ಕೊರೊನಾ ಲಾಕ್ ಡೌನ ನಿಂದ ಕಣ್ಣೀರು ಹಾಕುವಂತಾಗಿದೆ.

ಎರಡು ಮೂರು ವರ್ಷಗಳಿಂದ ವಿಭಿನ್ನ ಬೆಳೆ ಅಂತ ನಂಬಿ ಎಪ್ಪತ್ತು ಲಕ್ಷದಷ್ಟು ಹಣ ಸಾಲ ಮಾಡಿ ಬೆಳೆದ ಹೂವು ಕೈ ಹಿಡಿಯಲಿದೆ ಎಂದು ನಂಬಿಕೊಂಡಿದ್ದ ರೈತ ಸಂಗಪ್ಪ ತಂಗಡಿ ಬೆಳೆದಿದ್ದ ಎರಡು ಎಕರೆ ಜರ್ಬೇರಿ ಹೂವಿಗೆ ಸದ್ಯ ಕೊರೊನಾ ಲಾಕ್ ಡೌನ ಬರೆ ಎಳೆದಿದೆ.

ನಿತ್ಯವೂ ಐವತ್ತು ಸಾವಿರದಷ್ಟು ಆದಾಯ ಕೊಡುತ್ತಿದ್ದ ಹೂವು ಈಗ ರಪ್ತಾಗದೆ ಬಾಡಿ ಹೋಗುವ ಹೂವು ಮತ್ತು ಕೂಲಿ ಕಾರ್ಮಿಕರ ಖರ್ಚು ಮತ್ತು ಪ್ಯಾಕಿಂಗ್ ವೆಚ್ಚ ಕಳೆದು ಇಪ್ಪತ್ತು ಸಾವಿರದಷ್ಟು ಉಳಿಕೆ ಆಗುತ್ತಿದ್ದ ಅನ್ನದಾತ ಸದ್ಯ ದಿಕ್ಕು ತೋಚದೆ ಕಂಗಾಲಾಗಿದ್ದಾನೆ.

 

ಮದುವೆ, ಮುಂಜಿವೆ,ಶುಭ ಕಾರ್ಯಗಳಿಗೆ ಬಳಕೆ ಆಗುತ್ತ ಮಹಾರಾಷ್ಟ್ರ, ಗೋವಾ ಮತ್ತು ಕರ್ನಾಟಕದ ಬೇರೆ ಜಿಲ್ಲೆಗಳಿಗು ರಪ್ತಾಗುತ್ತಿದ್ದ ಹೂವು ಸದ್ಯ ಸಾಗಾಟ ಸ್ಥಗಿತಗೊಂಡ ಕಾರಣ ಯಾವುದಕ್ಕೂ ಬರದಂತಾಗಿದೆ.

ಕಳೆದ ಕೆಲ ತಿಂಗಳ ಹಿಂದಷ್ಟೇ ಕೃಷ್ಣಾ ನದಿ ಪ್ರವಾಹ ಬಂದು ಎರಡು ಎಕರೆ ಹೂವು ನಷ್ಟವಾದರೆ ಈ ಬಾರಿ ಕೈಗೆ ಬಂದ ತುತ್ತು ಸದ್ಯ ಬಾಯಿಗೆ ಬರದಂತಾಗಿದ್ದು ಮಾತ್ರ ವಿಪರ್ಯಾಸವೇ ಸರಿ.ಸರ್ಕಾರ ಏನಾದರೂ ಸಹಾಯ ಮಾಡುವ ನಿರೀಕ್ಷೆಯಲ್ಲಿ ರೈತರು ಕಾಯುತ್ತಿದ್ದು ಕೂಡಲೇ ಸರ್ಕಾರ ಹೂವು ಬೆಳೆದ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ.


Spread the love

About inmudalgi

Check Also

‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’

Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ