Breaking News
Home / ತಾಲ್ಲೂಕು / ಖಾನಟ್ಟಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿಮಾನಿ ಹಾದಿಮನಿಯವರಿಂದ ಕೊರೋನಾ ಸಂತಸ್ತರ ಕುಟುಂಬಗಳಿಗೆ ನಾಗಪ್ಪ ಶೇಖರಗೋಳ ನೇತೃತ್ವದಲ್ಲಿ ಆಹಾರ ವಸ್ತುಗಳ ವಿತರಣೆ

ಖಾನಟ್ಟಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿಮಾನಿ ಹಾದಿಮನಿಯವರಿಂದ ಕೊರೋನಾ ಸಂತಸ್ತರ ಕುಟುಂಬಗಳಿಗೆ ನಾಗಪ್ಪ ಶೇಖರಗೋಳ ನೇತೃತ್ವದಲ್ಲಿ ಆಹಾರ ವಸ್ತುಗಳ ವಿತರಣೆ

Spread the love

ಮೂಡಲಗಿ: ಅರಬಾಂವಿ ಕ್ಷೇತ್ರದಲ್ಲಿ ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರ ಸಹಕಾರದಿಂದ ಕೊರೋನಾ ಸೈನಿಕರ ಸೇವೆಯಿಂದ ಸಾಧ್ಯವಾಗುತ್ತಿದೆ ಎಂದು ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಹೇಳಿದರು.
ಅವರು ಸಮೀಪದ ಖಾನಟ್ಟಿ ಗ್ರಾಮದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿಮಾನಿಯಾದ ಗ್ರಾಪಂ ಅಧ್ಯಕ್ಷ     ದ್ಯಾಮವ್ವ  ಹಾದಿಮನಿ ಅವರು ಕೊರೋನಾ ಸಂತಸ್ತರ 100 ಕುಟುಂಬಗಳಿಗೆ ಆಹಾರ ವಸ್ತುಗಳ ಕಿಟ್ಟಗಳನ್ನು ಹಂಚುವ   ಸಂದರ್ಭದಲ್ಲಿ ಮಾತನಾಡಿ, ಶಾಸಕರು ತಮ್ಮ ಕ್ಷೇತ್ರದ ಜನತೆಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಸಲುವಾಗಿ ಮೇಲಿಂದ ಮೇಲೆ ಅಧಿಕಾರಿಗಳ ಸಭೆ ಕರೆದು ವೈರಸ್ ಹರಡದಂತೆ ಯಾವ ರೀತಿಯಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸಲಹೆ ನೀಡಿತ್ತಿದ್ದಾರೆ. ಅದು ಅಲ್ಲದೇ ಅರಬಾಂವಿ ಕ್ಷೇತ್ರದ ಜನತೆಗೆ ಮಾಸ್ಕ್ ನೀಡಿ, ಅನಾವ್ಯಕವಾಗಿ ಮನೆಯಿಂದ ಹೊರಗೆಡೆ ಬರಬೇಡಿ ಎಂದು ಸಾರ್ವಜನಿಕರಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ. ಸರಕಾರದ ನೀತಿ ನಿಯಮಾವಳಿಗಳನ್ನು ಪಾಲಿಸ ಬೇಕು ಎಂದು ಹೇಳಿದರು.

ಭೀಕರ ಪರಸ್ಥಿತಿಯಲ್ಲಿ ಕೊರೋನಾ ಸಂತಸ್ತರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಅಭಿಮಾನಿಗಳು ಹಾಗೂ ಬಳಗದಿಂದ ಸಾರ್ವಜನಿಕರಿಗೆ ಕೊರೋನಾ ಅರಿವು, ಮಾಹಿತಿ ಮತ್ತು ಜಾಗೃತಿಯನ್ನು ಮೂಡಿಸುವಲ್ಲಿ ಪ್ರಾಮಾಣ ಕವಾಗಿ ಕೆಲಸ ಮಾಡುತ್ತಿದ್ದಾರೆ. ಸೇವಾ ಕಾರ್ಯಗಳಲ್ಲಿ ತೊಡಗಿರುವವರಿಗೆ ಕೆ.ಎಮ್.ಎಫ್ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪರವಾಗಿ ಎಲ್ಲರಿಗೂ ಅಭಿನಂದೆಗಳನ್ನು ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ದ್ಯಾಮವ್ವ ಹಾದಿಮನಿ ಮಾತನಾಡಿ, ಕೊರೋನಾ ವೈರಸ್ ಹಿನ್ನೆಲೆ ಗ್ರಾಮದಲ್ಲಿ ಎಲ್ಲ ಅಂಗಡಿ ಮುಗ್ಗಟ್ಟುಗಳು ಬಂದ್ ಇರುವುದರಿಂದ ಬಡ ಜನರಿಗೆ ದಿನಸಿ ವಸ್ತುಗಳ ಕೊರತೆ ಉಂಟಾಗಬಾರದೆಂದು ಶಾಸಕರ ಅಭಿಮಾನದ ಮೇರಿಗೆ ಗ್ರಾಮದ 100 ಬಡ ಕುಟುಂಬಗಳಿಗೆ ವಿರತಣೆ ಮಾಡುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀ ಸಾಯಿ ಸೌಹಾರ್ದ ಬ್ಯಾಂಕ್ ಅಧ್ಯಕ್ಷ ಮರೇಪ್ಪ ಮರೇಪ್ಪಗೊಳ, ಮಾಜಿ ತಾಪಂ ಸದಸ್ಯ ಈಶ್ವರ ತುಪ್ಪದ, ರಮೇಶ ಮೇತ್ರಿ, ಟಿಎಪಿಎಮ್‍ಸಿ ನಿರ್ಧೇಶಕ ಯಂಕನಗೌಡ ಪಾಟೀಲ, ಗುತ್ತಿಗೆದಾರ ಸಿದ್ದಪ್ಪ ಹಾದಿಮನಿ, ಪಿಕೆಪಿಎಸ್ ಅಧ್ಯಕ್ಷ ಗುರು ಪಾಟೀಲ, ವಿಲ್ಸನ್ ಮೇತ್ರಿ, ಸುಭಾಸ ತುಪ್ಪದ, ಗುರು ಪಾಟೀಲ್, ಶಿವಲಿಂಗಪ್ಪ ದೊಡಮನಿ, ಹಾಲಪ್ಪ ಹಾದಿಮನಿ, ಲಕ್ಷ್ಮಣ ರಡೇರಹಟ್ಟಿ, ಚರ್ಚ ಪಾಸ್ಟರ್ ಧನ್ಯಕುಮಾರ, ಸುನೀಲ ಖಾನಟ್ಟಿ, ಮುದಕಪ್ಪ ಪೋತರಾಜ, ಶಂಕರ ಮೇತ್ರಿ, ಧನಪಾಲ ಮೇತ್ರಿ, ಅಶೋಕ ಪೋತರಾಜ, ತುಕಾರಾಮ ಹಾದಿಮನಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.


Spread the love

About inmudalgi

Check Also

ಖಾನಟ್ಟಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಉತ್ತಮ ಸಹಕಾರ ಸಂಘ ಪ್ರಶಸ್ತಿ

Spread the loveಮೂಡಲಗಿ : ಬೆಳಗಾವಿ ಜಿಲ್ಲಾ ಉತ್ತಮ ಸಹಕಾರಿ ಸಂಘ ಪ್ರಶಸ್ತಿ  ಬೆಳಗಾವಿಯಲ್ಲಿ ನಡೆದ 71ನೇ ಅಖಿಲ ಭಾರತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ