Breaking News
Home / ತಾಲ್ಲೂಕು / ಬಾಲಚಂದ್ರ ಜಾರಕಿಹೊಳಿ ಕಲಿಯುಗದ ಕರ್ಣ- ಬಸಗೌಡ ಪಾಟೀಲ

ಬಾಲಚಂದ್ರ ಜಾರಕಿಹೊಳಿ ಕಲಿಯುಗದ ಕರ್ಣ- ಬಸಗೌಡ ಪಾಟೀಲ

Spread the love

ಮೂಡಲಗಿ: ದಾನಗಳಲ್ಲಿ ಅನ್ನದಾನ ಶ್ರೇಷ್ಠವಾಗಿದ್ದು, ಈ ದಿಸೆಯಲ್ಲಿ ಅರಭಾಂವಿ ಮತ ಕ್ಷೇತ್ರದ ಎಲ್ಲ 76 ಸಾವಿರ ಕುಟುಂಬಗಳಿಗೆ ಆಹಾರ ಧಾನ್ಯ ಕಿಟ್ ಹಂಚುತ್ತಿರುವ ಬಾಲಚಂದ್ರ ಜಾರಕಿಹೊಳಿ ಅವರ ಕಾರ್ಯ ಶ್ಲಾಘನೀಯವಾಗಿದೆ. ಜನರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಬಾಲಚಂದ್ರ ಜಾರಕಿಹೊಳಿ ಅವರು ಕಲಿಯುಗದ ದಾನ ಶೂರ ಕರ್ಣ ಎಂದು ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ ಹೇಳಿದರು.
ತಾಲೂಕಿನ ಕಲ್ಲೋಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಕುಟುಂಬಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನೀಡಿರುವ ಆಹಾರ ಕಿಟ್ ಗಳನ್ನು ಶುಕ್ರವಾರ ವಿತರಿಸಿ ಮಾತನಾಡಿದ ಅವರು.
ಎಲ್ಲ ಕುಟುಂಬಗಳನ್ನು ಒಂದೇ ದೃಷ್ಠಿಯಿಂದ ನೋಡಿಕೊಳ್ಳುತ್ತಾ, ಇದರಲ್ಲಿ ರಾಜಕಾರಣ ಬೆರಸದೇ ಮಾನವಿಯ ಮೌಲ್ಯಗಳನ್ನು ಅನುಕರಣೆ ಮಾಡಿ ಕಷ್ಟದಲ್ಲಿರುವರಿಗೆ ಅಪದ್ಭಾಂಧವರಾಗಿದ್ದಾರೆ. ಮೇಲು-ಕೀಳು, ಜಾತಿ-ಬೇಧ ಮಾಡದೇ ಸರ್ವರಿಗೆ ಸಮಪಾಲು ನೀಡುತ್ತಿರುವ ಅವರ ಸಾಮಾಜಿಕ ಕಳಕಳಿಯನ್ನು ಅವರು ಪ್ರಶಂಸಿಸಿದರು.
ಬಿಜೆಪಿ ಬೆಳಗಾವಿ ವಿಭಾಗೀಯ ಪ್ರಭಾರಿ ಈರಪ್ಪ ಕಡಾಡಿ ಮಾತನಾಡಿ, ಕೊರೋನಾದಂತಹ ಕಷ್ಟದ ಸಮಯದಲ್ಲಿ ಜನರಿಗೆ ಸಹಾಯ ಮಾಡಲೆಂದೇ ಬಾಲಚಂದ್ರ ಜಾರಕಿಹೊಳಿ ಅವರು ನಮ್ಮ ಭಾಗದಲ್ಲಿ ಕರುಣಾಮಯಿ ವ್ಯಕ್ತಿಯಾಗಿದ್ದಾರೆ. ಈ ಹಿಂದೆಯು ಮಳೆ ಮತ್ತು ಪ್ರವಾಹದಿಂದಾಗಿ ಭೀಕರ ಜಲ ಪ್ರಳಯ ಉಂಟಾದ ವೇಳೆಯಲ್ಲಿ ಜನರ ಸುರಕ್ಷತೆಗಾಗಿ ಹಗಲಿರುಳು ದುಡಿದ ಸಾಕಷ್ಟು ಉದಾಹರಣೆಗಳಿವೆ. ಬಾಲಚಂದ್ರ ಅವರು ಜನರ ಮಧ್ಯೆ ಇರುವ ಏಕೈಕ ಶಾಸಕರೆಂದು ಶ್ಲಾಘಿಸಿದರು. ಸ್ವಂತ ಹಣದಿಂದ ಕ್ಷೇತ್ರದ ಎಲ್ಲ ಪರಿವಾರಗಳಿಗೆ ಅಗತ್ಯವಿರುವ ಆಹಾರ ಧಾನ್ಯಗಳನ್ನು ನೀಡಿ ಜನರ ಹಿತ ಕಾಯುತ್ತಿರುವ ಶಾಸಕರ ಮಹತ್ಕಾರ್ಯ ಇಡೀ ರಾಜ್ಯ-ರಾಷ್ಟ್ರಕ್ಕೆ ಮಾದರಿ ಎಂದು ಹೇಳಿದರು.
ತಹಶೀಲ್ದಾರ ಡಿ.ಜೆ.ಮಹಾತ, ಸಿಪಿಐ ವೆಂಕಟೇಶ ಮುರನಾಳ, ಬಿಇಒ ಎ.ಸಿ.ಮನ್ನಿಕೇರಿ, ಟೀಂ ಎನ್.ಎಸ್.ಎಫ್‍ನ ನಾಗೇಶ ಶೇಖರಗೋಳ, ಲಕ್ಕಪ್ಪ ಲೋಕುರಿ, ನಿಂಗಪ್ಪ ಕುರಬೇಟ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪಲಗುದ್ದಿ, ಪಿಎಸ್‍ಐ ಹಾಲಪ್ಪ ಬಾಲದಂಡಿ, ಸುಭಾಸ ಕುರಬೇಟ, ರಾವಸಾಬ ಬೆಳಕೂಡ, ಮಹಾಂತೇಶ, ಮತ್ತು ಬಸವರಾಜ ಯಾದಗುಡ, ಪಂಚಪ್ಪ ಹೆಬ್ಬಾಳ, ಬಸವರಾಜ ಹತ್ತರಕಿ, ಅಶೋಕ ಹಸರಂಗಿ, ಪಟ್ಟಣ ಪಂಚಾಯತಿ ಸದಸ್ಯರು ಸೇರಿದಂತೆ ಮತ್ತಿತರರು ಇದ್ದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ