Breaking News
Home / ತಾಲ್ಲೂಕು / ಕರುನಾಡು ಸೈನಿಕ ಕೇಂದ್ರವು ಸೈನಿಕರನ್ನು ನಿರ್ಮಿಸುವುದರ ಜೊತೆಗೆ ಸಮಾಜಮುಖಿ ಕೆಲಸ ಮಾಡುತ್ತಿದೆ

ಕರುನಾಡು ಸೈನಿಕ ಕೇಂದ್ರವು ಸೈನಿಕರನ್ನು ನಿರ್ಮಿಸುವುದರ ಜೊತೆಗೆ ಸಮಾಜಮುಖಿ ಕೆಲಸ ಮಾಡುತ್ತಿದೆ

Spread the love

ಮೂಡಲಗಿ: ಅದ್ಧೂರಿಯಾಗಿ ನಡೆಯಬೇಕಿದ್ದ ಈ ಸಂಸ್ಥೆಯ 2ನೇ ವರ್ಷಾಚರಣೆÉ ಮಹಾಮಾರಿ ಕೊರೋನಾ ಲಾಕ್‍ಡೌನ್‍ದಿಂದ ಸರಳವಾಗಿ ಆಚರಿಸುತ್ತಿದೆ. ದೇಶ ಸೇವೆಗೆ ಸೈನಿಕರನ್ನು ಅಣಿ ಮಾಡುತ್ತಿರುವ ಈ ಸಂಸ್ಥೆ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದೆ ಎಂದು ಕ.ಸಾ.ಪ. ತಾಲೂಕಾ ಘಟಕದ ಅಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ ಹೇಳಿದರು.
ಶುಕ್ರವಾರ ಸಾಯಂಕಾಲ ಕರುನಾಡು ಸೈನಿಕ ತರಬೇತಿ ಕೇಂದ್ರದಲ್ಲಿ ಹಮ್ಮಿಕೊಂಡ ಸಂಸ್ಥೆಯ 2ನೇ ವರ್ಷದ ವರ್ಷಾಚರಣೆಯ ಸರಳ ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡಿ, ಈ ಹಿಂದೆ ನೆರೆ ಹಾವಳಿಯಲ್ಲಿ ದನ, ಕರು ರಕ್ಷಿಸುವುದರ ಜೊತೆಗೆ ತೊಂದರೆಯಲ್ಲಿದ್ದ ಜನತೆಗೆ ಸಹಾಯದ ಹಸ್ತ ನೀಡಿ ಮಾನವೀಯತೆ ಮೆರೆದಿದ್ದರು. ಈಗ ಈ ಕೊರೋನಾ ಸಂದರ್ಭದಲ್ಲಿ ಜನತೆಗೆ ಮನೆ ಮನೆಗೆ ತೆರಳಿ ದ್ರಾಕ್ಷಿ ಹಣ್ಣು, ಅಗತ್ಯ ವಸ್ತುಗಳನ್ನು ವಿತರಿಸಿ ಸರಕಾರ ನಿಮ್ಮೊಂದಿಗಿದೆ, ಆದೇಶ ಪಾಲಿಸಿ ಸುರಕ್ಷಿತರಾಗಿರಿ ಎಂದು ಜಾಗೃತಿ ಕೂಡ ಮೂಡಿಸುತ್ತಿರುವದು ಹೆಮ್ಮೆಯ ವಿಷಯವಾಗಿದೆ ಎಂದರು.
ಸಂಸ್ಥೆಯ ಹಿತೈಸಿ ಪ್ರೋ. ಸಂಜಯ ಖೋತ ಮಾತನಾಡಿ, ಸಮಾಜ ಮುಖಿಯಾಗಿ ಬೆಳೆಯಲು ಸಾಕಷ್ಟು ತೊಂದರೆಗಳು ಕಷ್ಟ ನಷ್ಟಗಳು ಬರುವದು ಸಹಜ. ಅಂತಹ ಸಂದರ್ಭದಲ್ಲಿ ದೃತಿಗೇಡದೆ ಸಾಧನೆಯ ಶಿಖರವೇರಲು ಸಾಧ್ಯವಾಗುವದು. ನಿವೃತ್ತ ಸೈನಿಕರಾದ ಶಂಕರ ತುಕ್ಕನ್ನವರ ಸೇವಾ ಕಾರ್ಯ ಪ್ರಶಂಸಾರ್ಯ ಶ್ಲಾಘನೀಯವಾಗಿದೆ ಎಂದರು.
ಈ ಸಮಯದಲ್ಲಿ ಸಂಸ್ಥೆಯ ಅಧ್ಯಕ್ಷ ಶಂಕರ ತುಕ್ಕನ್ನವರ, ಆರ್.ಡಿ.ಎಸ್ ಕಾಲೇಜು ಉಪನ್ಯಾಸಕ ಸಂಗಮೇಶ ಕುಂಬಾರ, ಶಿಕ್ಷಕರಾದ ಧನಂಜಯ ಕುಲಕರ್ಣಿ, ಅಶೋಕ ಸುಣಧೋಳಿ, ಕೆ.ಎಲ್ ಮೀಶಿ, ಗಜಾನನ ದಾಭೋಳಿ, ಸೈನಿಕರಾಗಿ ಆಯ್ಕೆಯಾಗಿರುವ ಹಾಗೂ ಪ್ರಶಿಶ್ಷಣಾರ್ಥಿಗಳು ಉಪಸ್ಥಿತರಿದ್ದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ