ಮೂಡಲಗಿ : ಮೂಡಲಗಿ ನಗರದ ತಳವಾರ ಓಣಿಯಲ್ಲಿ ಇರುವ 38 ವರ್ಷದ ಮಹಿಳೆಗೆ ಕೊರೋನಾ ಪಾಸಿಟಿವ್ ಕೇಸ್ ಬಂದಿರುವುದರಿoದ ಸಾರ್ವಜನಿಕರ ವಲಯದಲ್ಲಿ ಮಹಿಳೆ ಮಹಾರಾಷ್ಟ್ರದ ಸಂಬoಧಿಕರ ಮದುವೆಗೆ ಹೋಗಿ ಬಂದಿದ್ದಾರೆ ಹಾಗೂ ಆ ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಸುಳ್ಳು ಸುದ್ದಿಗಳು ಹಬ್ಬುತ್ತಿದ್ದಾವೆ ಆ ಮಹಿಳೆ ಟ್ರಾವೆಲ್ ಹಿಸ್ಟರಿ ಸಿಕ್ಕಿಲ್ಲ ಎಂದು ಮೂಡಲಗಿ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಭಾರತಿ ಕೋಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಾರಾಷ್ಟ್ರದ ಸಂಬoಧಿಕರ ಮದುವೆಗೆ ಹೋಗಿ ಬಂದಿದ್ದಾರೆ ಎಂಬ ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿಬರುತ್ತಿರುವ ಹಿನ್ನೆಲೆ ಕೆಲವು ನ್ಯೂಸ್‌ಗಳಲ್ಲಿ ಮಹಾರಾಷ್ಟçದ ನಂಟು ಇದೆ ಎಂಬ ಸುದ್ದಿಗಳು ಬಂದಿದೆ ಆದರಿಂದ ಸಾರ್ವಜನಿಕರು ಯಾವುದೇ ತರನಾದ ಸುಳ್ಳು ಸುದ್ದಿಗಳನ್ನು ಹಬ್ಬಿಸಬಾರದು ಎಂದು ತಿಳಿಸಿದ್ದಾರೆ.
ಕೊರೋನಾ ಪಾಸಿಟಿವ್ ಬಂದಿರುವ ಹಿನ್ನೆಲೆ ತಳವಾರ ಓಣಿ ಹಾಗೂ ಆ ಮಹಿಳಿಗೆ ಉಪಚಾರ ಮಾಡಿದ ನಗರದ ಖಾಸಗಿ ಆಸ್ಪತ್ರೆಗಳಾದ ಬಾಬನ್ನವರ, ಉಪ್ಪಿನ ಆಸ್ಪತ್ರೆಗಳನ್ನು ಸೀಲ್ ಡೌನ್ ಮಾಡಿ, ಆ ಮಹಿಳೆಯ ಮನೆಯಲ್ಲಿ ಇರುವ 10 ಜನರಲ್ಲಿ ಎರಡು, ಮೂರು ವರ್ಷದ 3 ಮಕ್ಕಳು ಇರುವುದರಿಂದ ಕೆಲವರನ್ನು ಹೊಂ ಕ್ವಾರೆಂಟೈನ್ ಮಾಡಿ ಇನ್ನುಳಿದವರನ್ನು ನಗರದ ಬಿಸಿಎಂ ಹಾಸ್ಟೆಲದಲ್ಲಿ ಕ್ವಾರೆಂಟೈನ್ ಮಾಡಲಾಗುವುದು ಮತ್ತು ಖಾಸಗಿ ಆಸ್ಪತ್ರೆಯ ವೈದ್ಯರನ್ನು ಹೊಂ ಕ್ವಾರೆಂಟೈನ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಆ ಮಹಿಳೆಯನ್ನು ಜುಲೈ 15ರಂದು ಮೂಡಲಗಿಯಿಂದ ಗೋಕಾಕ ವರಗೆ ಸರಕಾರಿ ಆಂಬುಲೆನ್ಸ್ ಮೂಲಕ ಕರೆದುಕೊಂಡು ಹೋಗಿದ್ದಾರೆ, ಆದರಿಂದ ಆಂಬುಲೆನ್ಸ್ ಇರುವ ಅಧಿಕಾರಿಗಳನ್ನು ಸಹ ಕ್ವಾರೆಂಟೈನ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.