ಮೂಡಲಗಿ ನಗರದಲ್ಲಿ ಇಂದು 4 ಕೊರೋನಾ ಕೇಸ್ ಪತ್ತೆ; ಜನರಲ್ಲಿ ಹೆಚ್ಚಿದ ಆತಂಕ
ಮೂಡಲಗಿ: ನಗರದ ಲಕ್ಷ್ಮಿ ನಗರದಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ ಕೇಸು ಪತ್ತೆಯಾಗಿದ್ದು ಜನರಲ್ಲಿ ಆತಂಕ ಹೆಚ್ಚಾಗಿದೆ.
51 ವಯಸ್ಸಿನ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು ಆರೋಗ್ಯ ಇಲಾಖೆಯ ಮೂಲಗಳಿಂದ ಅಧಿಕೃತ ಪ್ರಕಟಣೆಯೊಂದೇ ಬಾಕಿ ಉಳಿದಿದೆ.
ಕೊರೋನಾ ಕೇಸುಗಳು ಮೂಡಲಗಿ ನಗರಕ್ಕೆ ಒಂದೊಂದಾಗಿ ಹೆಜ್ಜೆಯಿಡುತ್ತಿದ್ದು
ಇದೇ ರೀತಿಯಾದರೆ ಇನ್ನೂ ಕೇಸುಗಳು ಹೆಚ್ಚಾಗುವ ಸಂಭವವಿದ್ದು ಜನರಲ್ಲಿ ಜಾಗೃತಿಯಾಗಬೇಕಾಗಿದೆ.
ಇವತ್ತು ಪತ್ತೆಯಾದ ಸೋಂಕಿತರ ಮನೆಯ ಸುತ್ತಮುತ್ತ ಸೀಲ್ ಡೌನ್ ಮಾಡುವ ಸಾಧ್ಯತೆ ಇದೆ.
IN MUDALGI Latest Kannada News