ಕುಲಗೋಡ ಮತ್ತೊಂದು ಕೋವಿಡ್-19
ಕುಲಗೋಡ:ಮೂಡಲಗಿ ತಾಲೂಕಿನ ಕುಲಗೋಡ ಗ್ರಾಮ ಬಸ್ ನಿಲ್ದಾಣದ ಹತ್ತಿರದ ಚಿಪ್ಪಲಕಟ್ಟಿ ಓಣಿಯ 28 ವರ್ಷದ ವ್ಯಕ್ತಿಯೊರ್ವನಿಗೆ ಇಂದು ಕರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಗ್ರಾಮದಲ್ಲಿ 4 ದಿನದಲ್ಲಿ ಇಬ್ಬರಿಗೆ ಕರೋನಾ ಪಾಸಿಟಿವ್ ಬಂದಿದ್ದು ಜನರು ಹೆಚ್ಚಿನ ಜಾಗೃತಿ ವಹಿಸುವದು ಅನಿವಾರ್ಯತೆ ಎದುರಾಗಿದೆ.
ಗ್ರಾಮವು ಸುತ್ತ ಮುತ್ತಲಿನ ಹತ್ತಾರು ಗ್ರಾಮಗಳಿಗೆ ಕೇಂದ್ರವಾಗಿದ್ದು ಕರೋನಾ ಕಾಣಿಸಿಕೊಂಡಿದ್ದು ಗ್ರಾಮಸ್ಥರಿಗೆ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಆತಂಕ ಮೂಡಿದೆ.
ಇಂದು ಮುಂಜಾನೆ ಪಾಸಿಟಿವ ದೃಡವಾಗಿದ್ದು ಮನೆ ಹಾಗೂ ಸಂಪೂರ್ಣ ಓಣಿಗೆ ಸಿಲ್ ಡೌನ್ ಮಾಡಿ ಗ್ರಾ.ಪಂ ಸೈನಿಟೈಸರ್ ಸಿಂಪಡಣೆ ಮಾಡಿದರು.
IN MUDALGI Latest Kannada News