ಮೂಡಲಗಿ:ಪ್ರತಿಯೊಬ್ಬ ವ್ಯಕ್ತಿಗೆ ಹುಟ್ಟೂರಿನ ಜನರ ಪ್ರೀತಿ, ಅಭಿಮಾನ ಎಲ್ಲಕ್ಕಿಂತ ದೊಡ್ಡದಾಗಿರುತ್ತದೆ. ರಾಜ್ಯಸಭೆ ಸದಸ್ಯನಾಗಿ ಆಯ್ಕೆಗೊಂಡಿರುವ ಪ್ರಯುಕ್ತ ನನ್ನ ಜನ್ಮಸ್ಥಳ ಕಲ್ಲೋಳಿ ಪಟ್ಟಣದ ವಿವಿಧ ಸಂಘ ಸಂಸ್ಥೆಗಳು ನನ್ನನ್ನು ಸನ್ಮಾನಿಸಿರುವುದು ಎಲ್ಲ ಪ್ರೀತಿಗಿಂತ ಮತ್ತಷ್ಟು ತವರಿನ ಪ್ರೀತಿ, ಅಭಿಮಾನ ಹೆಚ್ಚಿಸಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದ ಶತಮಾನ ಕಂಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯವರಿಂದ ಬುಧವಾರ ಜು-29 ರಂದು ಸನ್ಮಾನ ಸ್ವೀಕರಿಸಿ ಮಾತನಾಡಿ, ಸನ್ಮಾನ ನನ್ನನ್ನು ಮತ್ತಷ್ಟು ಪುಳಕಿತ, ಧನ್ಯತಾಭಾವ ಮೂಡಿಸಿದೆ ಎಂದರು.
ಸಂಘ-ಸಂಸ್ಥೆಗಳ ಗೌರವ ನಮ್ಮ ಸಾಮಾಜಿಕ ಕಾರ್ಯದ ಜವಾಬ್ದಾರಿ ಹೆಚ್ಚಿಸುವುದು, ಗ್ರಾಮೀಣಾಭಿವೃದ್ದಿಯಲ್ಲಿ ಸಕ್ರಿಯವಾಗಿರುವ ಸ್ಥಳೀಯ ಸಂಘ-ಸಂಸ್ಥೆಗಳ ಪಾತ್ರ ಹಿರಿದಾಗಿದೆ. ಸಂಘ-ಸಂಸ್ಥೆಗಳ ಬೆಳವಣಿಗೆ ಹಿನ್ನಲೆಯಲ್ಲಿ ನಮ್ಮ ಹಿರಿಯ ನಾಗರಿಕರ ಪಾತ್ರ ದೊಡ್ಡದಿದೆ. ಅವರ ಮಾರ್ಗದರ್ಶನದಲ್ಲಿ ಸಹಾಯ ಸಹಕಾರ ನೀಡುತ್ತೇನೆಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಭರವಸೆ ನೀಡಿದರು.
ಪಿಕೆಪಿಎಸ್ ಅಧ್ಯಕ್ಷ ಈರಪ್ಪ ಹೆಬ್ಬಾಳ, ಉಪಾಧ್ಯಕ್ಷ ಕೆಂಪವ್ವ ಗೊರೋಶಿ, ನಿರ್ದೆಶಕರಾದ ಬಸವರಾಜ ಬೆಳಕೂಡ, ನೀಲಕಂಠ ಕಪ್ಪಲಗುದ್ದಿ ಬಾಳಪ್ಪ ಕಂಕಣವಾಡಿ, ಬಸವರಾಜ ದಾಸನಾಳ, ಪ್ರಕಾಶ ಕುರಬೇಟ, ಮುಖ್ಯ ಕಾರ್ಯನಿರ್ವಾಹಕ ಬಸವರಾಜ ಬಾಗೇವಾಡಿ, ಸಹಾಯಕ ರಾಜಪ್ಪ ಪಾಲಭಾಂವಿ, ನಾಗಪ್ಪ ಹೆಬ್ಬಾಳ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಸಿಬ್ಬಂದಿ ವರ್ಗ, ಇತರರು ಇದ್ದರು.
