ಪುರಾಣಿಕರು ಸಮಷ್ಟಿ ಬದುಕು ಸಾಧಗಿಸಿದ ಶ್ರೇಷ್ಠ ಕಾದಂಬರಿಕಾರ – ಪ್ರೊ.ಗಂಗಾಧರ ಮಳಗಿ
ಗೋಕಾಕ: ದೀನರ, ಶೋಷಿತರ, ಹಳ್ಳಿಗರ ಬದುಕಿನ ಸೊಗಡನ್ನು ತಮ್ಮ ಸಾಹಿತ್ಯದಲ್ಲಿ ಅರಳಿಸಿದ ಕೃಷ್ಣಮೂರ್ತಿ ಪುರಾಣಿಕರು ಸಮಷ್ಟಿ ಬದುಕು ಸಾಗಿಸಿದವರು ಎಂದು ಗೋಕಾಕದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ. ಗಂಗಾಧರ ಮಳಗಿ ಹೇಳಿದರು.
ಅವರು ಗೋಕಾವಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಕೋವಿಡ್ -19 ಲಾಕ್ಡೌನ್ ಗೂಗಲ್ ಮೀಟಿನಲ್ಲಿನ ಸೆಮಿನಾರ್ ಅಲ್ಲ ವೇಬಿನಾರ್ ವಿಶೇಷ ಉಪನ್ಯಾಸ ಮಾಲಿಕೆ 21ನೇ ಗೋಷ್ಠಿಯಲ್ಲಿ
“ಕಾದಂಬರಿಶ್ರೀ ಕ್ರಷ್ಣಮೂರ್ತಿ ಪುರಾಣಿಕ ” ವಿಷಯ ಕುರಿತು ಉಪನ್ಯಾಸ ನೀಡುತ್ತಾ
ಕಥೆಗಾರ, ಕವಿ, ನಾಟಕ, ಕಾದಂಬರಿಕಾರರಾಗಿ ಗುರುತಿಸಿಕೊಂಡ ಪುರಾಣಿಕರ ಸಾಹಿತ್ಯದಲ್ಲಿ ಹತ್ತು ಹಲವು ಅಭಿವ್ಯಕ್ತಿಯಿದೆ ಎಂದು ಹೇಳಿದರು.
ಕಲಾವಿದ-ಸಾಹಿತಿ ಪ್ರಾ. ಜಯಾನಂದ ಮಾದರ ಸಂಘಟನೆ ಮತ್ತು ಸಂಚಾಲಕತ್ವದಲ್ಲಿ ಮೂಡಿಬಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆನಂದ ಕ್ರಷ್ಣಮೂರ್ತಿ ಪುರಾಣಿಕ ಮಾತನಾಡುತ್ತಾ, ಪುರಾಣಿಕರು ನವೋದಯ ಸಾಹಿತ್ಯದ ಅನೇಕ ಮೊದಲಗಳಿಗೆ ಕಾರಣವಾಗಿದ್ದರು. ಸರಕಾರ ಅವರ ಹೆಸರಿನಲ್ಲಿ ಪ್ರತಿಷ್ಠಾನವನ್ನು ಸ್ಥಾಪಿಸಿ ಅವರ ಸಾಹಿತ್ಯ ಕೃಷಿಗೆ ಗೌರವ ನೀಡಬೇಕೆಂದರು.
ಬೀಳಗಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷ ಶ್ರೀ ಡಿ. ಎಮ್ ಸಾಹುಕಾರ ಮಾತನಾಡಿದರು.