ಹೊಸಕೋಟಿ: ರಾಮದುರ್ಗ ತಾಲೂಕಿನ ಹೊಸಕೋಟಿಯ ಶ್ರೀ ರೇವಣಸಿದ್ದೇಶ್ವರ ವಿದ್ಯಾವರ್ದಕ ಸಂಘದ ಶ್ರೀ ರೇವಣಸಿದ್ಧೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಪ್ರೌಢ ಶಾಲಾ ವಿಭಾಗದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶವನ್ನು ಹೊಂದಿದೆ ಎಂದು ಶಾಲೆಯ ಮುಖ್ಯೋಪಾಧ್ಯಯ ಬಿ.ಪಿ.ಕಟ್ಟಿಮನಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಶಾಲೆಗೆ ಯಶೋಧಾ ಆರ್.ಹಂಪಿಹೊಳಿ ಶೇ.90.72(ಪ್ರಥಮ), ಕಾವ್ಯಾ ಎಲ್.ಸಣ್ಣತಮ್ಮಪ್ಪಗೋಳ ಶೇ.90.40 (ದ್ವಿತೀಯ), ಅನೀತಾ ವ್ಹಿ.ಮಾದರ ಶೇ.87.84(ತೃತೀಯ) ಸ್ಥಾನ ಪಡೆದುಕೊಂಡಿರುವರು.
ಪರೀಕ್ಷೆಯಲ್ಲಿ 4ವಿಧ್ಯಾರ್ಥಿಗಳು ಡಿಸ್ಟಿಂಕ್ಷನ್, 55 ವಿದ್ಯಾರ್ಥಿಗಳು ಪ್ರಥಮ ಧರ್ಜೆಯಲ್ಲಿ ಮತ್ತು 21 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಮುಖ್ಯೋಪಾಧ್ಯಯ ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.