Breaking News
Home / ತಾಲ್ಲೂಕು / ಪತ್ರಿಯೊಂದು ಕುಟುಂಬಗಳಿಗೆ ಮಾಸ್ಕ್ ಹಾಗೂ ವಾರಿಯರ್ಸ್ ಗಳಿಗೆ ಸಾಮಗ್ರಿಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ

ಪತ್ರಿಯೊಂದು ಕುಟುಂಬಗಳಿಗೆ ಮಾಸ್ಕ್ ಹಾಗೂ ವಾರಿಯರ್ಸ್ ಗಳಿಗೆ ಸಾಮಗ್ರಿಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ

Spread the love

ಕಹಾಮ ರಾಜ್ಯಾಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಸೂಚನೆಯಂತೆ ಪತ್ರಿಯೊಂದು ಕುಟುಂಬಗಳಿಗೆ ಮಾಸ್ಕ್ ಹಾಗೂ ವಾರಿಯರ್ಸ್ ಗಳಿಗೆ ಸಾಮಗ್ರಿಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ

ಇತಿಹಾಸದಲ್ಲೇ ಹೊಸ ದಾಖಲೆ ಸೃಷ್ಟಿಸಿದ ಬಾಲಚಂದ್ರ ಜಾರಕಿಹೊಳಿ : ವಾಸಂತಿ ತೇರದಾಳ

ಮೂಡಲಗಿ : ಕೊಡಗೈ ದಾನಿ ಬಾಲಚಂದ್ರ ಅವರನ್ನು ಅರಭಾಂವಿ ಮತಕ್ಷೇತ್ರದ ಶಾಸಕರಾಗಿ ಪಡೆದಿರುವ ನಾವೆಲ್ಲರೂ ಸುದೈವಿಗಳಾಗಿದ್ದೇವೆ. ಈ ಹಿಂದೆ ಪ್ರವಾಹದಿಂದಾಗಿ ಭೀಕರ ಜಲ ಪ್ರಳಯ ಉಂಟಾದ ವೇಳೆಯಲ್ಲಿ ಜನರ ಸುರಕ್ಷತೆಗಾಗಿ ಹಗಲಿರುಳು ದುಡಿದು ಸಾಕಷ್ಟು ಜನರಿಗೆ ಆಸರೆಯಾಗಿ ಸಹಾಯ, ಸಹಕಾರ ನೀಡಿದ ಬಾಲಚಂದ್ರ ಜಾರಕಿಹೊಳಿ ಅವರ ಸಾಮಾಜಿಕ ಕಳಕಳಿಯನ್ನು ಸ್ಮರಿಸಿದರು. ಬಹುಶಃ ಇತಿಹಾಸದಲ್ಲೇ ಇದೊಂದು ಹೊಸ ದಾಖಲೆ ಸೃಷ್ಟಿಸಿದ ಬಾಲಚಂದ್ರ ಜಾರಕಿಹೊಳಿ ಅವರು ವಯಕ್ತಿಕವಾಗಿ ತಮ್ಮ ಕ್ಷೇತ್ರದ ಸರ್ವ ಕುಟುಂಬಗಳಿಗೆ ಮಾಸ್ಕ್ ಹಾಗೂ ಕೊರೋನಾ ವಾರಿರ‍್ಸಗಳಿಗೆ ಸಾಮಗ್ರಿಗಳನ್ನು ನೀಡುತ್ತಿದ್ದಾರೆ ಎಂದು ಜಿಪಂ ಸದಸ್ಯೆ ವಾಸಂತಿ ತೇರದಾಳ ಹೇಳಿದರು

ಸಮೀಪದ ಹಳ್ಳೂರ ಗ್ರಾಮದಲ್ಲಿ ನಡೆದ ಮೂಡಲಗಿ ತಾಲೂಕುಗಳ ಕೋವಿಡ್19 ವಾರಿಯರ್ಸ್ ಗಳಿಗೆ ಹಾಗೂ ಪ್ರತಿಯೊಂದು ಕುಟುಂಬಕ್ಕೆ ಮಾಸ್ಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಾಮಾರಿ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಅರಭಾಂವಿ ಕ್ಷೇತ್ರದ ಎಲ್ಲ ಬಡ ಕುಟುಂಬಗಳು ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಉಚಿತವಾಗಿ ಪತ್ರಿಯೊಂದು ಕುಟುಂಬಗಳಿಗೆ 5 ಸಾವಿರ ಮಾಸ್ಕ್ ಅದೇ ರೀತಿಯಲ್ಲಿ ಗ್ರಾಪಂ ಸಿಬ್ಬಂದಿಗಳಿಗೆ, ಗ್ರಾಮದ ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಆಶಾ ಕಾರ್ಯಕರ್ತರಿಗೆ, ಅಂಗನವಾಡಿ ಕಾರ್ಯಕರ್ತರಿಗೆ ಮಾಸ್ಕ್, ಸಾನಿಟೈಜರ, ಗ್ಲೋಸ್, ಪೇಸ್ ಸಿಲ್ಡ್, ಪತ್ರಿಯೊಂದು ಕಚೇರಿಗೆ ಫುಟ್ ಆಪರೇಟರ್ ಸ್ಟ್ಯಾಂಡ್ ಸ್ಯಾನಿಟೈಸರ ಹಾಗೂ 5 ಲೀಟರ್ ಸಾನಿಟೈಸರ್ ನೀಡಿ ಮಾನವೀಯತೆ ಮೆರೆದಿದ್ದಾರೆ ಎಂದು ಹೇಳಿದರು.

ಎಲ್ಲ ಕುಟುಂಬಗಳನ್ನು ಒಂದೇ ದೃಷ್ಠಿಯಿಂದ ನೋಡಿಕೊಳ್ಳುತ್ತಾ ಕೊರೋನಾ ವೈರಸ್ ಹರಡದಂತೆ ಮುಂಜಾಗೃತ ಕ್ರಮಗಳನ್ನು ಕೈಗೊಂಡು ಜನತೆಗೆ ಹಾಗೂ ವಾರಿಯರ್ಸ್ ಗಳಿಗೆ ಸಾಮಗ್ರಿಗಳನ್ನು ನೀಡಿ ಜನರ ಕಷ್ಟಗಳಿಗೆ ಸ್ಪಂದಿಸಿ ನಿರಂತರವಾಗಿ ಜನತೆಗೊಸ್ಕರ ಕಾರ್ಯ ನಿರ್ವಹಿಸುತ್ತಿರುವ ಶಾಸಕರಿಗೆ ನಮ್ಮೂರಿನ ಜನತೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಹೇಳಿದರು.

ಈ ಭಾಗದ ನೋಡಲ್ ಅಧಿಕಾರಿ ಅಜೀತ ಮನ್ನಿಕೇರಿ ಮಾತನಾಡಿ, ಶಾಸಕರು ಅವರು ಸ್ವಂತ ಹಣದಿಂದ ಕ್ಷೇತ್ರದ ಎಲ್ಲ ಪರಿವಾರಗಳಿಗೆ ಅಗತ್ಯವಿರುವ ಆಹಾರ ಧಾನ್ಯಗಳನ್ನು ಮತ್ತು ಮಾಸ್ಕ್ ನೀಡಿ ಜನರ ಹೀತ ಕಾಯುತ್ತಿರುವ ಶಾಸಕರ ಮಹತ್ಕಾರ್ಯ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದರು. ಮತ್ತೇ ಜನರಿಗೆ ಕೊರೋನಾದಿಂದ ತೊಂದರೆ ಉಂಟಾಗಬಾರದೆoದು ತಮ್ಮ ಸ್ವಂತ ಹಣದಿಂದ ಸಾಕಷ್ಟು ಅನೇಕ ಕೆಸಲಗಳನ್ನು ಮಾಡಿದ್ದಾರೆ ಎಂದು ಹೇಳಿದರು.

ಸೋಂಕಿತರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಸೋಂಕಿರನ್ನು ಆಸ್ಪತ್ರಗೆ ಹಾಗೂ ಸೋಂಕಿನಿoದ ಸಾವನ್ನಪ್ಪಿದ ವ್ಯಕ್ತಿಗಳನ್ನು ಕರೆತರಲು ಶಾಸಕರು ತಮ್ಮ ಸ್ಚಂತ ಹಣದಿಂದ ವಾಹನದ ವ್ಯವಸ್ಥೆಮಾಡಿದ್ದಾರೆ ಹಾಗೂ ಸೋಂಕಿತರಿಗೆ ಆರೋಗ್ಯಕ್ಕೆ ಆಹಾರ ಕಿಟಗಳನ್ನು ನೀಡಿ ಜನರು ಯಾವುದೇ ಕಾರಣಕ್ಕೂ ಭಯಭೀತರಾಗದೆ, ಸುರಕ್ಷಿತವಾಗಿರಬೇಕೆಂದು ಜನರಲ್ಲಿ ಧೈರ್ಯ ತುಂಬುವoತ ಕೆಸಲ ಮಾಡುತ್ತಿದ್ದಾರೆ ಎಂದು ಹೇಳಿದರು.

ಗ್ರಾಮದ ಮುಖಂಡ ಬಸ್ಪಪ್ಪ ಗು ಸಂತಿ ಮಾತನಾಡಿ, ಈ ಸಮಯದಲ್ಲಿ ಅರಭಾಂವಿ ಮತಕ್ಷೇತ್ರದ ಕುಟುಂಬಳಿಗೆ ಮಾಸ್ಕ್ ಹಾಗೂ ವಾರಿರ‍್ಸಗಳಿಗೆ ಸಾಮಗ್ರಿಗಳನ್ನು ಹಂಚುತ್ತಿರುವ ಶಾಸಕರ ಕಾರ್ಯ ಶ್ಲಾಘನೀಯವಾಗಿದೆ, ಬಾಲಚಂದ್ರ ಜಾರಕಿಹೊಳಿ ಅವರು ಕಲಿಯುಗದ ದಾನ ಶೂರ ಕರ್ಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಗ್ರಾಪಂ ಅಧ್ಯಕ್ಷ ಬಸಪ್ಪ ಶಂ ಸಂತಿ, ಹಣಮಂತ ತೇರದಾಳ. ಲಕ್ಷ್ಮಣ ಕತ್ತಿ, ಸುರೇಶ ಡಬ್ಬನ್ನಬರ, ಅಡಿವೇಪ್ಪ ಪಾಲಬಾಂವಿ, ಸುರೇಶ ಕತ್ತಿ, ಮಲ್ಲಪ್ಪ ಛಬ್ಬಿ, ಸಂಗಪ್ಪ ಪಟ್ಟಣಶೆಟ್ಟಿ, ಕುಮಾರ ಲೋಕನ್ನವರ, ಬಸಪ್ಪ ಹಡಪದ, ಗಂಗಪ್ಪ ಅಟಮಟ್ಟಿ, ದುಂಡಪ್ಪ ಕೊಂಗಾಲಿ, ಸದಾಶಿವ ಮಾವರಕರ ಶಿವಪ್ಪ ಅಟಮಟ್ಟಿ, ನಾಗಪ್ಪ ಶಿವಾಪೂರ, ಪ್ರಕಾಶ ನುಚ್ಚುಂಡಿ, ಸಂಗಪ್ಪ ನಾಯಕ್, ಬಾಳಪ್ಪ ನಾಯಕ್, ಶ್ರೀಶೈಲ ಬಾಗೋಡಿ, ಚನ್ನಪ್ಪ ಅಥಣಿ, ಭೀಮಪ್ಪ ಹೊಸಟ್ಟಿ, ಚನ್ನಪ್ಪ ಬೆಳಗಲಿ, ಮಹಾವೀರ ಛಬ್ಬಿ ಹಾಗೂ ಗ್ರಾಪಂ ಅಧಿಕಾರಿಗಳು, ಸಿಬ್ಬಂದಿಗಳು, ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳು, ಕಂದಾಯ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಶಾಸಕರ ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.


Spread the love

About inmudalgi

Check Also

ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ

Spread the love ಮಾರುತಿ ಕೋಳಿ ಅವರಿಗೆ ರಾಷ್ಟ್ರೀಯ ಪರಶುರಾಮ ಪ್ರಶಸ್ತಿ ಪ್ರಧಾನ ಮೂಡಲಗಿ: ಕೆರಳಾದ ಶ್ರೀ ಶಟ್ ಶಾಸ್ತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ