Breaking News
Home / ತಾಲ್ಲೂಕು / ಮಕ್ಕಳ ಉತ್ತಮ ಬೆಳವಣಿಗೆಗೆ ಗರ್ಭಿಣಿಯರು ಅಂಗನವಾಡಿಯಲ್ಲಿ ಕೊಡುವ ಮೊಟ್ಟೆ, ಪೌಷ್ಠಿಕ ಆಹಾರವನ್ನ್ ಸೇವಿಸುವ ಮೂಲಕ ಮಕ್ಕಳು ಸದೃಢತೆ ಹೊಂದಿರಲು ಸಾಧ್ಯ

ಮಕ್ಕಳ ಉತ್ತಮ ಬೆಳವಣಿಗೆಗೆ ಗರ್ಭಿಣಿಯರು ಅಂಗನವಾಡಿಯಲ್ಲಿ ಕೊಡುವ ಮೊಟ್ಟೆ, ಪೌಷ್ಠಿಕ ಆಹಾರವನ್ನ್ ಸೇವಿಸುವ ಮೂಲಕ ಮಕ್ಕಳು ಸದೃಢತೆ ಹೊಂದಿರಲು ಸಾಧ್ಯ

Spread the love

ಮೂಡಲಗಿ: ಮಕ್ಕಳ ಉತ್ತಮ ಬೆಳವಣಿಗೆಗೆ ಗರ್ಭಿಣಿಯರು ಅಂಗನವಾಡಿಯಲ್ಲಿ ಕೊಡುವ ಮೊಟ್ಟೆ, ಪೌಷ್ಠಿಕ ಆಹಾರವನ್ನ್ ಸೇವಿಸುವ ಮೂಲಕ ಮಕ್ಕಳು ಸದೃಢತೆ ಹೊಂದಿರಲು ಸಾಧ್ಯ ಎಂದು ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಆಯ್. ಡಿ ಭೊವಿ ಹೇಳಿದರು.
ಶನಿವಾರ ಸೆ-19 ರಂದು ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಅರಭಾವಿ ಇವುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಪೌಷ್ಠಿಕ ಆಹಾರ ಹಾಗೂ ಪೋಷಣ ಅಭಿಯಾನದ ಮಾಸಾಚರಣೆ ಅಂಗವಾಗಿ 6 ತಿಂಗಳ ಮುಗಿದ ಮಕ್ಕಳ ಅನ್ನ್ ಪ್ರಾಶ್ಯಾಸಣೆ ಹಾಗೂ ಗರ್ಭೀಣಿ ಸ್ರೀಯರಿಗೆ ಸೀಮಂತ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಮಾತೃ ವಂದನಾ ಮಹತ್ವ, ಕೈ ತೋಟ, ಸ್ವಚ್ಛತೆಯ ಮಹತ್ವದ ಕುರಿತು ಗರ್ಭೀಣಿ ತಾಯಂದಿಯರಿಗೆ ತಿಳಿ ಹೇಳಿದರು.
ಅತಿಥಿಗಳಾಗಿದ್ದ ಪಟ್ಟಣ ಪಂಚಾಯತ ಸದಸ್ಯ ರುಕ್ಮವ್ವ ನಾಂವಿ ಮಾತನಾಡಿ ಕೈ ತೋಟ ನಿರ್ಮಿಸಲು ಪ್ರತಿಯೊಬ್ಬರು ಇಚ್ಛಾಶಕ್ತಿ ತೊರಿಸಬೇಕು. ತಮ್ಮ ತಮ್ಮ ಮನೆಯ ಹಿತ್ತಲಿನಲ್ಲಿ ಕೈ ತೋಟ ನಿರ್ಮಿಸಿ ರಾಸಾಯಣ ಮುಕ್ತ ತರಕಾರಿಗಳನ್ನು ಬೆಳೆಸಬೇಕು ಎಂದರಲ್ಲದೇ ಇಂತಹ ಆಹಾರ ತಿನ್ನುವುದರಿಂದ ಪ್ರತಿಯೊಬ್ಬರು ಆರೋಗ್ಯವಂತಾಗಿರಲು ಸಾಧ್ಯ ಎಂದರು.
ಮೇಲ್ವಾಚಾರಕಿ ಚಂಪಾ ಬಿ ಸುಣಗಾರ ಮಾತನಾಡಿ ಪೆÇೀಷಣಾ ಅಭಿಯಾನ ಯೋಜನೆ ಅತ್ಯಂತ ಪ್ರಮಖವಾದ ಯೋಜನೆಯಾಗಿದೆ, ಮಕ್ಕಳ ಬೆಳವಣಿಗೆಗೆ ಮತ್ತು ಏಳಿಗೆಗೆ ಅಪೌಷ್ಠಿಕತೆ ಹೊಂದಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ಆರೋಗ್ಯವಂತ ಮಕ್ಕಳು ಬೆಳೆಯುವಂತೆ ಎಲ್ಲ ಕಾರ್ಯಕರ್ತೆಯರು ಶ್ರಮಿಸಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಎ ಎನ್ ಎಂ ಎಸ್. ಸಿ ಅರಳಿಕಟ್ಟಿ, ಅಂಗನವಾಡಿ ಹಿರಿಯ ಕಾರ್ಯಕರ್ತೆಯಾದ ಅವಕ್ಕ ಬಡಿಗೇರ, ಪ್ರೇಮಾ ಹತಪಾಕಿ, ಕಾಶವ್ವ ಕುಂಬಾರ, ಮಂಗಲಾ ಪತ್ತಾರ, ಆಶಾ ಕಾರ್ಯಕರ್ತೆ ಯಲ್ಲವ್ವ ಇಮಡೇರ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮತ್ತು ಗರ್ಭೀಣಿ ತಾಯಂದಿಯರು ಉಪಸ್ಥಿತರಿದ್ದರು. ದೀಪಾ ಪತ್ತಾರ ಸ್ವಾಗತಿಸಿದರು. ಪರಜಾನ ನದಾಫ್ ಕಾರ್ಯಕ್ರಮ ನಿರೂಪಿಸಿದರು. ಶಿಲ್ಪಾ ಸೋಮನಟ್ಟಿ ವಂದಿಸಿದರು.


Spread the love

About inmudalgi

Check Also

ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ. ಮುಖ್ಯೋಪಾದ್ಯಾಯ — ಚಂದ್ರಕಾಂತ ಬಿ. ಪೂಜೇರಿ

Spread the loveಮೂಡಲಗಿ : ತಂದೆ ತಾಯಿ ಮತ್ತು ಗುರು ಭಕ್ತಿ ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆದುಕೊಂದು ಹೋಗುತ್ತದೆ ವಿದ್ಯಾರ್ಥಿಗಳು ತಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ