ಮೂಡಲಗಿ ಸಮೀಪದ ಮುನ್ಯಾಳದಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ‘ಮನೆ, ಮನೆಗೆ ಪ್ರವಚನ’ದ 4ನೇ ದಿನದ ಕಾರ್ಯಕ್ರಮದಲ್ಲಿ ಸುರಕ್ಷಾ ಪ್ಯಾರಾ ಮೆಡಿಕಲ್ ಸಂಸ್ಥೆಯ ಅಧ್ಯಕ್ಷ ಡಾ. ಎಸ್.ಎಸ್. ಪಾಟೀಲ ಮಾತನಾಡಿದರು
ಡಾ. ಎಸ್.ಎಸ್. ಪಾಟೀಲ ಅಭಿಪ್ರಾಯ
‘ಆಧ್ಯಾತ್ಮಿಕ ಚಿಂತನೆ ಬದುಕುವ ಕಲೆ ಕಲಿಸುತ್ತದೆ’
ಮೂಡಲಗಿ: ‘ಆಧ್ಯಾತ್ಮಿಕ ಚಿಂತನೆಗಳು ಮನುಷ್ಯನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಬದುಕುವ ಕಲೆಯನ್ನು ಕಲಿಸುತ್ತವೆ’ ಎಂದು ಸುರಕ್ಷಾ ಪ್ಯಾರಾ ಮೆಡಿಕಲ್ ಸಂಸ್ಥೆ ಅಧ್ಯಕ್ಷ ಡಾ. ಎಸ್.ಎಸ್. ಪಾಟೀಲ ಹೇಳಿದರು.
ತಾಲ್ಲೂಕಿನ ಖಾನಟ್ಟಿಯಲ್ಲಿ ಅಧಿಕ ಮಾಸದ ನಿಮಿತ್ತವಾಗಿ ಒಂದು ತಿಂಗಳ ಪರ್ಯಂತರವಾಗಿ ಹಮ್ಮಿಕೊಂಡಿರುವ ‘ಮನೆ, ಮನೆಗೆ ಅರುಹಿನ ಅರಮನೆ ಪ್ರವಚನ ಮತ್ತು ಕೋವಿಡ್ ಅರಿವು’ ಅಭಿಯಾನದ 4ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಧಿಕ ಮಾಸದಲ್ಲಿ ಗ್ರಾಮೀಣ ಜನರಲ್ಲಿ ಕೊವಿಡ್ ಮತ್ತು ಆಧ್ಯಾತ್ಮಿಕ ಕುರಿತು ಜಾಗೃತಿ ಮಾಡುತ್ತಿರುವುದು ಶ್ಲಾಘನೀಯ ಕಾರ್ಯಕವಾಗಿದೆ ಎಂದರು.
ಕೊರೊನಾ ಸೋಂಕು ಬಗ್ಗೆ ಎಚ್ಚರವಹಿಸಬೇಕು, ಆರೋಗ್ಯ ನಿಯಮಗಳನ್ನು ಪಾಲಿಸುವ ಜೊತೆಗೆ ರೋಗ ನಿರೋಧಕ ಶಕ್ತಿ ವೃದ್ಧಿಸುವ ಆಹಾರ ಕ್ರಮವನ್ನು ಅಳವಡಿಸಿಕೊಳ್ಳಬೇಕು ಎಂದರು.
ದಲಿತ ಮುಖಂಡ ಪ್ರಕಾಶ ಮಾದರ ಮಾತನಾಡಿ ಸಮುದಾಯಲದಲ್ಲಿ ಸೋಂಕು ಹರಡದಂತೆ ಎಲ್ಲರೂ ಜಾಗೃತಿವಹಿಸುವುದು ಅವಶ್ಯವಿದೆ. ಒಬ್ಬರು ಮಾಡುವ ತಪ್ಪಿನಿಂದ ಇಡೀ ಸಮುದಾಯಕ್ಕೆ ಸೋಂಕು ಹರಡುವ ಅಪಾಯವಿದ್ದು, ಹಾಗೇ ಆಗದಂತೆ ಎಲ್ಲರೂ ಎಚ್ಚರಿಕೆವಹಿಸಬೇಕು ಎಂದರು.
ಆನಂದರಾವ ನಾಯ್ಕ ಮಾತನಾಡಿ ಅಧಿಕ ಮಾಸದಲ್ಲಿ ಗ್ರಾಮದಲ್ಲಿ ಆಧ್ಯಾತ್ಮಿಕ ಕಾರ್ಯಕ್ರಮ ನಡೆಯುತ್ತಿರುವುದು ವಿಶೇಷವಾಗಿದೆ. ಗ್ರಾಮದ ಎಲ್ಲ ಜನರು ಭಾಗವಹಿಸುವ ಮೂಲಕ ಯಶಸ್ಸುಗೊಳಿಸೋಣ ಎಂದರು.
ಪ್ರವಚನಕಾರ ಶರಣ ಲಕ್ಷ್ಮಣ ದೇವರು
ಸಾನ್ನಿಧ್ಯವಹಿಸಿದ್ದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿಗಳು ಆಶೀರ್ವಚನ ನೀಡಿದರು.
ಕಾರ್ತಿಕ ಶಾಸ್ತ್ರೀ, ವೀರಯ್ಯ ಶಾಸ್ತ್ರೀಗಳು ಪ್ರಾರಂಭದಲ್ಲಿ ಮಂತ್ರಘೋಷ ಪಠಣ ಮಾಡಿದರು. ಐಶ್ವರ್ಯ ವಚನ ಗಾಯನ ಮಾಡಿದರು.
ಮಾದೇವ ಮಾಸನ್ನವರ, ಶಿವಲಿಂಗ ಕಪ್ಪಲಗುದ್ದಿ, ಮನೋಹರ ಮಾಸನ್ನವರ, ಬಸಪ್ಪ ಕಪ್ಪಲಗುದ್ದಿ, ರಮೇಶ ಮಾಸನ್ನವರ, ಬಸಪ್ಪ ಸೊಂಟನವರ ಭಾಗವಹಿಸಿದ್ದರು.
ಡಾ. ಕೆ.ಎಚ್. ನಾಗರಾಳ ನಿರೂಪಿಸಿದರು, ಪ್ರವೀಣ ಹುಕ್ಕೇರಿ ವಂದಿಸಿದರು.
Check Also
‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’
Spread the love‘ಮೂಡಲಗಿಯಲ್ಲಿ ನ.23-24 ರಂದು 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ’ ಜನಮನ ಸೇಳೆದ ಕನ್ನಡ ಬುತ್ತಿ ಜಾತ್ರೆ ಕಾರ್ಯಕ್ರಮ …